ಮುಂಬೈ ಏರ್ಪೋರ್ಟ್ನಲ್ಲಿ ಇಳಿಯುವಾಗ ರನ್ವೇನಲ್ಲಿ ಸ್ಕಿಡ್ ಆದ ಏರ್ ಇಂಡಿಯಾ ವಿಮಾನ
ಕೊಚ್ಚಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ತೊಂದರೆಯನ್ನು ಎದುರಿಸಿದೆ. ಮುಂಬೈ ಏರ್ಪೋರ್ಟ್ನಲ್ಲಿ ಇಳಿಯುವಾಗ ಸ್ಕಿಡ್ ಆಗಿದೆ. ವಿಮಾನಯಾನ ಸಂಸ್ಥೆಯ ಪ್ರಕಾರ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಇಳಿದರು. ತೀವ್ರ ಮಳೆಯಿಂದಾಗಿ ಜಾರುವ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಘಟನೆ ಸಂಭವಿಸಿದೆ.

ಮುಂಬೈ, ಜುಲೈ 21: ಕೊಚ್ಚಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ತೊಂದರೆಯನ್ನು ಎದುರಿಸಿದೆ. ಮುಂಬೈ ಏರ್ಪೋರ್ಟ್ನಲ್ಲಿ ಇಳಿಯುವಾಗ ಸ್ಕಿಡ್ ಆಗಿದೆ. ವಿಮಾನಯಾನ ಸಂಸ್ಥೆಯ ಪ್ರಕಾರ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಇಳಿದರು. ತೀವ್ರ ಮಳೆಯಿಂದಾಗಿ ಜಾರುವ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಘಟನೆ ಸಂಭವಿಸಿದೆ.
ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.ವಿಮಾನವನ್ನು ಹೆಚ್ಚಿನ ಬಳಕೆಗೆ ಅನುಮತಿಸುವ ಮೊದಲು ಅಗತ್ಯ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಕೊಚ್ಚಿಯಿಂದ ಆಗಮಿಸುತ್ತಿರುವ ವಿಮಾನವು ಜುಲೈ 21 ರಂದು ಬೆಳಗ್ಗೆ 9.27 ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ಇಳಿಯಿತು.
ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ವಿಮಾನ ನಿಲ್ದಾಣದ ಪ್ರಾಥಮಿಕ ರನ್‌ವೇಗೆ ಸಣ್ಣಪುಟ್ಟ ಹಾನಿಗಳು ವರದಿಯಾಗಿವೆ.ಮುಂದಿನ ಎರಡು ದಿನಗಳಲ್ಲಿ ಮುಂಬೈ ನಿವಾಸಿಗಳು ಮತ್ತಷ್ಟು ಮಳೆ ಎದುರಿಸಲು ಸಿದ್ಧರಾಗಬೇಕು. ಮುಂದಿನ 48 ಗಂಟೆಗಳಲ್ಲಿ ಮಳೆ ಇನ್ನಷ್ಟು ತೀವ್ರವಾಗುವ ನಿರೀಕ್ಷೆಯಿದೆ ಮತ್ತು ಬಲವಾದ ಗಾಳಿ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಮತ್ತಷ್ಟು ಓದಿ: ಅದನ್ನು ಯಾಕೆ ಕಡಿತಗೊಳಿಸಿದಿರಿ? ಏರ್ ಇಂಡಿಯಾ ಪೈಲಟ್ಗಳ ಕೊನೆಯ ಸಂಭಾಷಣೆಯಲ್ಲಿತ್ತು ಪತನದ ರಹಸ್ಯ
ನಿರಂತರ ಮಳೆಯಿಂದಾಗಿ, ನಗರದ ಅನೇಕ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಈ ವಾರದ ಆರಂಭದಲ್ಲಿ, ಅಂಧೇರಿ ಸಬ್‌ವೇ ಕೂಡ ಪ್ರವಾಹಕ್ಕೆ ಸಿಲುಕಿ ಜನರನ್ನು ಸುರಕ್ಷಿತವಾಗಿಡಲು ಸ್ವಲ್ಪ ಸಮಯದವರೆಗೆ ಮುಚ್ಚಬೇಕಾಯಿತು.
ಜುಲೈ 21: ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯು ಗಂಟೆಗೆ 40 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.
ಜುಲೈ 22: ಅಂದು ಕೂಡ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಜುಲೈ 23: ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಜೂನ್ 12ರಂದು ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆಗಿ ಸ್ವಲ್ಪ ಸೆಕೆಂಡುಗಳಲ್ಲೇ ಪತನಗೊಂಡಿತ್ತು. ಪರಿಣಾಮ 270 ಮಂದಿ ಪ್ರಾಣ ಕಳೆದುಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




