Supreme Court: ಕನ್ನಡಿಗ ನ್ಯಾ| ಅರವಿಂದ್ ಕುಮಾರ್ ಸೇರಿ ಇಬ್ಬರು ನೂತನ ಸುಪ್ರೀಂ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 13, 2023 | 12:29 PM

Two New Judges Take Oath: ಸುಪ್ರೀಂಕೋರ್ಟ್​ಗೆ ನೂತನ ಜಡ್ಜ್​ಗಳಾಗಿ ನೇಮಕವಾಗಿದ್ದ ನ್ಯಾ| ಅರವಿಂದ್ ಕುಮಾರ್ ಮತ್ತು ನ್ಯಾ| ರಾಜೇಶ್ ಬಿಂದಾಲ್ ಅವರಿಗೆ ಸಿಜೆಐ ಇಂದು ಪ್ರಮಾಣವಚನ ಬೋಧಿಸಿದ್ದಾರೆ. ನ್ಯಾ. ಅರವಿಂದ್ ಕುಮಾರ್ ಕರ್ನಾಟಕ ಮೂಲದವರಾಗಿದ್ದಾರೆ.

Supreme Court: ಕನ್ನಡಿಗ ನ್ಯಾ| ಅರವಿಂದ್ ಕುಮಾರ್ ಸೇರಿ ಇಬ್ಬರು ನೂತನ ಸುಪ್ರೀಂ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ
ಸುಪ್ರೀಂ ಕೋರ್ಟ್​
Follow us on

ನವದೆಹಲಿ: ಸುಪ್ರೀಂಕೋರ್ಟ್​ಗೆ ನೂತನ ನ್ಯಾಯಮೂರ್ತಿಗಳಾಗಿ (New Supreme Court Judges) ನೇಮಕವಾಗಿದ್ದ ಕರ್ನಾಟಕ ಮೂಲದ ಅರವಿಂದ್ ಕುಮಾರ್ ಮತ್ತು ನ್ಯಾ| ರಾಜೇಶ್ ಬಿಂದಲ್ ಅವರಿಗೆ ಸಿಜೆಐ ಡಿ.ವೈ. ಚಂದ್ರಚೂಡ್ ಸೋಮವಾರ ಪ್ರಮಾಣವಚನ ಬೋಧಿಸಿದರು. ಈ ಇಬ್ಬರ ನೇಮಕದೊಂದಿಗೆ ಸುಪ್ರೀಂಕೋರ್ಟ್​ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 34 ಆಗಿದೆ. ಅಲ್ಲಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪೂರ್ಣಪ್ರಮಾಣದಲ್ಲಿ ಜಡ್ಜ್​ಗಳ ನೇಮಕವಾದಂತಾಗಿದೆ. ಕಳೆದ ವಾರ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್, ಸಂಜಯ್ ಕರೋಲ್, ಪಿವಿ ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಮನೋಜ್ ಮಿಶ್ರಾ, ಈ ಐವರನ್ನು ಸುಪ್ರೀಂಕೋರ್ಟ್​ನ ನೂತನ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿತ್ತು.

ಸುಪ್ರೀಂಕೋರ್ಟ್​ನ ಕೊಲೆಜಿಯಂ ಜನವರಿ 31ರಂದು ನ್ಯಾ| ರಾಜೇಶ್ ಬಿಂದಲ್ ಮತ್ತು ನ್ಯಾ| ಅರವಿಂದ್ ಕುಮಾರ್ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಬಡ್ತಿ ನೀಡಲು ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗುವ ಮೊದಲು ನ್ಯಾ| ರಾಜೇಶ್ ಬಿಂದಲ್ ಅವರು ಅಲಹಾಬಾದ್ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರಾಗಿದ್ದರು. ಇನ್ನು, ನ್ಯಾ| ಅರವಿಂದ್ ಕುಮಾರ್ ಅವರು ಕರ್ನಾಟಕದವರಾಗಿದ್ದು, ಗುಜರಾತ್ ಹೈಕೋರ್ಟ್​ನ ಮುಖ್ಯನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: Oommen Chandy: ಮಾಜಿ ಸಿಎಂ ಉಮ್ಮನ್ ಚಾಂಡಿಗೆ ಅನಾರೋಗ್ಯ; ಬೆಂಗಳೂರಿನ ಆಸ್ಪತ್ರೆಗೆ ರವಾನೆ

ದೇಶಾದ್ಯಂತ ಉನ್ನತ ನ್ಯಾಯಾಲಯಗಳಲ್ಲಿ ಜಡ್ಜ್​ಗಳನ್ನು ನೇಮಿಸಲು ಇರುವ ಕೊಲೆಜಿಯಂ ವ್ಯವಸ್ಥೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಭಿನ್ನಾಭಿಪ್ರಾಯ ಇದೆ. ಕೊಲೆಜಿಯಂ ವ್ಯವಸ್ಥೆಯನ್ನು ರದ್ದು ಮಾಡಲು ಹೊರಟಿರುವ ಸರ್ಕಾರ, ಜಡ್ಜ್​ಗಳ ನೇಮಕಾತಿಗೆ ಹೊಸದಾದ ಎನ್​ಜೆಎಸಿ ಕಾನೂನು ರೂಪಿಸಲು ಹೊರಟಿದೆ.

ಇತ್ತೀಚೆಗೆ ಸುಪ್ರೀಂಕೋರ್ಟ್ ಜಡ್ಜ್ ಆಗಿ ನಿವೃತ್ತರಾಗಿದ್ದ ನ್ಯಾ| ನಜೀರ್ ಅವರನ್ನು ಕೇಂದ್ರ ಸರ್ಕಾರ ಆಂಧ್ರ ರಾಜ್ಯಪಾಲರನ್ನಾಗಿ ನೇಮಕ ಮಾಡಿತ್ತು.

Published On - 12:29 pm, Mon, 13 February 23