ಒಡಿಶಾದ ಹೋಟೆಲ್‌ನಲ್ಲಿ ರಷ್ಯಾದ ಸಂಸದ ಸೇರಿ ಇಬ್ಬರು ಪ್ರವಾಸಿಗಳು ಅನುಮಾನಾಸ್ಪದ ಸಾವು

| Updated By: Digi Tech Desk

Updated on: Dec 27, 2022 | 5:21 PM

Odisha News: ಒಡಿಶಾದ ರಾಯಗಡದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಅವರ ಪಕ್ಷದ ಸಹೋದ್ಯೋಗಿ ವ್ಲಾಡಿಮಿರ್ ಬುಡಾನೋವ್ (61) ಅವರ ನಿಗೂಢ ಸಾವಿನ ಎರಡು ದಿನಗಳ ನಂತರ ಪಾವೆಲ್ ಸಾವು ಸಂಭವಿಸಿದೆ. ವ್ಲಾಡಿಮಿರ್ ಮತ್ತು ಆಂಟೊವ್ ಸೇರಿದಂತೆ ನಾಲ್ವರು ರಷ್ಯಾದ ಪ್ರವಾಸಿಗರು ಡಿಸೆಂಬರ್ 21 ರಂದು ಕಂಧಮಾಲ್ ಜಿಲ್ಲೆಯ ದರಿಂಗ್‌ಬಾಡಿಗೆ ಭೇಟಿ ನೀಡಿದ ನಂತರ ಹೋಟೆಲ್‌ಗೆ ಚೆಕ್ ಇನ್ ಮಾಡಿದ್ದರು.

ಒಡಿಶಾದ ಹೋಟೆಲ್‌ನಲ್ಲಿ ರಷ್ಯಾದ ಸಂಸದ ಸೇರಿ ಇಬ್ಬರು ಪ್ರವಾಸಿಗಳು ಅನುಮಾನಾಸ್ಪದ ಸಾವು
ಪಾವೆಲ್ ಆಂಟೋವ್
Follow us on

ಒಡಿಶಾದಲ್ಲಿ (odisha) ಇಬ್ಬರು ರಷ್ಯಾ ಪ್ರಜೆಗಳ ಸಾವು ಅಲ್ಲಿನ ಪೊಲೀಸರಿಗೆ ಬಿಡಿಸಲಾಗದ ಒಗಟು ಆಗಿ ಪರಿಣಮಿಸಿದೆ. ಒಡಿಶಾದ ರಾಯಗಡ ಪ್ರದೇಶದಲ್ಲಿ ವಿಹಾರಕ್ಕೆ ಬಂದಿದ್ದ  ಕೋಟ್ಯಾಧಿಪತಿಯೊಬ್ಬರು, ಎರಡು ದಿನಗಳ ನಂತರ ಅವರು ತಂಗಿದ್ದ ಹೋಟೆಲ್‌ನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಅವರ ಸಹ ಪ್ರಯಾಣಿಕರು ಕೂಡಾ ಅಲ್ಲೇ ಶವವಾಗಿ ಪತ್ತೆಯಾಗಿದ್ದರು. ಮೃತ ಪಾವೆಲ್ ಆಂಟೋವ್ (Pavel Antov )ಅವರು ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಲು ಒಡಿಶಾದಲ್ಲಿದ್ದರು. ಡಿಸೆಂಬರ್ 25, ಭಾನುವಾರದಂದು ಪಾವೆಲ್ ಶವವಾಗಿ ಪತ್ತೆಯಾಗಿದ್ದಾರೆ. ಇದು ಒಡಿಶಾ ಹೋಟೆಲ್‌ನಲ್ಲಿ ಒಂದು ವಾರದೊಳಗೆ ನಡೆದ  ಎರಡನೇ ಸಾವು ಇದಾಗಿದೆ. ಪಾವೆಲ್ ಅವರ ಸಾವಿನ ಪ್ರಕರಣವು ಅವರು “ಪುಟಿನ್ ವಿಮರ್ಶಕ” ಎಂಬ ವರದಿಗಳೊಂದಿಗೆ ಇನ್ನಷ್ಟು ನಿಗೂಢವಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಮರ್ಶಕರು ಈ ಹಿಂದೆ ರಷ್ಯಾದಲ್ಲಿ ಇದೇ ರೀತಿ ಸಾವನ್ನಪ್ಪಿದ್ದರಿಂದ ಈ ಸಾವಿನ ಬಗ್ಗೆ ಮತ್ತಷ್ಟು ಚರ್ಚೆಯಾಗುತ್ತಿದೆ. ಆಂಟೊವ್ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶರ್ಮಾ, ಅವರ ಕುಟುಂಬದ ಅನುಮತಿಯೊಂದಿಗೆ ಸೋಮವಾರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದಿದ್ದಾರೆ. ನಮ್ಮ ಸಹೋದ್ಯೋಗಿ, ಯಶಸ್ವಿ ಉದ್ಯಮಿ ಮತ್ತು ಲೋಕೋಪಕಾರಿ ಪಾವೆಲ್ ಆಂಟೊವ್ ನಿಧನರಾದರು. ಯುನೈಟೆಡ್ ರಷ್ಯಾ ಬಣದ ಪ್ರತಿನಿಧಿಗಳ ಪರವಾಗಿ, ಸಂಬಂಧಿಕರು ಮತ್ತು ಸ್ನೇಹಿತರಿಗೆ ನನ್ನ ತೀವ್ರವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಸುದ್ದಿಯನ್ನು ದೃಢೀಕರಿಸಿ ಪ್ರಾದೇಶಿಕ ಸಂಸತ್ತಿನ ಉಪಾಧ್ಯಕ್ಷ ವ್ಯಾಚೆಸ್ಲಾವ್ ಕಾರ್ತುಖಿನ್ ಟೆಲಿಗ್ರಾಮ್ ಚಾನೆಲ್‌ನಲ್ಲಿ ಹೇಳಿರುವುದಾಗಿ ರಷ್ಯಾದ ಸುದ್ದಿ ಸಂಸ್ಥೆ TASS ವರದಿಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ಒಡಿಶಾದ ರಾಯಗಡದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಅವರ ಪಕ್ಷದ ಸಹೋದ್ಯೋಗಿ ವ್ಲಾಡಿಮಿರ್ ಬುಡಾನೋವ್ (61) ಅವರ ನಿಗೂಢ ಸಾವಿನ ಎರಡು ದಿನಗಳ ನಂತರ ಪಾವೆಲ್ ಸಾವು ಸಂಭವಿಸಿದೆ. ವ್ಲಾಡಿಮಿರ್ ಮತ್ತು ಆಂಟೊವ್ ಸೇರಿದಂತೆ ನಾಲ್ವರು ರಷ್ಯಾದ ಪ್ರವಾಸಿಗರು ಡಿಸೆಂಬರ್ 21 ರಂದು ಕಂಧಮಾಲ್ ಜಿಲ್ಲೆಯ ದರಿಂಗ್‌ಬಾಡಿಗೆ ಭೇಟಿ ನೀಡಿದ ನಂತರ ಹೋಟೆಲ್‌ಗೆ ಚೆಕ್ ಇನ್ ಮಾಡಿದ್ದರು.

ಇದನ್ನೂ ಓದಿ: 142 ಅಡಿ ತಲುಪಿದ ಮುಲ್ಲಪೆರಿಯಾರ್ ಡ್ಯಾಂ ನೀರಿನ ಮಟ್ಟ; ಕೇರಳದಲ್ಲಿ ಪ್ರವಾಹದ ಎಚ್ಚರಿಕೆ

ನಾಲ್ಕು ಜನರು ಡಿಸೆಂಬರ್ 21 ರಂದು ರಾಯಗಡದ ಹೋಟೆಲ್‌ಗೆ ತಂಗಲು ಬಂದರು. ಡಿಸೆಂಬರ್ 22 ರಂದು ಬೆಳಿಗ್ಗೆ ಅವರಲ್ಲಿ ಒಬ್ಬರು (ಬಿ ವ್ಲಾಡಿಮಿರ್) ನಿಧನರಾದರು. ಮರಣೋತ್ತರ ಪರೀಕ್ಷೆಯ ನಂತರ, ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂತು. ಆಮೇಲೆ ಅವರ ಅಂತ್ಯಕ್ರಿಯೆ ಮಾಡಲಾಯಿತು. ಅವರ ಸ್ನೇಹಿತ, (ಪಾವೆಲ್ ಆಂಟೊನೊವ್) ಅವರ ಸಾವಿನ ನಂತರ ಖಿನ್ನತೆಗೆ ಒಳಗಾಗಿದ್ದರು ಮತ್ತು ಅವರು ಡಿಸೆಂಬರ್ 25 ರಂದು ನಿಧನರಾದರು ಎಂದು ಎಸ್ಪಿ ಹೇಳಿದ್ದಾರೆ.

ಏತನ್ಮಧ್ಯೆ, ರಷ್ಯಾದ ಪ್ರವಾಸಿ ಮಾರ್ಗದರ್ಶಿ ಜಿತೇಂದ್ರ ಸಿಂಗ್ ಅವರು ಎಎನ್ಐ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನಾಲ್ವರು ರಾಯಗಡ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಬಂದಿದ್ದರು ಎಂದು ಹೇಳಿದ್ದಾರೆ. “ಅವರಲ್ಲಿ ಒಬ್ಬರು 61 ವರ್ಷದ ವ್ಯಕ್ತಿ, ಬಿ ವ್ಲಾಡಿಮಿರ್, ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮರುದಿನ ಬೆಳಿಗ್ಗೆ ನಾವು ಅವರ ಕೋಣೆಗೆ ಬಂದಾಗ ಅವರು ಶವವಾಗಿ ಕಂಡುಬಂದರು. ಆಗ ನಾವು ಪೊಲೀಸರಿಗೆ ಕರೆ ಮಾಡಿದೆವು ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Tue, 27 December 22