AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣ ರೀತಿಯ ಹೈ ಪ್ರೊಫೈಲ್ ಅಪರಾಧಿಗಳಿಗೆ ಜೈಲಿನಲ್ಲಿ ವಿಐಪಿ ಸೌಲಭ್ಯ ಸಿಗುತ್ತಾ? ಕೈದಿಗಳ ನಂಬರ್ ನಿರ್ಧರಿಸೋದು ಹೇಗೆ?

ಮನೆಕೆಲಸದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ಜೆಡಿಎಸ್ ನಾಯಕ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹಾಗಾದರೆ, ಪ್ರಜ್ವಲ್ ರೀತಿಯ ಹೈ ಪ್ರೊಫೈಲ್ ಇರುವ ಕೈದಿಗಳಿಗೆ ಜೈಲಿನೊಳಗೆ ವಿಐಪಿ ಸೌಲಭ್ಯಗಳು ಸಿಗುತ್ತವೆಯೇ? ದೇಶದಲ್ಲಿ ಎಷ್ಟು ರೀತಿಯ ಜೈಲುಗಳಿವೆ? ಕೈದಿಗಳ ಸಂಖ್ಯೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಎಂಬಿತ್ಯಾದಿ ಕುತೂಹಲಗಳಿಗೆ ಉತ್ತರ ಇಲ್ಲಿದೆ.

ಪ್ರಜ್ವಲ್ ರೇವಣ್ಣ ರೀತಿಯ ಹೈ ಪ್ರೊಫೈಲ್ ಅಪರಾಧಿಗಳಿಗೆ ಜೈಲಿನಲ್ಲಿ ವಿಐಪಿ ಸೌಲಭ್ಯ ಸಿಗುತ್ತಾ? ಕೈದಿಗಳ ನಂಬರ್ ನಿರ್ಧರಿಸೋದು ಹೇಗೆ?
Prajwal Revanna
ಸುಷ್ಮಾ ಚಕ್ರೆ
|

Updated on: Aug 04, 2025 | 4:09 PM

Share

ಬೆಂಗಳೂರು, ಆಗಸ್ಟ್ 4: ಕೆ.ಆರ್ ನಗರದಲ್ಲಿ ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಅಲ್ಲದೆ, 5 ಲಕ್ಷ ದಂಡ ಹಾಗೂ ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರವನ್ನು ಕೂಡ ಘೋಷಿಸಿದೆ. ಕರ್ನಾಟಕದ (Karnataka) ಪ್ರಮುಖ ರಾಜಕೀಯ ಕುಟುಂಬವಾದ ದೇವೇಗೌಡರ (HD Deve Gowda) ಮೊಮ್ಮಗನಾಗಿರುವುದರಿಂದ ಪ್ರಜ್ವಲ್ ರೇವಣ್ಣ ಅವರ ಈ ಪ್ರಕರಣವು ಭಾರೀ ಸುದ್ದಿಯಲ್ಲಿದೆ. ಕೋರ್ಟ್ ಶಿಕ್ಷೆ ವಿಧಿಸಿದರೂ ಹಣದ ಬಲದಿಂದ ಜೈಲಿನಲ್ಲಿ ಪ್ರಜ್ವಲ್ ಆರಾಮಾಗಿ ಕಾಲ ಕಳೆಯುತ್ತಾರೆ ಎಂದು ಜನರ ನಡುವೆ ಚರ್ಚೆಗಳೂ ಶುರುವಾಗಿವೆ. ಹಾಗಾದರೆ, ನಿಜಕ್ಕೂ ಜೈಲಿನಲ್ಲಿ ಈ ರೀತಿಯ ಹೈ ಪ್ರೊಫೈಲ್ ಕೈದಿಗಳಿಗೆ ವಿಶೇಷ ಸೌಲಭ್ಯಗಳು ಸಿಗುತ್ತವೆಯೇ? ಯಾವ ರೀತಿಯ ಕೈದಿಯನ್ನು ಯಾವ ರೀತಿಯ ಜೈಲಿನಲ್ಲಿ ಇರಿಸಲಾಗುತ್ತದೆ? ಕೈದಿಯ ಸಂಖ್ಯೆಯನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳಲ್ಲಿ ಕರ್ನಾಟಕ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಜೈಲಿಗೆ ಕಳುಹಿಸಲಾಗಿದೆ. ಪ್ರಜ್ವಲ್ ರೇವಣ್ಣ ಜೆಡಿಎಸ್ ಸಂಸದರಾಗಿದ್ದವರು. ಅವರ ತಂದೆ ಶಾಸಕರು. ಅವರ ಚಿಕ್ಕಪ್ಪ ಎಚ್​ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಅಜ್ಜ ದೇವೇಗೌಡ ಮಾಜಿ ಪ್ರಧಾನಿಯಾಗಿದ್ದವರು. ಹೀಗಾಗಿ, ರಾಜಕೀಯವಾಗಿ ಬಹಳ ಪ್ರಭಾವಿ ಕುಟುಂಬದ ಪ್ರಜ್ವಲ್ ರೇವಣ್ಣ ನಿಜವಾಗಿಯೂ ಜೈಲಿನಲ್ಲಿ ಮಾಮೂಲಿ ಕೈದಿಯಂತೆ ಶಿಕ್ಷೆ ಅನುಭವಿಸುತ್ತಾರಾ? ಎಂಬ ಅನುಮಾನಗಳು ಮೂಡುವುದು ಸಹಜ.

ಭಾರತದಲ್ಲಿನ ಜೈಲು ವ್ಯವಸ್ಥೆಯು ಅಪರಾಧಿಗಳನ್ನು ಶಿಕ್ಷಿಸಲು ಮಾತ್ರವಲ್ಲದೆ, ಅವರ ಮನಸನ್ನು ಪರಿವರತಿಸಿ, ಸಮಾಜಕ್ಕೆ ಮರುಸೇರ್ಪಡೆಗೊಳಿಸಲು ಪ್ರಯತ್ನಿಸುತ್ತದೆ. ಭಾರತದಲ್ಲಿ ಸಂಸದರು ಮತ್ತು ಶಾಸಕರನ್ನು ಜೈಲಿನಲ್ಲಿಡಲು ಯಾವುದೇ ಪ್ರತ್ಯೇಕ ಅಥವಾ ವಿಶೇಷ ನಿಯಮಗಳಿಲ್ಲ. ಅವರನ್ನು ಜೈಲು ಕೈಪಿಡಿ ಮತ್ತು ಕಾನೂನಿನ ಪ್ರಕಾರವೇ ಇರಿಸಬೇಕು. ರಾಜ್ಯವಾರು ಜೈಲು ಕೈಪಿಡಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಆದರೆ, ಮೂಲ ನಿಯಮಗಳು ಮತ್ತು ಸೌಲಭ್ಯಗಳು ಬಹುತೇಕ ಒಂದೇ ಆಗಿರುತ್ತವೆ. ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದ ಪ್ರಕಾರ ಜನಸಾಮಾನ್ಯರು ಮತ್ತು ಜನಪ್ರತಿನಿಧಿಗಳು ಅಥವಾ ಪ್ರಭಾವಿಗಳು ಎಲ್ಲರೂ ಕಾನೂನಿನ ಮುಂದೆ ಸಮಾನರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ಮಾಡಿದ ಅಧಿಕಾರಿಗಳಿಗೆ ಬಂಪರ್ ಗಿಫ್ಟ್ ಘೋಷಿಸಿದ ಗೃಹ ಸಚಿವ

ಭಾರತದಲ್ಲಿ ಎಷ್ಟು ರೀತಿಯ ಜೈಲುಗಳಿವೆ?:

ಕೇಂದ್ರ ಕಾರಾಗೃಹ:

ಇವು ಅತ್ಯಂತ ದೊಡ್ಡ ಮತ್ತು ಅತ್ಯಂತ ಹೆಚ್ಚಿನ ಭದ್ರತೆಯ ಕಾರಾಗೃಹಗಳಾಗಿದ್ದು, 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆ ಅನುಭವಿಸಿದ ಕೈದಿಗಳನ್ನು ಸಾಮಾನ್ಯವಾಗಿ ಇಲ್ಲಿ ಇರಿಸಲಾಗುತ್ತದೆ. ಕೈದಿಗಳಿಗೆ ಸುಧಾರಣಾ ಚಟುವಟಿಕೆಗಳು, ಶಿಕ್ಷಣ ಮತ್ತು ವೃತ್ತಿಪರ ತರಬೇತಿಗೂ ಅವಕಾಶವಿದೆ. ಅಂತಹ ಕಾರಾಗೃಹಗಳ ಸಂಖ್ಯೆ ದೇಶದಲ್ಲಿ ಬಹಳ ಕಡಿಮೆ.

ಜಿಲ್ಲಾ ಕಾರಾಗೃಹ:

ಹೆಸರೇ ಹೇಳುವಂತೆ ಬಹುತೇಕ ಪ್ರತಿಯೊಂದು ಜಿಲ್ಲೆಯಲ್ಲೂ ಜಿಲ್ಲಾ ಕಾರಾಗೃಹಗಳನ್ನು ಸ್ಥಾಪಿಸಲಾಗಿದೆ. ವಿಚಾರಣಾಧೀನ ಕೈದಿಗಳನ್ನು ಇಲ್ಲಿ ಇರಿಸಲಾಗುತ್ತದೆ. ಆದರೆ ಅಗತ್ಯವಿದ್ದರೆ, ಕಡಿಮೆ ಶಿಕ್ಷೆ ವಿಧಿಸಲಾದ ಕೈದಿಗಳನ್ನು ಇಲ್ಲಿ ಇರಿಸಲಾಗುತ್ತದೆ.

ಉಪ ಜೈಲುಗಳು:

ಇವು ಚಿಕ್ಕ ಜೈಲುಗಳಾಗಿದ್ದು, ಇವುಗಳನ್ನು ತಾಲೂಕು ಮಟ್ಟದಲ್ಲಿ ನಿರ್ಮಿಸಲಾಗಿದೆ. ಆದರೆ, ಈಗ ಇವುಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಏಕೆಂದರೆ ಈಗ ಜಿಲ್ಲೆಗಳು ಚಿಕ್ಕದಾಗಲು ಪ್ರಾರಂಭಿಸಿವೆ. ಬ್ರಿಟಿಷರ ಕಾಲದಲ್ಲಿ ಮತ್ತು ಅವರ ನಿರ್ಗಮನದ ನಂತರವೂ ತಾಲೂಕು ಮಟ್ಟದಲ್ಲಿ ಜೈಲುಗಳು ಇದ್ದವು. ಇಲ್ಲಿ ಸಾಮಾನ್ಯವಾಗಿ ವಿಚಾರಣಾಧೀನ ಕೈದಿಗಳನ್ನು ಇರಿಸಲಾಗುತ್ತದೆ. ಆದರೆ ಅಗತ್ಯವಿದ್ದರೆ, ಅಪರಾಧಿಗಳನ್ನು ಸಹ ಇರಿಸಬಹುದು.

ತೆರೆದ ಜೈಲು:

ಇಲ್ಲಿ ಕಡಿಮೆ ಅಪಾಯದ, ಉತ್ತಮ ನಡವಳಿಕೆಯ ಕೈದಿಗಳನ್ನು ಇರಿಸಲಾಗುತ್ತದೆ. ಅವರನ್ನು ಕೃಷಿ, ನಿರ್ಮಾಣ ಇತ್ಯಾದಿ ಕೆಲಸಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಇವು ತೆರೆದ ಸ್ಥಳಗಳಾಗಿದ್ದು, ಇಲ್ಲಿ ಭದ್ರತೆಯ ಪ್ರಮಾಣ ಕಡಿಮೆ ಇರುತ್ತದೆ.

ವಿಶೇಷ ಜೈಲು:

ಇವು ಭಯೋತ್ಪಾದಕರು, ಸಂಘಟಿತ ಅಪರಾಧಿಗಳು ಅಥವಾ ಹೈ ಪ್ರೊಫೈಲ್ ಕೈದಿಗಳಂತಹ ವಿಶೇಷ ಅಪರಾಧಿಗಳಿಗೆ ಮಾತ್ರ ಇರುವ ಜೈಲುಗಳಾಗಿವೆ. ಇಲ್ಲಿ ವಿಶೇಷ ಭದ್ರತಾ ವ್ಯವಸ್ಥೆಗಳಿವೆ. ಕೆಲವೊಮ್ಮೆ ಕೆಲವು ದಿನಗಳವರೆಗೆ ವಿಶೇಷ ಜೈಲುಗಳನ್ನು ನಿರ್ಮಿಸಲಾಗುತ್ತದೆ. ಉದಾಹರಣೆಗೆ, ಒಂದು ದೊಡ್ಡ ಚಳುವಳಿ ನಡೆಯುತ್ತದೆ. ಆಗ ಜೈಲಿನಲ್ಲಿ ಸ್ಥಳವಿಲ್ಲದಿದ್ದರೆ ಯಾವುದಾದರೂ ಶಾಲೆ, ಧರ್ಮಶಾಲೆಯನ್ನು ಜೈಲಾಗಿ ಪರಿವರ್ತಿಸುವ ಹಕ್ಕು ಸರ್ಕಾರಕ್ಕೆ ಇದೆ.

ಇದನ್ನೂ ಓದಿ: ಬದಲಾಗಲಿದೆ ಪ್ರಜ್ವಲ್ ರೇವಣ್ಣ ಜೀವನ ಶೈಲಿ: ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ ಫಿಕ್ಸ್

ಬಾಲ ಸುಧಾರಣಾ ಗೃಹಗಳು:

ಬಾಲ ಸುಧಾರಣಾ ಗೃಹಗಳು ಕೂಡ ಜೈಲುಗಳೇ ಆಗಿದ್ದರೂ, ಇಲ್ಲಿ ಬಾಲಾಪರಾಧಿಗಳನ್ನು ಇರಿಸಲಾಗಿರುವುದರಿಂದ ಇವುಗಳನ್ನು ಸುಧಾರಣಾ ಗೃಹಗಳು ಎಂದು ಕರೆಯಲಾಗುತ್ತದೆ. ಇದು ಬಾಲಾಪರಾಧಿಗಳ ಶಿಕ್ಷಣ ಮತ್ತು ತರಬೇತಿಗೆ ಒತ್ತು ನೀಡಲಾಗುತ್ತದೆ. ಬಾಲ ಸುಧಾರಣಾ ಗೃಹಗಳಲ್ಲಿ ಇರಿಸಲಾಗಿರುವ ಕೈದಿಗಳ ಗುರುತು ಮತ್ತು ಫೋಟೋಗಳನ್ನು ಪ್ರಕಟಿಸದಂತೆ ಸೂಚನೆಗಳಿವೆ. ಏಕೆಂದರೆ ಹದಿಹರೆಯದಲ್ಲಿ ಮಾಡಿದ ತಪ್ಪುಗಳು ಹೆಚ್ಚಾಗಿ ಉದ್ದೇಶಪೂರ್ವಕವಲ್ಲ ಎಂಬ ನಂಬಿಕೆಯಿದೆ. ಆದ್ದರಿಂದ ವ್ಯಕ್ತಿಗೆ ಸುಧಾರಣೆಗೆ ಪೂರ್ಣ ಅವಕಾಶ ನೀಡಬೇಕು ಎಂದು ಈ ಬಾಲ ಸುಧಾರಣಾ ಗೃಹದಲ್ಲಿ ಬಾಲಾಪರಾಧಿಗಳನ್ನು ಇರಿಸಲಾಗುತ್ತದೆ.

ಯಾವ ರೀತಿಯ ಕೈದಿಯನ್ನು ಎಲ್ಲಿ ಇರಿಸಲಾಗುತ್ತದೆ?:

ಯಾವ ರೀತಿಯ ಕೈದಿಯನ್ನು ಯಾವ ಜೈಲಿನಲ್ಲಿ ಇರಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಇದು ಅನೇಕ ವಿಷಯಗಳನ್ನು ಅವಲಂಬಿಸಿರುತ್ತದೆ. ಇವುಗಳಲ್ಲಿ ಶಿಕ್ಷೆಯ ಅವಧಿ, ಅಪರಾಧಿಯ ಹಿಂದಿನ ಕೃತ್ಯಗಳು, ಅವನ ನಡವಳಿಕೆ ಇತ್ಯಾದಿಗಳು ಕೈದಿಯನ್ನು ಯಾವ ಜೈಲಿನಲ್ಲಿ ಇರಿಸಬೇಕೆಂಬುದನ್ನು ನಿರ್ಧರಿಸುತ್ತದೆ.

– ಗಂಭೀರ ಅಪರಾಧಗಳಲ್ಲಿ (ಕೊಲೆ, ಅತ್ಯಾಚಾರ, ಭಯೋತ್ಪಾದನೆ) ಶಿಕ್ಷೆಗೊಳಗಾದವರನ್ನು ಕೇಂದ್ರ ಕಾರಾಗೃಹದಲ್ಲಿ ಇರಿಸಬಹುದು.

– ದೀರ್ಘ ಶಿಕ್ಷೆ ವಿಧಿಸಲಾದ ಕೈದಿಗಳನ್ನು ಕೇಂದ್ರ ಕಾರಾಗೃಹದಲ್ಲಿ ಇರಿಸಬಹುದು.

– ಕಡಿಮೆ ಶಿಕ್ಷೆ ವಿಧಿಸಲಾದ ಅಥವಾ ವಿಚಾರಣಾಧೀನ ಕೈದಿಗಳನ್ನು ಜಿಲ್ಲಾ ಅಥವಾ ಉಪ ಕಾರಾಗೃಹದಲ್ಲಿ ಇರಿಸಬಹುದು.

– ಬಾಲಾಪರಾಧಿಗಳು ಎಷ್ಟೇ ಗಂಭೀರ ಅಪರಾಧ ಎಸಗಿದ್ದರೂ, ಅವರನ್ನು ಬಾಲಾಪರಾಧಿ ಸುಧಾರಣಾ ಗೃಹಗಳಲ್ಲಿ ಇರಿಸಲಾಗುವುದು.

– ಉತ್ತಮ ನಡತೆ ಹೊಂದಿರುವ ಕೈದಿಗಳನ್ನು ತೆರೆದ ಜೈಲಿಗೆ ವರ್ಗಾಯಿಸಬಹುದು. ಅಂದರೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಅವರ ನಡವಳಿಕೆ ಉತ್ತಮವಾಗಿದ್ದರೆ ಈ ಸೌಲಭ್ಯವನ್ನು ಪಡೆಯಬಹುದು.

– ಅಪಾಯಕಾರಿ ಕೈದಿಗಳನ್ನು ವಿಶೇಷ ಜೈಲುಗಳಲ್ಲಿ ಅಥವಾ ಹೆಚ್ಚಿನ ಭದ್ರತಾ ವಾರ್ಡ್‌ಗಳಲ್ಲಿ ಇರಿಸಲಾಗುತ್ತದೆ.

ಕೈದಿಯ ಸಂಖ್ಯೆಯನ್ನು ಹೇಗೆ ನೀಡಲಾಗುತ್ತದೆ?

ಅಪರಾಧಿ ಜೈಲಿಗೆ ಹೋದಾಗ ಅವರಿಗೆ ಒಂದು ವಿಶಿಷ್ಟವಾದ ಕೈದಿ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಸಂಖ್ಯೆಯನ್ನು ಸಾಮಾನ್ಯವಾಗಿ ಈ ಕೆಳಗಿನ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಜೈಲು ಸಂಹಿತೆ: ಪ್ರತಿಯೊಂದು ಜೈಲಿಗೂ ಒಂದು ವಿಶಿಷ್ಟ ಸಂಕೇತವಿರುತ್ತದೆ.

ವರ್ಷ: ಬಂಧಿತನನ್ನು ದಾಖಲಿಸಿದ ವರ್ಷ.

ಕ್ರಮ ಸಂಖ್ಯೆ: ಆ ವರ್ಷದಲ್ಲಿ ದಾಖಲಾದ ಕೈದಿಯ ಕ್ರಮ ಸಂಖ್ಯೆ.

ಉದಾಹರಣೆಗೆ, ಕೈದಿಯ ಸಂಖ್ಯೆ DL/2025/123 ಆಗಿದ್ದರೆ, ಅದು ದೆಹಲಿ ಜೈಲು, ವರ್ಷ 2025 ಮತ್ತು 123ನೇ ಕೈದಿ ಎಂದರ್ಥ. ಆದರೆ, ಸಾಮಾನ್ಯವಾಗಿ ಕೈದಿಯ ಸಮವಸ್ತ್ರದಲ್ಲಿ ಕೊನೆಯ ಸಂಖ್ಯೆಯನ್ನು ಮಾತ್ರ ಬರೆಯಲಾಗುತ್ತದೆ.

ಹೈ ಪ್ರೊಫೈಲ್ ಪ್ರಕರಣಗಳಲ್ಲಿ ಕೈದಿಗಳಿಗೆ ಯಾವ ವಿಶೇಷ ಸೌಲಭ್ಯ ಸಿಗುತ್ತವೆ?:

ಜೈಲು ಕೈಪಿಡಿಯ ಪ್ರಕಾರ ಎಲ್ಲಾ ಕೈದಿಗಳನ್ನು ಸಮಾನವಾಗಿ ಪರಿಗಣಿಸಬೇಕು. ಆದರೆ ಪ್ರಾಯೋಗಿಕವಾಗಿ ಹೈ ಪ್ರೊಫೈಲ್ ಅಥವಾ ವಿಐಪಿ ಕೈದಿಗಳಿಗೆ ಕೆಲವು ಹೆಚ್ಚುವರಿ ಸೌಲಭ್ಯಗಳು ಸಿಗುತ್ತವೆ. ಅವರ ಜೀವಕ್ಕೆ ಅಪಾಯವಾಗದಂತೆ ಅವರನ್ನು ಸಾಮಾನ್ಯ ಕೈದಿಗಳಿಂದ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಉತ್ತಮ ವೈದ್ಯಕೀಯ ಸೌಲಭ್ಯಗಳು ಮತ್ತು ಖಾಸಗಿ ವೈದ್ಯರನ್ನು ಹೊಂದಲು ಅನುಮತಿಯನ್ನು ಸಹ ನೀಡಲಾಗುತ್ತದೆ. ಕೆಲವೊಮ್ಮೆ ವಿಶೇಷ ಆಹಾರವನ್ನು ಕೂಡ ನೀಡಲು ಅನುಮತಿ ನೀಡಲಾಗುತ್ತದೆ. ಅವರು ತಮ್ಮ ಕುಟುಂಬ ಅಥವಾ ವಕೀಲರನ್ನು ಬೇಕೆನಿಸಿದಾಗ ಭೇಟಿ ಮಾಡಲು ಅನುಮತಿ ನೀಡಲಾಗುವುದು. ಅವರಿಗೆ ಬೇರೆ ಕೈದಿಗಳಿಗಿಂತ ಸ್ವಚ್ಛ ಮತ್ತು ಕಡಿಮೆ ಜನದಟ್ಟಣೆಯ ಬ್ಯಾರಕ್‌ಗಳಂತಹ ಸೌಲಭ್ಯಗಳನ್ನು ನೀಡಲಾಗುವುದು.

ಆದರೆ, ಜೈಲಿನಲ್ಲಿರುವ ಯಾವುದೇ ಕೈದಿಗೆ ಕಾನೂನನ್ನು ಮೀರಿದ ಯಾವುದೇ ಸೌಲಭ್ಯವನ್ನು ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ಪದೇ ಪದೇ ಸ್ಪಷ್ಟಪಡಿಸಿವೆ. ಒಂದುವೇಳೆ, ಆ ರೀತಿ ವಿಶೇಷ ಸೌಲಭ್ಯ ನೀಡಿದರೆ ಅದನ್ನು ಜೈಲು ಆಡಳಿತದ ನಿರ್ಲಕ್ಷ್ಯ ಅಥವಾ ಭ್ರಷ್ಟಾಚಾರದ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿಯೂ, ಜೈಲು ಅಧಿಕಾರಿಗಳು ವಿವಿಧ ಒತ್ತಡಗಳಿಂದ ವಿಶೇಷ ಕೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕಾಗಿ ಕೆಲವು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ, ವರ್ಗಾವಣೆ ಮಾಡಲಾಗಿದೆ. ಇನ್ನು ಕೆಲವರು ಕೇಸ್​ಗಳನ್ನು ಕೂಡ ಎದುರಿಸಬೇಕಾಯಿತು. ಕೆಲವು ಜೈಲುಗಳಲ್ಲಿ ಲಂಚ ಕೂಡ ನಡೆಯುತ್ತದೆ. ಆದರೆ, ಇದೆಲ್ಲವೂ ಕಾನೂನು ವ್ಯಾಪ್ತಿಯನ್ನು ಮೀರಿ ನಡೆಯುವಂಥದ್ದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ