ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವರ ಪುತ್ರನ ಆಪ್ತರಿಬ್ಬರ ಬಂಧನ !

TV9 Digital Desk

| Edited By: Lakshmi Hegde

Updated on:Oct 07, 2021 | 3:48 PM

ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿಯಾಗಿ, ಅವರಿಗೆ ಸಾಂತ್ವನ ಹೇಳಿದ್ದ ರಾಹುಲ್ ಗಾಂಧಿ ಇಂದು ದೆಹಲಿಗೆ ವಾಪಸ್​ ಆಗಿದ್ದಾರೆ. 

ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವರ ಪುತ್ರನ ಆಪ್ತರಿಬ್ಬರ ಬಂಧನ !
ಲಖಿಂಪುರ ಖೇರಿ ಹಿಂಸಾಚಾರದ ದೃಶ್ಯ

Follow us on

ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ (Lakhimpur Kheri Violence) ಕ್ಕೆ ಸಂಬಂಧಪಟ್ಟಂತೆ ಇಂದು ಇಬ್ಬರನ್ನು ಬಂಧಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರನ್ನು ಆಶೀಶ್​ ಪಾಂಡೆ ಮತ್ತು ಲವಕುಶ್​ ಎಂದು ಗುರುತಿಸಲಾಗಿದೆ.  ಇವರಿಬ್ಬರೂ ಅಂದು ರೈತರ ಮೇಲೆ ಹರಿದ ಬೆಂಗಾವಲು ವಾಹನದಲ್ಲಿ ಇದ್ದರು ಎಂದು ಲಖಿಂಪುರಖೇರಿ ಪೊಲೀಸರು ಹೇಳಿದ್ದಾರೆ.  ಹಾಗೇ ಇಂದು ಬಂಧಿತರಾದ ಇವರಿಬ್ಬರೂ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್​ ಮಿಶ್ರಾರ ಆಪ್ತರು ಎಂದೂ ಪೊಲೀಸರು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು. ಆಶೀಶ್​ ಮಿಶ್ರಾ ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. 

ಅಂದಹಾಗೆ ಇಂದು ಸುಮೊಟೊ ವಿಚಾರಣೆ ನಡೆಸಿದ್ದ ಸುಪ್ರಿಂಕೋರ್ಟ್​ ನಾಳೆಯೊಳಗೆ ಘಟನೆಯ ಸ್ಥಿತಿ ವರದಿ (Status Report) ನೀಡುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ. ಅದರಲ್ಲಿ, ಹಿಂಸಾಚಾರಕ್ಕೆ ಕಾರಣರಾದ ಆರೋಪಿಗಳ ಬಗ್ಗೆ ಸಮಗ್ರ ಮಾಹಿತಿ ಇರಬೇಕು..ಆರೋಪಿಗಳು ಬಂಧಿತರಾಗಿದ್ದರೆ ಅದರ ಬಗ್ಗೆಯೂ ವಿವರ ಇರಬೇಕು ಎಂದು ಸೂಚಿಸಿದೆ. ಹಾಗೇ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಇನ್ನು ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದರೂ, ಅವರನ್ನಿನ್ನೂ ಬಂಧಿಸಿಲ್ಲ. ಈಗಂತು ಅವರ ಪತ್ತೆಯೇ ಇಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ.

ದೆಹಲಿಗೆ ಹಿಂತಿರುಗಿದ ರಾಹುಲ್​ ಗಾಂಧಿ ಇನ್ನು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬದವರನ್ನು ಭೇಟಿಯಾಗಿ, ಅವರಿಗೆ ಸಾಂತ್ವನ ಹೇಳಿದ್ದ ರಾಹುಲ್ ಗಾಂಧಿ ಇಂದು ದೆಹಲಿಗೆ ವಾಪಸ್​ ಆಗಿದ್ದಾರೆ.  ಈ ಮಧ್ಯೆ ಪ್ರಿಯಾಂಕಾ ಗಾಂಧಿ ಬಹ್ರೈಚ್​​ಗೆ ತೆರಳಿ, ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರು ಬಿಜೆಪಿ ಕಾರ್ಯಕರ್ತರ ಕುಟುಂಬದವರನ್ನು ಭೇಟಿಯಾಗುವ ಪ್ರಯತ್ನವನ್ನೂ ನಡೆಸಿದರು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.  ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರು ಬಿಜೆಪಿ ಕಾರ್ಯಕರ್ತರ ಕುಟುಂಬದವರನ್ನು ಭೇಟಿಯಾಗಲು ನಾನು ಪ್ರಯತ್ನಿಸಿದೆ. ಆದರೆ ಪೊಲೀಸರು ಬಿಡಲಿಲ್ಲ. ಹಾಗಾಗಿ ನನ್ನ ಸಂತಾಪ, ಸಾಂತ್ವನವನ್ನು ಅವರಿಗೆ ತಲುಪಿಸುವಂತೆ ಪೊಲೀಸರಿಗೇ ತಿಳಿಸಿದೆ ಎಂದು ಹೇಳಿದ್ದಾರೆ.

ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಲಖಿಂಪುರ ಖೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿರುವ ನವಜೋತ್​ ಸಿಂಗ್​ ಸಿಧು, ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರನನ್ನು ಬಂಧಿಸದೆ ಇದ್ದರೆ ಅಥವಾ ಅವರೇ ಖುದ್ದಾಗಿ ನಾಳೆಯೊಳಗೆ ತನಿಖೆಗೆ ಹಾಜರಾಗದೆ ಇದ್ದರೆ, ನಾನು ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Realme GT Neo 2: ಚೀನಾದಲ್ಲಿ ಧೂಳೆಬ್ಬಿಸಿದ ರಿಯಲ್ ಮಿ ಜಿಟಿ ನಿಯೋ 2 ​ಫೋನ್ ಅ. 13ಕ್ಕೆ ಭಾರತದಲ್ಲಿ ಬಿಡುಗಡೆ: ಬೆಲೆ?

ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿಗಳು; ಹಾನಗಲ್ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾರ್ಯಕರ್ತರ ಅಸಮಾಧಾನ

ತಾಜಾ ಸುದ್ದಿ

Related Stories

Click on your DTH Provider to Add TV9 Kannada