ಜಮ್ಮು ಕಾಶ್ಮೀರದ ಬದ್ಗಾಮ್​ನಲ್ಲಿ ಇಬ್ಬರು ಎಲ್​ಇಟಿ ಉಗ್ರರ ಬಂಧನ

| Updated By: ಸುಷ್ಮಾ ಚಕ್ರೆ

Updated on: Mar 28, 2022 | 5:41 PM

ಉಗ್ರರ ಬಳಿಯಿಂದ ಚೈನೀಸ್ ಪಿಸ್ತೂಲ್, ಎರಡು ಪಿಸ್ತೂಲ್ ಮ್ಯಾಗಜೀನ್‌ಗಳು, 12 ಪಿಸ್ತೂಲ್ ಗುಂಡುಗಳು ಮತ್ತು 32 ಎಕೆ-47 ಬಂದೂಕುಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಕಾಶ್ಮೀರದ ಬದ್ಗಾಮ್​ನಲ್ಲಿ ಇಬ್ಬರು ಎಲ್​ಇಟಿ ಉಗ್ರರ ಬಂಧನ
ಶ್ರೀನಗರದಲ್ಲಿ ಪೊಲೀಸರ ಗಸ್ತು (ಸಂಗ್ರಹ ಚಿತ್ರ)
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಇಂದು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. “ಪೊಲೀಸರು ಇತರೆ ಭದ್ರತಾ ಪಡೆಗಳೊಂದಿಗೆ ಬದ್ಗಾಮ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯೊಂದಿಗೆ (LeT) ಸಂಬಂಧ ಹೊಂದಿರುವ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಅವರಿಂದ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಬಂಧನಕ್ಕೊಳಗಾಗಿರುವ ಉಗ್ರರನ್ನು ಬದ್ಗಾಮ್‌ನ ಸುನ್ನೆರ್‌ಗುಂಡ್ ಪ್ರದೇಶದಿಂದ ಬಂಧಿಸಲಾಗಿದೆ. ಅವರನ್ನು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಿವಾಸಿಗಳಾದ ವಸೀಮ್ ಅಹ್ಮದ್ ಗನೈ ಮತ್ತು ಇಕ್ಬಾಲ್ ಅಶ್ರಫ್ ಶೇಖ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಉಗ್ರರ ಬಳಿಯಿಂದ ಚೈನೀಸ್ ಪಿಸ್ತೂಲ್, ಎರಡು ಪಿಸ್ತೂಲ್ ಮ್ಯಾಗಜೀನ್‌ಗಳು, 12 ಪಿಸ್ತೂಲ್ ಗುಂಡುಗಳು ಮತ್ತು 32 ಎಕೆ-47 ಬಂದೂಕುಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶ್ರೀನಗರದಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ; ಮುಂದುವರಿದ ಕಾರ್ಯಾಚರಣೆ

Terrorist Encounter: ಕಾಶ್ಮೀರದ ಆವಂತಿಪೊರಾದಲ್ಲಿ ಮತ್ತೊಂದು ಎನ್​ಕೌಂಟರ್; ಒಟ್ಟು 36 ಉಗ್ರರ ಹತ್ಯೆ