AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೇಜಸ್ವಿ ಬಿಟ್ಟ ಬಾಣ ಅವರಿಗೇ ಮುಳುವಾಯ್ತಾ? ಎರಡು ಮತದಾರರ ಚೀಟಿ ಹೊಂದಿದ್ದಕ್ಕೆ ಚುನಾವಣಾ ಆಯೋಗದಿಂದ ನೋಟಿಸ್

ಎರಡು ಮತದಾರರ ಗುರುತಿನ ಚೀಟಿಗಳನ್ನು (ಎಪಿಕ್ ಸಂಖ್ಯೆಗಳು) ಹೊಂದಿದ್ದಕ್ಕಾಗಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಈ ವಿಷಯದ ಬಗ್ಗೆ ತೇಜಸ್ವಿ ಯಾದವ್ ಅವರಿಂದ ಸ್ಪಷ್ಟೀಕರಣವನ್ನು ಕೋರಿರುವ ಆಯೋಗವು ನಿಗದಿತ ಸಮಯದ ಮಿತಿಯೊಳಗೆ ಲಿಖಿತ ಉತ್ತರವನ್ನು ನೀಡುವಂತೆ ಕೇಳಿದೆ.ಆಯೋಗದ ವೆಬ್‌ಸೈಟ್‌ನಲ್ಲಿ ಇಪಿಐಸಿ ನಂಬರ್‌ ನಮೂದಿಸಿ ಯಾದವ್‌ ತಮ್ಮ ವಿವರಗಳನ್ನು ಪರಿಶೀಲಿಸಲು ಮುಂದಾಗಿದ್ದರು. ಆದರೆ, ವೆಬ್‌ಸೈಟ್‌ನಲ್ಲಿ ಯಾವುದೇ ವಿವರ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ನೋಡಿ ನನ್ನ ಹೆಸರು, ವಿವರವೇ ಸಿಗುತ್ತಿಲ್ಲ. ನಾನು ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಲಿ’ ಎಂದಿದ್ದರು.

ತೇಜಸ್ವಿ ಬಿಟ್ಟ ಬಾಣ ಅವರಿಗೇ ಮುಳುವಾಯ್ತಾ? ಎರಡು ಮತದಾರರ ಚೀಟಿ ಹೊಂದಿದ್ದಕ್ಕೆ ಚುನಾವಣಾ ಆಯೋಗದಿಂದ ನೋಟಿಸ್
ತೇಜಸ್ವಿ ಯಾದವ್
ನಯನಾ ರಾಜೀವ್
|

Updated on: Aug 04, 2025 | 9:23 AM

Share

ಪಾಟ್ನಾ, ಆಗಸ್ಟ್​ 04: ತೇಜಸ್ವಿ ಯಾದವ್(Tejashwi Yadav) ಬಿಟ್ಟ ಬಾಣ ಅವರಿಗೇ ಮುಳುವಾದಂತಿದೆ. ಮತದಾರರ ಕರಡು ಪಟ್ಟಿಯಲ್ಲಿ ನನ್ನ ಹೆಸರಿಲ್ಲ ಎಂದು ಆರೋಪಿಸಿದ್ದ ಯಾದವ್​​ಗೆ ಎರಡು ಮತದಾರರ ಗುರುತಿನ ಚೀಟಿ ಹೊಂದಿದ್ದಕ್ಕಾಗಿ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಆಯೋಗದ ವೆಬ್‌ಸೈಟ್‌ನಲ್ಲಿ ಇಪಿಐಸಿ ನಂಬರ್‌ ನಮೂದಿಸಿ ಯಾದವ್‌ ತಮ್ಮ ವಿವರಗಳನ್ನು ಪರಿಶೀಲಿಸಲು ಮುಂದಾಗಿದ್ದರು. ಆದರೆ, ವೆಬ್‌ಸೈಟ್‌ನಲ್ಲಿ ಯಾವುದೇ ವಿವರ ಲಭ್ಯವಾಗಿಲ್ಲ ಎಂದು ಆರೋಪಿಸಿದ್ದರು. ಈಗಾಗಲೇ ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಅಪಸ್ವರವಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ನೋಡಿ ನನ್ನ ಹೆಸರು, ವಿವರವೇ ಸಿಗುತ್ತಿಲ್ಲ. ನಾನು ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಲಿ ಎಂದಿದ್ದರು. ಬಿಹಾರ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರ ಹೆಸರಿನಲ್ಲಿ ಎರಡು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದರೆಂದು ವರದಿಯಾಗಿದ್ದು, ಅವರೀಗ ವಿವಾದದ ಸುಳಿಗೆ ಸಿಲುಕಿದ್ದಾರೆ. ತೇಜಸ್ವಿ ಯಾದವ್​ಗೆ ನೀಡಲಾದ ಎರಡನೆ ಗುರುತುಚೀಟಿಯು ನಕಲಿ ಎಂದು ದೃಢಪಡಿಸಲು ತನಿಖೆ ನಡೆಸುವಂತೆ ಚುನಾವಣಾ ಆಯೋಗವು ಆದೇಶಿಸಿದೆ.

ಅವರ ಬಳಿಯಿರುವ ಚುನಾವಣಾ ಗುರುತುಚೀಟಿ (ಎಪಿಕ್)ಯನ್ನು ತನಗೆ ಹಸ್ತಾಂತರಿಸುವಂತೆಯೂ ಸೂಚಿಸಿದೆ. ಎರಡನೇ ಮತದಾರ ಗುರುತು ಚೀಟಿಯನ್ನು ಅವರಿಗೆ ಅಧಿಕೃತ ಸಂಸ್ಥೆ ಅಥವಾ ವ್ಯಕ್ತಿಗಳ ಮೂಲಕ ನೀಡಲಾಗಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ಬಿಹಾರದ ಮತದಾರರ ಪಟ್ಟಿಯಿಂದ ತನ್ನ ಹೆಸರು ಕಾಣೆಯಾಗಿದೆ ಎಂದ ತೇಜಸ್ವಿ ಯಾದವ್; ಚುನಾವಣಾ ಆಯೋಗ ಹೇಳಿದ್ದೇನು?

ತೇಜಸ್ವಿ ಯಾದವ್ ಅವರ ಹೆಸರಿನಲ್ಲಿ ಎರಡು EPIC ಸಂಖ್ಯೆಗಳಿವೆ – RAB0456228 ಮತ್ತು RAB2916120. ಈ ಸಂಖ್ಯೆಗಳಲ್ಲಿ ಮೊದಲನೆಯದನ್ನು 2020 ರ ನಾಮಪತ್ರಗಳು ಮತ್ತು 2015 ರ ಮತದಾರರ ಪಟ್ಟಿಯಲ್ಲಿಯೂ ದಾಖಲಿಸಲಾಗಿದೆ, ಆದರೆ ಎರಡನೇ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂದು ಕಂಡುಬಂದಿದೆ. ಈ ಎರಡನೇ EPIC ಸಂಖ್ಯೆ ನಕಲಿಯಾಗಿರಬಹುದು ಎಂದು ಚುನಾವಣಾ ಆಯೋಗ ಶಂಕಿಸಿದೆ.

ಆಗಸ್ಟ್ 1 ರಂದು ಬಿಡುಗಡೆಯಾದ ಕರಡು ಮತದಾರರ ಪಟ್ಟಿಯಲ್ಲಿ ತೇಜಸ್ವಿ ಯಾದವ್ ಅವರ ಹೆಸರು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 2015 ರ ಮತದಾರರ ಪಟ್ಟಿಯಲ್ಲಿ ತೇಜಸ್ವಿ ಅವರ EPIC ಸಂಖ್ಯೆ (RAB0456228) ಅದೇ ಆಗಿತ್ತು ಎಂದು ಆಯೋಗ ಹೇಳಿದೆ. ಅಂತಹ ಪರಿಸ್ಥಿತಿಯಲ್ಲಿ, ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂಬ ಅವರ ಹೇಳಿಕೆ ಸಂಪೂರ್ಣವಾಗಿ ಆಧಾರರಹಿತವಾಗಿದೆ.

ಬಿಹಾರದ ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ಲೈಬ್ರರಿ ಕಟ್ಟಡದ ಮತದಾನ ಕೇಂದ್ರ 204ರಲ್ಲಿ ಸರಣಿ ಸಂಖ್ಯೆ 416ರಲ್ಲಿ ಪ್ರಸಕ್ತ ತೇಜಸ್ವಿ ಯಾದವ್‌ ಅವರ ಹೆಸರಿದೆ. ಈ ಹಿಂದೆ ಮತದಾನ ಕೇಂದ್ರ 171ರ ಸರಣಿ ಸಂಖ್ಯೆ 481ರಲ್ಲಿ ಅವರ ಹೆಸರು ಇತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ. 2025ರ ಆಗಸ್ಟ್ 1ರಂದು ಭಾರತೀಯ ಚುನಾವಣಾ ಆಯೋಗ ಬಿಡುಗಡೆಗೊಳಿಸಿದ ಕರಡು ಮತದಾರ ಪಟ್ಟಿಯಲ್ಲಿಯೂ ಅದೇ ಎಪಿಕ್ ಸಂಖ್ಯೆಯಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ