WhatsApp Down: ಮಧ್ಯರಾತ್ರಿ ವಾಟ್ಸ್​ಆ್ಯಪ್ ಬಳಕೆದಾರರಿಂದ ಏಕಾಏಕಿ ದೂರು: ಬೆಳಗಾಗುವಷ್ಟರಲ್ಲಿ ಎಲ್ಲ ಸಮಸ್ಯೆಗೆ ಪರಿಹಾರ ನೀಡಿದ ಕಂಪನಿ

ವಾಟ್ಸ್​ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಬಳಕೆದಾರರು ಟ್ವಿಟ್ಟರ್ ಅಪ್ಲಿಕೇಶನ್‌ ಮೂಲಕ ದೂರು ನೀಡಿದ್ದಾರೆ. ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದೇ ಇರುವುದರಿಂದ ಈ ಸಮಸ್ಯೆಗಳು ಸರ್ವರ್‌ಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.

WhatsApp Down: ಮಧ್ಯರಾತ್ರಿ ವಾಟ್ಸ್​ಆ್ಯಪ್ ಬಳಕೆದಾರರಿಂದ ಏಕಾಏಕಿ ದೂರು: ಬೆಳಗಾಗುವಷ್ಟರಲ್ಲಿ ಎಲ್ಲ ಸಮಸ್ಯೆಗೆ ಪರಿಹಾರ ನೀಡಿದ ಕಂಪನಿ
WhatsApp Down
Follow us
|

Updated on: Jul 20, 2023 | 1:03 PM

ವಿಶ್ವದ ಅತ್ಯಂತ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಮತ್ತು ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್ ಡೌನ್ (WhatsApp Down) ಆಗಿರುವ ಬಗ್ಗೆ ವರದಿ ಆಗಿದೆ. ಭಾರತ (India), ಇಂಗ್ಲೆಂಡ್ ಸೇರಿದಂತೆ ವಿಶ್ವದ ಅನೇಕ ಕಡೆಗಳನ್ನು ನಿನ್ನೆ ಮಧ್ಯರಾತ್ರಿ ವಾಟ್ಸ್​ಆ್ಯಪ್ (WhatsApp) ಬಳಸಲು ಸಾಧ್ಯವಾಗುತ್ತರಲಿಲ್ಲ ಎಂದು ಬಳಕೆದಾರರು ದೂರಿದ್ದಾರೆ. ಇಂಗ್ಲೆಂಡ್​ನಲ್ಲಿ ನಲ್ಲಿ 177,000 ಬಳಕೆದಾರರಿಗೆ ವಾಟ್ಸ್​ಆ್ಯಪ್ ಸಮಸ್ಯೆ ಎದುರಿಸಿದ್ದಾರೆ. ಅಮೆರಿಕಾರಲ್ಲಿ 43,000 ಬಳಕೆದಾರರು, ಸುಮಾರು 16,000 ವರದಿಗಳು ಭಾರತದಿಂದ ಬಂದಿವೆಯಂತೆ.

ವಾಟ್ಸ್​ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಬಳಕೆದಾರರು ಟ್ವಿಟ್ಟರ್ ಅಪ್ಲಿಕೇಶನ್‌ ಮೂಲಕ ದೂರು ನೀಡಿದ್ದಾರೆ. ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದೇ ಇರುವುದರಿಂದ ಈ ಸಮಸ್ಯೆಗಳು ಸರ್ವರ್‌ಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ. ವಾಟ್ಸ್​ಆ್ಯಪ್ ಡೌನ್ ಆಗಿರುವುದು ತನ್ನ ಗಮನಕ್ಕೆ ಬಂದ ಕೂಡಲೇ ತ್ವರಿತವಾಗಿ ಪ್ರತಿಕ್ರಿಯಿಸಿದ ಕಂಪನಿ, ಸಮಸ್ಯೆಯನ್ನು ಒಪ್ಪಿಕೊಂಡು ಬೆಳಗಾಗುವಷ್ಟರಲ್ಲಿ ಸರಿಪಡಿಸಿದೆ.

Honor MagicPad 13: ಆ್ಯಪಲ್ ಐಪ್ಯಾಡ್​ಗೆ ಸ್ಪರ್ಧೆ ಒಡ್ಡುತ್ತಿದೆ ಹೊಸ ಹಾನರ್ ಮ್ಯಾಜಿಕ್​ಪ್ಯಾಡ್

ಇದನ್ನೂ ಓದಿ
Image
Netflix: ಭಾರತದ ಬಳಕೆದಾರರಿಗೆ ನೆಟ್​ಫ್ಲಿಕ್ಸ್​ನಿಂದ ಶಾಕ್: ಇನ್ನುಂದೆ ಪಾಸ್​ವರ್ಡ್ ಹಂಚಿಕೊಳ್ಳಲು ಸಾಧ್ಯವಿಲ್ಲ
Image
Realme C53: ಭಾರತಕ್ಕೆ ಬಂತು 108MP ಕ್ಯಾಮೆರಾದ ಹೊಸ ರಿಯಲ್ ಮಿ C53 ಫೋನ್: ಬೆಲೆ ಕೇವಲ …
Image
Apple MacBook M3: ಬರುತ್ತಿದೆ ಹೊಸ ಸರಣಿಯ ಆ್ಯಪಲ್ ಮ್ಯಾಕ್​ಬುಕ್
Image
Infinix GT 10 Pro: ನಥಿಂಗ್ ಫೋನ್ ವಿನ್ಯಾಸ ಕಾಪಿ ಮಾಡಿತೇ ಇನ್ಫಿನಿಕ್ಸ್ ಫೋನ್?

ಆನ್‌ಲೈನ್ ಮಾನಿಟರಿಂಗ್ ಪ್ಲಾಟ್‌ಫಾರ್ಮ್ Downdetector.com ಪ್ರಕಾರ, ತಡರಾತ್ರಿ 1:25 ಕ್ಕೆ ವಾಟ್ಸ್​ಆ್ಯಪ್ ಡೌನ್ ಆಗಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಾಟ್ಸ್​ಆ್ಯಪ್ ಈ ಸಮಸ್ಯೆಯನ್ನು ಬಗೆಹರಿಸಿದೆ. ವರದಿಗಳ ಪ್ರಕಾರ, 61 ಪ್ರತಿಶತ ಬಳಕೆದಾರರು ಮೆಸೇಜ್ ಕಳುಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ. 35 ಪ್ರತಿಶತ ಬಳಕೆದಾರರು ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಡೆಸ್ಕ್‌ಟಾಪ್ ಆವೃತ್ತಿ ಮತ್ತು ವೆಬ್ ಆವೃತ್ತಿಯಲ್ಲೂ ಈ ಸಮಸ್ಯೆ ಕಂಡುಬಂದಿತ್ತು.

ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ವಾಟ್ಸ್​ಆ್ಯಪ್ ಡೌನ್ ಆಗಿತ್ತು. ವಾಟ್ಸ್​ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದ ತಕ್ಷಣ ಬಳಕೆದಾರರು ಟ್ವಿಟ್ಟರ್​ಗೆ ಬಂದು ದೂರಿದ್ದಾರೆ. ಒಬ್ಬ ಬಳಕೆದಾರರು ಅಧಿಕೃತ ವಾಟ್ಸ್​ಆ್ಯಪ್ ಅಕೌಂಟ್ ಅನ್ನು ಟ್ಯಾಗ್ ಮಾಡಿ, “ಭಾರತದಲ್ಲಿ ಬೆಳಗಾಗುವ ಮೊದಲು ಇದನ್ನು ಸರಿಪಡಿಸಿ, ಶುಭೋದಯ ಮೆಸೇಜ್ ಕಳುಹಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.. ಮತ್ತೊಬ್ಬರು, “ವಾಟ್ಸ್​ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರಷ್ಟು ಬೇಗ ಸರಿಪಡಿಸಿ,” ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ