ಒಡಿಶಾ: ವ್ಯಕ್ತಿಯ ಖಾಸಗಿ ಅಂಗವನ್ನು ಕತ್ತರಿಸಿ ಹತ್ಯೆ ಮಾಡಿ, ಅಣೆಕಟ್ಟಿಗೆ ಎಸೆದ ಜನ
ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಗ್ರಾಮಸ್ಥರು ಆ ವ್ಯಕ್ತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆತನ ಜನನಾಂಗವನ್ನು ಕತ್ತರಿಸಿ, ನಂತರ ಶವವನ್ನು ಹತ್ತಿರದ ಹರಭಂಗಿ ಅಣೆಕಟ್ಟಿಗೆ ಎಸೆದಿದ್ದಾರೆ. ಭಾನುವಾರ ಬೆಳಗ್ಗೆ ಜಲಾಶಯದಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎರಡು ವಾರಗಳ ಹಿಂದೆ ನಡೆದ ಮಹಿಳೆಯೊಬ್ಬರ ಸಾವಿಗೆ ಈತ ಮಾಡಿದ್ದ ಮಾಟಮಂತ್ರವೇ ಕಾರಣ ಎಂದು ಗ್ರಾಮಸ್ಥರು ಶಂಕಿಸಿದ್ದರು.

ಒಡಿಶಾ, ಆಗಸ್ಟ್ 04: ವ್ಯಕ್ತಿಯ ಖಾಸಗಿ ಅಂಗವನ್ನು ಕತ್ತರಿಸಿ ಕೊಲೆ ಮಾಡಿ ಅಣೆಕಟ್ಟಿಗೆ ಎಸೆದಿರುವ ಘಟನೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ. ಮಾಟಮಂತ್ರ(Witchcraft )ದ ಶಂಕೆ ವ್ಯಕ್ತವಾಗಿದೆ. ಗುಂಪೊಂದು 35 ವರ್ಷದ ವ್ಯಕ್ತಿಯನ್ನು ಕೊಂದು ಅವರ ಖಾಸಗಿ ಭಾಗಗಳನ್ನು ವಿರೂಪಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಗ್ರಾಮಸ್ಥರು ಆ ವ್ಯಕ್ತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆತನ ಜನನಾಂಗವನ್ನು ಕತ್ತರಿಸಿ, ನಂತರ ಶವವನ್ನು ಹತ್ತಿರದ ಹರಭಂಗಿ ಅಣೆಕಟ್ಟಿಗೆ ಎಸೆದಿದ್ದಾರೆ. ಭಾನುವಾರ ಬೆಳಗ್ಗೆ ಜಲಾಶಯದಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಎರಡು ವಾರಗಳ ಹಿಂದೆ ನಡೆದ ಮಹಿಳೆಯೊಬ್ಬರ ಸಾವಿಗೆ ಈತ ಮಾಡಿದ್ದ ಮಾಟಮಂತ್ರವೇ ಕಾರಣ ಎಂದು ಗ್ರಾಮಸ್ಥರು ಶಂಕಿಸಿದ್ದರು. ಮೋಹನ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮಲಸಪದಾರ್ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಮತ್ತಷ್ಟು ಓದಿ: ಮಹಾರಾಷ್ಟ್ರ: ಭಕ್ತರಿಗೆ ಕೊಳಕು ಚಪ್ಪಲಿಯಿಂದ ಒದ್ದು, ತನ್ನ ಮೂತ್ರ ಕುಡಿಸುವ ನಕಲಿ ಬಾಬಾ
ಜಿ ಉದಯಗಿರಿಯ ಉಪವಿಭಾಗೀಯ ಪೊಲೀಸ್ ಅಧಿಕಾರಿ ಸುರೇಶ್ ಚಂದ್ರ ತ್ರಿಪಾಠಿ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ 14 ಗ್ರಾಮಸ್ಥರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಸ್ಥಳೀಯರಿಂದ ಬೆದರಿಕೆ ಬಂದ ನಂತರ ಆ ವ್ಯಕ್ತಿ ತನ್ನ ಕುಟುಂಬದೊಂದಿಗೆ ಗ್ರಾಮವನ್ನು ತೊರೆದು ಗಂಜಾಂ ಜಿಲ್ಲೆಯ ತನ್ನ ಮಾವನ ಮನೆಗೆ ಹೋಗಿದ್ದ. ತನ್ನ ಜಾನುವಾರುಗಳನ್ನು ನೋಡಿಕೊಳ್ಳಲು ತನ್ನ ಅತ್ತಿಗೆ ಬಳಿ ಕೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆ ವ್ಯಕ್ತಿ ಶನಿವಾರ ತನ್ನ ದನ ಮತ್ತು ಮೇಕೆಗಳನ್ನು ತೆಗೆದುಕೊಂಡು ಹೋಗಲು ಗ್ರಾಮಕ್ಕೆ ಹಿಂತಿರುಗಿದ್ದಾಗ ಆತನನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




