ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗೆ ಇಬ್ಬರು ಪುರುಷರ ನಿಗೂಢ ಸಾವು

ನೊಯ್ಡಾದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಇಬ್ಬರು ವ್ಯಕ್ತಿಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅವರಿಬ್ಬರೂ ಗಾಜಿಯಾಬಾದ್ ನಿವಾಸಿಗಳು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗೆ ಇಬ್ಬರು ಪುರುಷರ ನಿಗೂಢ ಸಾವು
Death

Updated on: Aug 04, 2025 | 6:43 PM

ನೊಯ್ಡಾ, ಆಗಸ್ಟ್ 4: ಉತ್ತರ ಪ್ರದೇಶದ ನೊಯ್ಡಾದಲ್ಲಿ (Noida) ನಡೆದ ಆತಂಕಕಾರಿ ಘಟನೆಯೊಂದರಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಇದು ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಈ ವಿಷಯ ತಿಳಿದ ಕಡಲೆ ತನಿಖೆ ನಡೆಸಿದ ಪೊಲೀಸರು ಅವರಿಬ್ಬರೂ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಿದ್ದಾರೆ. ಮೃತರನ್ನು ರಾಮ್‌ಗೋಪಾಲ್ ಶರ್ಮಾ ಅವರ ಮಗ 27 ವರ್ಷದ ಸಚಿನ್ ಮತ್ತು ಟುಕಿ ರಾಮ್ ಅವರ ಮಗ 50 ವರ್ಷದ ಲಕ್ಷ್ಮಿ ಶಂಕರ್ ಎಂದು ಗುರುತಿಸಲಾಗಿದೆ. ಇಬ್ಬರೂ ಗಾಜಿಯಾಬಾದ್ ನಿವಾಸಿಗಳು.

ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಒಡಿಶಾ: ವ್ಯಕ್ತಿಯ ಖಾಸಗಿ ಅಂಗವನ್ನು ಕತ್ತರಿಸಿ ಹತ್ಯೆ ಮಾಡಿ, ಅಣೆಕಟ್ಟಿಗೆ ಎಸೆದ ಜನ

“ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಅವರು ವಾಹನದೊಳಗೆ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿರುವಂತೆ ತೋರುತ್ತದೆ. ಗಾಳಿಯ ಕೊರತೆ ಮತ್ತು ಕಾರಿನೊಳಗೆ ಕಿಟಕಿ ಹಾಕಿಕೊಂಡು ದೀರ್ಘಕಾಲ ಕುಳಿತಿದ್ದ ಕಾರಣದಿಂದಾಗಿ ಅವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿರಬಹುದು” ಎಂದು ತನಿಖೆಯಲ್ಲಿ ತೊಡಗಿರುವ ಹಿರಿಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: ಗರ್ಭಿಣಿ ಹೆಂಡತಿಯನ್ನು ಇರಿದು ಕೊಂದು, ಶವದ ಪಕ್ಕದಲ್ಲೇ ಪೊಲೀಸರಿಗೆ ಕಾದು ಕೂತ ಗಂಡ!

ಪೊಲೀಸರು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ತಲುಪಿದರು. ಅವರು ಬಂದಾಗ ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ವಿಧಿವಿಜ್ಞಾನ ತಂಡವೂ ಘಟನಾ ಸ್ಥಳವನ್ನು ಪರಿಶೀಲಿಸಿತು. ಪಂಚನಾಮ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:38 pm, Mon, 4 August 25