AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Chalo ಸಿಂಘು ಗಡಿ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ​ ಸೋಂಕು

ಗುಂಪುಗುಂಪಾಗಿ ಪ್ರತಿಭಟನೆಗೆ ಇಳಿದಿರುವ ರೈತರನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Delhi Chalo ಸಿಂಘು ಗಡಿ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳಿಗೆ ಕೊರೊನಾ​ ಸೋಂಕು
ಸಿಂಘು ಗಡಿಯ ಬಳಿ ನಡೆಯುತ್ತಿರುವ ಪ್ರತಿಭಟನೆಯ ಒಂದು ನೋಟ
Skanda
| Edited By: |

Updated on: Dec 11, 2020 | 2:09 PM

Share

ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದ್ದಾರೆ. ಈ ನಡುವೆ ಸಿಂಘು ಗಡಿಯ ಬಳಿ ರೈತರ ಪ್ರತಿಭಟನೆಯ ಮೇಲೆ ನಿಗಾ ವಹಿಸಲು ನೇಮಕಗೊಂಡಿದ್ದ ಇಬ್ಬರು IPS ಅಧಿಕಾರಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಒಂದೆಡೆ ಗುಂಪುಗುಂಪಾಗಿ ಪ್ರತಿಭಟನೆಗೆ ಇಳಿದಿರುವ ರೈತರನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆಯೇ ಅಧಿಕಾರಿಗಳಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕಿಗೆ ತುತ್ತಾದ ಅಧಿಕಾರಿ DCP ಗೌರವ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಘನಶ್ಯಾಮ್​ ಬನ್ಸಾಲ್ ಅವರನ್ನು ಹೋಮ್​ ಐಸೋಲೇಶನ್​ಗೆ ಒಳಪಡಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸದ್ಯ ರೈತರು ದೊಡ್ಡ ಸಂಖ್ಯೆಯಲ್ಲಿ ನೆರೆದಿರುವುದರಿಂದ ಕೊರೊನಾ ವೇಗವಾಗಿ ಹಬ್ಬುವ ಅಪಾಯವೂ ಇದೆ. ಒಂದುವೇಳೆ, ಪ್ರತಿಭಟನಾ ನಿರತರಲ್ಲಿ ಸೋಂಕು ಕಾಣಿಸಿಕೊಂಡರೆ ನಿಯಂತ್ರಿಸುವುದು ಹೇಗೆ ಎನ್ನುವುದು ಅಧಿಕಾರಿಗಳಿಗೆ ದೊಡ್ಡ ಚಿಂತೆಯಾಗಿದೆ.

ರೈತರ ಮೇಲೆ FIR ದಾಖಲು ಈ ನಡುವೆ, ಸಿಂಘು ಪ್ರಾಂತ್ಯದ ಬಳಿ ಗಡಿ ನುಗ್ಗಲು ಯತ್ನಿಸಿದ ರೈತರ ಮೇಲೆ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ FIR ದಾಖಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪುಗುಂಪಾಗಿ ನುಗ್ಗಿದ ರೈತರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.

ರೈತ ಹೋರಾಟ ಕಡೆಗಣಿಸಿದರೆ ಜನಾಂದೋಲನ ನಡೆಸುವುದಾಗಿ ಎಚ್ಚರಿಕೆ ನೀಡಿದ ಅಣ್ಣಾ ಹಜಾರೆ