Flipkart Big Saving Days Sale: ಫ್ಲಿಪ್ಕಾರ್ಟ್ನಲ್ಲಿ ಶುರುವಾಗಿದೆ ಬಿಗ್ ಸೇವಿಂಗ್ ಡೇಸ್ ಸೇಲ್: ಈ ಬಂಪರ್ ಆಫರ್ ಮಿಸ್ ಮಾಡ್ಬೇಡಿ
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಪ್ರಸಿದ್ಧ 5ಜಿ ಬೆಂಬಲ ಪಡೆದುಕೊಂಡಿರುವ ಮೊಬೈಲ್ಗಳು ಅತಿ ಕಡಿಮೆ ದರಕ್ಕೆ ಸೇಲ್ ಆಗುತ್ತಿದೆ.
ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಮೇಳಗಳ ಹಬ್ಬ ಶುರುವಾಗಿದೆ. ಅತ್ತ ಅಮೆಜಾನ್ನಲ್ಲಿ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ (Amazon Great Freedom Festival sale) ನಡೆಯುತ್ತಿದೆ. ಹೀಗಿರುವಾಗ ಇತ್ತ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ (Flipkart Big Saving Days Sale) ಹಮ್ಮಿಕೊಂಡಿದೆ. ಇಂದು ಈ ಮೇಳಕ್ಕೆ ಚಾಲನೆ ದೊರಕಿದ್ದು ಆಗಸ್ಟ್ 9 ರ ವರೆಗೆ ನಡೆಯಲಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳ (Smartphones) ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಪ್ರಸಿದ್ಧ 5ಜಿ ಬೆಂಬಲ ಪಡೆದುಕೊಂಡಿರುವ ಮೊಬೈಲ್ಗಳು ಅತಿ ಕಡಿಮೆ ದರಕ್ಕೆ ಸೇಲ್ ಆಗುತ್ತಿದೆ. ಇಲ್ಲಿದೆ ನೋಡಿ ಡಿಸ್ಕೌಂಟ್ ಪಡೆದುಕೊಂಡಿರುವ ಫೋನುಗಳ ಪಟ್ಟಿ.
ಆ್ಯಪಲ್ ಐಫೋನ್ 14:
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಆ್ಯಪಲ್ ಐಫೋನ್ 14 ಮೂಲಬೆಲೆ 79,900 ರೂ. ಆಗಿದೆ. ಆದರೀಗ ಈ ಫೋನ್ ಮೇಲೆ ಶೇ. 12 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಈ ಫೋನ್ ಸದ್ಯ 69,999 ರೂ. ಗೆ ಸೇಲ್ ಆಗುತ್ತಿದೆ. ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ಇದು 6.1-ಇಂಚಿನ ಸೂಪರ್ ರೆಟಿನಾ XDR ಡಿಸ್ ಪ್ಲೇಯೊಂದಿಗೆ ಬರುತ್ತದೆ. ಕ್ಯಾಮೆರಾ ಕಾರ್ಯಕ್ಷಮತೆಗಾಗಿ, ಐಫೋನ್ 14 ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದೆ. ಇದು 12MP ಪ್ರಾಥಮಿಕ ಲೆನ್ಸ್ 12MP ಅಲ್ಟ್ರಾ ವೈಡ್ ಲೆನ್ಸ್ ಅಳವಡಿಸಲಾಗಿದೆ.
ಆ್ಯಪಲ್ ಐಫೋನ್ 14 ಪ್ಲಸ್:
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ, ಆ್ಯಪಲ್ ಐಫೋನ್ 14 ಪ್ಲಸ್ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದರ ಮೂಲಬೆಲೆ 99,900 ರೂ. ಆಗಿದೆ. ಆದರೀಗ ಈ ಫೋನ್ ಮೇಲೆ ಶೇ. 18 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಈ ಫೋನ್ ಸದ್ಯ 72,999 ರೂ. ಗೆ ಸೇಲ್ ಆಗುತ್ತಿದೆ. ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. ಐಫೋನ್ 14 ಪ್ಲಸ್ನಲ್ಲಿ 6.7 ಇಂಚಿನ ಸೂಪರ್ ರೆಟಿನಾ ಎಕ್ಸ್ಡಿಆರ್ ಡಿಸ್ ಪ್ಲೇ ಒದೆ. ಹಿಂಭಾಗ 12 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಮುಂಭಾಗ ಸೆಲ್ಫಿಗಾಗಿ ಕೂಡ 12 ಮೆಗಾ ಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S22+:
ಈ ಐಫೋನ್‌ಗಳ ಜೊತೆಗೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ S22+ ಊಹಿಸಲಾಗದ ದರಕ್ಕೆ ಸಿಗುತ್ತಿದೆ. ಇದರ ಮೂಲಬೆಲೆ 1,01,999 ರೂ., ಆದರೀಗ ಈ ಫೋನ್ ಕೇವಲ 59,999 ರೂ. ಗೆ ಸೇಲ್ ಆಗುತ್ತಿದೆ. ಉಚಿತ ಡೆಲಿವರಿ ಆಯ್ಕೆ ಕೂಡ ಇದ್ದು 35,600 ರೂ. ವರೆಗೆ ಎಕ್ಸ್ಚೇಂಜ್ ಆಫರ್ ಲಭ್ಯವಿದೆ. ಅದೇ ರೀತಿ, ಪಿಕ್ಸೆಲ್ 6a, ಸ್ಯಾಮ್‌ಸಂಗ್ ಗ್ಯಾಲಕ್ಸಿ Z Flip 3 ನಂತಹ ಇತರ ಫೋನ್‌ಗಳು ಸಹ ಮಾರಾಟದ ಸಮಯದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ