AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದಲಾಗಲಿದೆ ಪ್ರಜ್ವಲ್ ರೇವಣ್ಣ ಜೀವನ ಶೈಲಿ: ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ ಫಿಕ್ಸ್

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಂದು ಅತ್ಯಾಚಾರ ಕೃತ್ಯವೆಸಗಿ ಇಂದು ಕಣ್ಣೀರಿಟ್ಟ. ಕೈ ಮುಗಿದು ಬೇಡಿಕೊಂಡು ಕನಿಷ್ಠ ಶಿಕ್ಷೆಗಾಗಿ ಪರಿತಪಿಸಿದ. ತಂದೆ ಪೂಜೆ ಫಲಿಸಲಿಲ್ಲ, ತಾಯಿ ಪ್ರಾರ್ಥನೆಯೂ ಕೈಗೂಡಲಿಲ್ಲ. 14 ತಿಂಗಳ ಸೆರೆವಾಸ, 7 ತಿಂಗಳ ಕಾನೂನು ಹೋರಾಟ, 4 ತಿಂಗಳ ಸುಧೀರ್ಘ ವಿಚಾರಣೆಯ ನಂತರ ಜನಪ್ರತಿನಿಧಿಗಳ ವಿಶೇಷ ಕೋರ್ಟ್​, ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಸೆರೆವಾಸ ಶಿಕ್ಷೆ ವಿಧಿಸಿದೆ. ಹೀಗಾಗಿ ಇಂದಿನಿಂದ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಲಿದೆ.

ಬದಲಾಗಲಿದೆ ಪ್ರಜ್ವಲ್ ರೇವಣ್ಣ ಜೀವನ ಶೈಲಿ: ಜೈಲಿನೊಳಗೆ 8 ಗಂಟೆ ಕೆಲಸ, ಕೂಲಿ ಫಿಕ್ಸ್
Prajwal Revanna
ರಮೇಶ್ ಬಿ. ಜವಳಗೇರಾ
|

Updated on:Aug 03, 2025 | 10:31 AM

Share

ಬೆಂಗಳೂರು, (ಆಗಸ್​ 03): ಕೆ.ಆರ್.ನಗರ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ (Prajwal Revanna) ಜೀವನ ಶೈಲಿ ಇಂದಿನಿಂದ ಬದಲಾಗಲಿದೆ. ಕಳೆದ 14 ತಿಂಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದ್ದು, ನಿನ್ನೆಯಿಂದಲೇ ಅಧಿಕೃತವಾಗಿ ಸಜಾಬಂಧಿ ಖೈದಿಯಾಗಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣಗೆ 15528 ನಂಬರ್ ನೀಡಲಾಗಿದ್ದು, ಇಂದು (ಆಗಸ್ಟ್ 02) ಪ್ರಜ್ವಲ್ ರೇವಣ್ಣಗೆ ಜೈಲು ಸಿಬ್ಬಂದಿ ಬಿಳಿ ವಸ್ತ್ರ ನೀಡಲಿದ್ದು, ಜೈಲು ನಿಯಮಾವಳಿ ಅನುಸಾರ ಜೈಲು ಆಧೀಕ್ಷಕರು ನೀಡುವ ಕೆಲಸ ಮಾಡಿಕೊಂಡಿರಬೇಕು. ಕ

ಸಜಾಬಂಧಿ ಖೈದಿಗಳ ಬ್ಯಾರಕ್ ಗೆ ಪ್ರಜ್ವಲ್ ಅವರನ್ನ ಶಿಫ್ಟ್ ಮಾಡಲಾಗಿದೆ. ಸಜಾಬಂಧಿಯಾಗಿ ತಡರಾತ್ರಿವರೆಗೂ ನಿದ್ದೆ ಮಾಡದ ಪ್ರಜ್ವಲ್ ರೇವಣ್ಣ, ಇಂದು ಬೆಳಗ್ಗೆ ಎದ್ದು ನಿತ್ಯಕರ್ಮ ಮುಗಿಸಿ ಸುಮ್ಮನೆ ಕುಳಿತುಕೊಂಡಿದ್ದಾರೆ. ಇನ್ನು ಜೈಲು ಸಿಬ್ಬಂದಿ, ಪ್ರಜ್ವಲ್ ರೇವಣ್ಣನಿಗೆ ಅವಲಕ್ಕಿ ಉಪ್ಪಿಟ್ಟು ತಿಂಡಿ ನೀಡಿದ್ದಾರೆ. ಕಡ್ಡಾಯ ಜೈಲಿನೊಳಗೆ 8 ಗಂಟೆ ಕೆಲಸ ಮಾಡಬೇಕು. ಜೊತೆಗೆ ಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿ ಖೈದಿಗಳ ನಿಯಮಗಳನ್ನ ಚಾಚು ತಪ್ಪದೆ ಪಾಲಿಸಬೇಕು. ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು, ಕರಕುಶಲ ವಸ್ತು, ಮರಗೆಲಸ ಸೇರಿ ಯಾವುದರೂ ಒಂದು ಕೆಲಸ ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ:  Life Imprisonment to Prajwal Revanna: ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್

ಪ್ರಜ್ವಲ್ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ಪಾವತಿ ಮಾಡಲಾಗುತ್ತೆ. ಮೊದಲು ಒಂದು ವರ್ಷ ಕೌಶಲ್ಯ ರಹಿತ ಅಂತ 524 ರೂಪಾಯಿ ಸಂಬಳ ನೀಡಲಾಗುತ್ತೆ. ಆಮೇಲೆ ಅರೆ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತೆ. ಹೀಗೆ ಸಜಾಬಂಧಿ ಖೈದಿಯಾದ ಕಾರಣ ಪ್ರಜ್ವಲ್ ಜೀವನ ಶೈಲಿ ಸಂಪೂರ್ಣ ಬದಲಾಗಲಿದೆ.

ಜೀವಾವಧಿಗಿಂತ ಜೀವನಪರ್ಯಂತ ಶಿಕ್ಷೆ ದೊಡ್ಡದು

ಇತ್ತೀಚಿನ ವರ್ಷದಲ್ಲಿ ರಾಜಕಾರಣಿಯೊಬ್ಬನಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗರಿಷ್ಠ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ. ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ, ಜೀವನಪರ್ಯಂತ ಸೆರೆವಾಸದ ಶಿಕ್ಷೆ ನೀಡಿ ಕೋರ್ಟ್ ತೀರ್ಪು ನೀಡಿದೆ. ಪ್ರಜ್ವಲ್ ರೇವಣ್ಣಗೆ 11ಲಕ್ಷದ 60ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡದಲ್ಲಿ 11 ಲಕ್ಷದ 25 ಸಾವಿರ ರೂಪಾಯಿಯನ್ನ ಸಂತ್ರಸ್ತೆಗೆ ನೀಡುವಂತೆ ಆದೇಶ ಹೊರಡಿಸಿದೆ. ಐಪಿಸಿ ಸೆಕ್ಷನ್ 376(2)(K) ಅಡಿಯಲ್ಲಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ 5ಲಕ್ಷ ದಂಡ ವಿಧಿಸಲಾಗಿದೆ. ಹಾಗೆಯೇ ಮತ್ತೊಂದು ಐಪಿಸಿ ಸೆಕ್ಷನ್ 376(2)(N)ರ ಅಡಿಯಲ್ಲಿ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದಡಿ ಜೀವನಪರ್ಯಂತ ಜೈಲು ವಾಸ ಶಿಕ್ಷೆ ವಿಧಿಸಿ, 5ಲಕ್ಷ ದಂಡ ಹಾಕಲಾಗಿದೆ. ಅಲ್ಲದೇ, ಐಪಿಸಿ ಸೆಕ್ಷನ್ 354(B)ಅಡಿಯಲ್ಲಿ 7ವರ್ಷ ಸೆರೆವಾಸ ಮತ್ತು 50 ಸಾವಿರ ದಂಡ ಹಾಕಿದೆ. ಇನ್ನೂ IPC 354(A), IPC 354(c), IPC 201, ಐಟಿ ಕಾಯ್ದೆ ಸೆ.66(E) ರ ಅಡಿ 3ವರ್ಷ ಸೆರೆವಾಸ ಮತ್ತು 25 ಸಾವಿರ ದಂಡ ಹಾಕಲಾಗಿದೆ. IPC 506ರಡಿ 2 ವರ್ಷ ಸೆರೆವಾಸ ಮತ್ತು 10 ಸಾವಿರ ದಂಡ ವಿಧಿಸಿದೆ.

ಪ್ರಜ್ವಲ್ ರೇವಣ್ಣ ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ಅನುಭವಿಸಬೇಕಾಗಿದೆ. ಜೀವಾವಧಿಗಿಂತ ಜೀವನಪರ್ಯಂತ ಶಿಕ್ಷೆ ದೊಡ್ಡದು. ಐಪಿಸಿ ಸೆಕ್ಷನ್‌ 376(2) (n)ರಡಿ, ಓರ್ವ ಮಹಿಳೆ ಮೇಲಿನ ಪದೇ ಪದೇ ಅತ್ಯಾಚಾರ ಗಂಭೀರ ಅಪರಾಧವೆಂದು ಪರಿಗಣಿಸಲಾಗಿದ್ದು, ಕೋರ್ಟ್ ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆ ಅಂದ್ರೆ, 14 ವರ್ಷದ ಬಳಿಕ ಕ್ಷಮಾದಾನ ಕೊಡಬಹುದು. ಕ್ಷಮಾದಾನ ಕೊಡುವಂತಹ ಅಧಿಕಾರ ಸರ್ಕಾರ ಮತ್ತು ರಾಜ್ಯಪಾಲರಿಗಿದೆ. ಆದ್ರೆ, ಕೋರ್ಟ್ ಜೀವನಪರ್ಯಂತವೆಂದು ಆದೇಶದಲ್ಲಿ ಉಲ್ಲೇಖವಿರೋದ್ರಿಂದ ಪ್ರಜ್ವಲ್ ಜೀವನಪೂರ್ತಿ ಸೆರೆವಾಸದಲ್ಲೇ ಇರಬೇಕು. ಅಪರಾಧಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ಇಂದಿನಿಂದ ಆರಂಭವಾಗಲಿದೆ. ಇಲ್ಲಿವರೆಗೆ ಅನುಭವಿಸಿದ 14 ತಿಂಗಳ ಜೈಲುವಾಸ ಅನ್ವಯಿಸಲ್ಲ.

ಯಾಕಂದ್ರೆ, ಕೆ.ಆರ್ ನಗರ ರೇಪ್ ಕೇಸ್‌ನಲ್ಲಿ ಪ್ರಜ್ವಲ್ ಬಂಧನವಾಗಿಲ್ಲ. ಕೇವಲ ಬಾಡಿ ವಾರಂಟ್ ಮೇಲೆ ಪ್ರಜ್ವಲ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಹೀಗಾಗಿ ಜೀವ ಇರೋವರೆಗೂ, ಬದುಕಿರೋವರೆಗೂ ಪ್ರಜ್ವಲ್ ಜೈಲಿನಲ್ಲೇ ಇರಬೇಕಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 am, Sun, 3 August 25

Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!