ಮಹಾರಾಷ್ಟ್ರ: ಭಕ್ತರಿಗೆ ಕೊಳಕು ಚಪ್ಪಲಿಯಿಂದ ಒದ್ದು, ತನ್ನ ಮೂತ್ರ ಕುಡಿಸುವ ನಕಲಿ ಬಾಬಾ
ಭಕ್ತರಿಗೆ ಕೊಳಕು ಚಪ್ಪಲಿಯಿಂದ ಒದ್ದು, ತನ್ನ ಮೂತ್ರ ಕುಡಿಸುತ್ತಿದ್ದ ನಕಲಿ ಬಾಬಾನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನ ಕೃತ್ಯವನ್ನು ನೋಡಿ ಜನರು ಆತಂಕಕ್ಕೀಡಾಗಿದ್ದಾರೆ. ಆಚರಣೆ ನೆಪದಲ್ಲಿ ಜನರಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮೂತ್ರ ಕುಡಿಯುವಂತೆ ಮಾಡುತ್ತಿದ್ದ. ಈ ಘಟನೆ ಛತ್ರಪತಿ ಸಂಭಾಜಿನಗರದ ವೈಜಾಪುರ ತಹಸಿಲ್‌ನ ಶಿಯೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಂಭಾಜಿನಗರ, ಜುಲೈ 21: ಭಕ್ತರಿಗೆ ಕೊಳಕು ಚಪ್ಪಲಿಯಿಂದ ಒದ್ದು, ತನ್ನ ಮೂತ್ರ ಕುಡಿಸುತ್ತಿದ್ದ ನಕಲಿ ಬಾಬಾ(Fake Baba) ವಿರುದ್ಧ ಪ್ರಕರಣ ದಾಖಲಾಗಿದೆ. ಆತನ ಕೃತ್ಯವನ್ನು ನೋಡಿ ಜನರು ಆತಂಕಕ್ಕೀಡಾಗಿದ್ದಾರೆ. ಆಚರಣೆ ನೆಪದಲ್ಲಿ ಜನರಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮೂತ್ರ ಕುಡಿಯುವಂತೆ ಮಾಡುತ್ತಿದ್ದ. ಈ ಘಟನೆ ಛತ್ರಪತಿ ಸಂಭಾಜಿನಗರದ ವೈಜಾಪುರ ತಹಸಿಲ್‌ನ ಶಿಯೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಿಯೂರ್ ಗ್ರಾಮದಲ್ಲಿ ಒಂದು ದೇವಸ್ಥಾನವಿದ್ದು, ಕಳೆದ ಎರಡು ವರ್ಷಗಳಿಂದ ಈ ನಕಲಿ ಬಾಬಾ ಸಂಜಯ್ ಪಗಾರೆ ಈ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದಾನೆ. ದೆವ್ವಗಳನ್ನು ಓಡಿಸುತ್ತೇನೆ, ಮದುವೆಯಾಗದವರಿಗೆ ಮದುವೆ ಮಾಡಿಸುತ್ತೇನೆ, ಮಕ್ಕಳಿಲ್ಲದವರಿಗೆ ಈ ಪೂಜೆ ಮೂಲಕ ಮಕ್ಕಳು ಪಡೆಯಲು ಸಾಧ್ಯವಾಗುತ್ತದೆ ಎಂದು ನಂಬಿಸಿದ್ದಾನೆ. ಆತನನ್ನು ನಂಬಿ ಬಂದ ಭಕ್ತರನ್ನು ಕೊಳಕು ಬೂಟಿನಿಂದ ಒದ್ದು, ಬಾಯಿಗೆ ಮೂತ್ರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಂಜಯ್ ಪಗಾರೆ ವೈಜಾಪುರ ತಹಸಿಲ್‌ನ ಶಿಯೂರ್ ಗ್ರಾಮದ ದೇವಸ್ಥಾನದಲ್ಲೇ ವಾಸಿಸುತ್ತಿದ್ದ, ಎನ್‌ಡಿಟಿವಿ ವರದಿಯ ಪ್ರಕಾರ, ಪಗಾರೆ ಎರಡು ವರ್ಷಗಳ ಕಾಲ ವಂಚನೆ, ಕುರುಡು ನಂಬಿಕೆ ಮತ್ತು ಕ್ರೌರ್ಯ ನಡೆಸಿದ್ದಾನೆ.
ಮತ್ತಷ್ಟು ಓದಿ: ಶ್ರೀಮಂತನಾಗುವ ಆಸೆಗೆ ಮಾಂತ್ರಿಕ ಹೇಳಿದಂತೆ ಓರ್ವನ ತಲೆ ಕಡಿದು ಪೂಜೆ ಮಾಡಿದ ವ್ಯಕ್ತಿ
ಪಗಾರೆ ತನಗೆ ಅಲೌಕಿಕ ಶಕ್ತಿಗಳಿವೆ ಎಂದು ಹೇಳಿಕೊಂಡು, ದುಷ್ಟಶಕ್ತಿಗಳನ್ನು ಓಡಿಸುತ್ತೇನೆ ಎಂದು ಹೇಳುತ್ತಾ ಓಡಾಡುತ್ತಿದ್ದ.ಮೂಢನಂಬಿಕೆ ವಿರೋಧಿ ಸಂಘಟನೆಯ ಕಾರ್ಯಕರ್ತರು ಗುಪ್ತ ಕ್ಯಾಮೆರಾಗಳನ್ನು ಬಳಸಿಕೊಂಡು ಈ ಬಾಬಾನ ಕೃತ್ಯವನ್ನು ಬಯಲಿಗೆಳೆದಿದ್ದಾರೆ. ಪುರುಷರು ಮತ್ತು ಮಹಿಳೆಯರಿಬ್ಬರನ್ನೂ ಕೋಲುಗಳಿಂದ ಹೊಡೆಯಲಾಯಿತು, ಅವರ ಬೂಟುಗಳನ್ನು ಬಾಯಿಗೆ ತುರುಕಿಸುವಂತೆ ಒತ್ತಾಯಿಸಲಾಯಿತು ಮತ್ತು ದೇವಾಲಯದ ಸುತ್ತಲೂ ವೃತ್ತಾಕಾರದಲ್ಲಿ ಓಡುವಂತೆ ಮಾಡಲಾಯಿತು.
ಕೆಲವು ಸಂದರ್ಭಗಳಲ್ಲಿ, ಅವರಿಗೆ ಮರದ ಎಲೆಗಳನ್ನು ತಿನ್ನಿಸಲಾಯಿತು ಮತ್ತು ಮೂತ್ರ ಕುಡಿಯುವಂತೆ ಒತ್ತಾಯಿಸಲಾಯಿತು ಹೀಗೆ ಹಲವು ಅವಮಾನಕರ ಕೆಲಸಗಳನ್ನು ಮಾಡಲಾಯಿತು.
ಒಂದು ವಿಡಿಯೋದಲ್ಲಿ, ಪಗಾರೆ ಒಬ್ಬ ವ್ಯಕ್ತಿ ನೆಲದ ಮೇಲೆ ಮಲಗಿದ್ದಾಗ ಅವರ ಮುಖದ ಮೇಲೆ ಕಾಲಿಡುತ್ತಿರುವುದನ್ನು ಕಾಣಬಹುದು. ಅರೆ ಪ್ರಜ್ಞಾಹೀನನಂತೆ ಕಾಣುತ್ತಿದ್ದ ಅದೇ ವ್ಯಕ್ತಿಯನ್ನು ನಂತರ ಬಾಬಾ ಮುಂದೆ ಕೂರಿಸಲಾಯಿತು, ನಂತರ ಬಾಬಾ ಅವರ ಮೇಲೆ ಹಳದಿ ಪುಡಿಯನ್ನು ಎಸೆದರು, ಚಪ್ಪಲಿಯ ವಾಸನೆಯನ್ನು ಕೇಳಲು ಒತ್ತಾಯಿಸಿದರು . ಆ ವ್ಯಕ್ತಿ ನಿಲ್ಲಲು ಸಹ ಕಷ್ಟಪಡುತ್ತಿದ್ದರು. ದೂರಿನ ಬಳಿಕ ಪೊಲೀಸರು ಸಂಜಯ್ ಪಗಾರೆ ವಿರುದ್ಧ ವಂಚನೆ, ಹಲ್ಲೆ ಮತ್ತು ಮೂಢನಂಬಿಕೆ ಪ್ರಚಾರ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




