ಸುಲಭವಾಗಿ ಹಣ ಮಾಡಲು 101 ಮದ್ಯ ಬಾಟಲಿಯನ್ನು ಹೇಗೆ? ಎಲ್ಲಿಗೆ ಸಾಗಿಸ್ತಿದ್ದರು ಗೊತ್ತಾ?

|

Updated on: Sep 02, 2020 | 5:03 PM

ವಿಜಯವಾಡ:ತೆಲಂಗಾಣದ ಇಬ್ಬರು ವ್ಯಕ್ತಿಗಳು ತಮ್ಮ ದೇಹಕ್ಕೆ 101 ಮದ್ಯದ ಬಾಟಲಿಗಳನ್ನು ಕಟ್ಟಿಕೊಂಡು ಆಂಧ್ರಪ್ರದೇಶಕ್ಕೆ ಸಾಗಿಸಲು ಯತ್ನಿಸಿದ್ದಾರೆ. ವಿಶೇಷ ಜಾರಿ ಬ್ಯೂರೋ (ಎಸ್‌ಇಬಿ), ಜಿಲ್ಲಾ ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ರಾಜ್ಯದ ಗಡಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ವಿಸ್ಸಾನಪೇಟೆ ಅಬಕಾರಿ ಪೊಲೀಸರು, ತೆಲಂಗಾಣ ರಾಜ್ಯ ಗಡಿ ಬಳಿಯ ಚತ್ರೈ ಮಂಡಲದ ಪೊಲವರಂ ಗ್ರಾಮದಲ್ಲಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳ ಚಲನವಲನ ಅನುಮಾನಾಸ್ಪದವಾಗಿ ಕಂಡಿದೆ. […]

ಸುಲಭವಾಗಿ ಹಣ ಮಾಡಲು 101 ಮದ್ಯ ಬಾಟಲಿಯನ್ನು ಹೇಗೆ? ಎಲ್ಲಿಗೆ ಸಾಗಿಸ್ತಿದ್ದರು ಗೊತ್ತಾ?
Follow us on

ವಿಜಯವಾಡ:ತೆಲಂಗಾಣದ ಇಬ್ಬರು ವ್ಯಕ್ತಿಗಳು ತಮ್ಮ ದೇಹಕ್ಕೆ 101 ಮದ್ಯದ ಬಾಟಲಿಗಳನ್ನು ಕಟ್ಟಿಕೊಂಡು ಆಂಧ್ರಪ್ರದೇಶಕ್ಕೆ ಸಾಗಿಸಲು ಯತ್ನಿಸಿದ್ದಾರೆ. ವಿಶೇಷ ಜಾರಿ ಬ್ಯೂರೋ (ಎಸ್‌ಇಬಿ), ಜಿಲ್ಲಾ ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ರಾಜ್ಯದ ಗಡಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ.

ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ವಿಸ್ಸಾನಪೇಟೆ ಅಬಕಾರಿ ಪೊಲೀಸರು, ತೆಲಂಗಾಣ ರಾಜ್ಯ ಗಡಿ ಬಳಿಯ ಚತ್ರೈ ಮಂಡಲದ ಪೊಲವರಂ ಗ್ರಾಮದಲ್ಲಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳ ಚಲನವಲನ ಅನುಮಾನಾಸ್ಪದವಾಗಿ ಕಂಡಿದೆ.

ಇದನ್ನು ಗಮನಿಸಿದ ಅಧಿಕಾರಿಗಳು ಇವರಿಬ್ಬರ ಬೈಕ್​ ಅಡ್ಡಗಟ್ಟಿ ತಪಾಸಣೆ ಮಾಡಿದ್ದಾರೆ. ಈ ಇಬ್ಬರು ತಮ್ಮ ದೇಹದ ಸುತ್ತಲೂ 101 ಮದ್ಯ (ಎನ್‌ಡಿಪಿಎಲ್) ಬಾಟಲಿಗಳನ್ನು (ತಲಾ 180 ಮಿಲಿ) ಪ್ಲಾಸ್ಟರ್​ನಿಂದ ಕಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅಧಿಕಾರಿಗಳು ಈ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ತೆಲಂಗಾಣದ ಖಮ್ಮಂ ಜಿಲ್ಲೆಯ ಅಶ್ವಾರೋಪೇಟದ ದೇವರಾಕೊಂಡ ಶ್ರೀನಿವಾಸ್ ರಾವ್ ಮತ್ತು ದೇವರಕೊಂಡ ರಾಜೇಶ್ ಎಂದು ಗುರುತಿಸಲಾಗಿದೆ. ಮದ್ಯದ ಬೆಲೆ ಆಂಧ್ರಪ್ರದೇಶದಲ್ಲಿ ಹೆಚ್ಚಿರುವುದರಿಂದ ಸುಲಭವಾಗಿ ಹಣ ಸಂಪಾದಿಸಲು ಅಲ್ಲಿ ಮದ್ಯ ಮಾರಾಟಕ್ಕೆ ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಮದ್ಯದ ಬಾಟಲಿಗಳು ಮತ್ತು ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

Published On - 5:01 pm, Wed, 2 September 20