AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

142 ಅಡಿ ತಲುಪಿದ ಮುಲ್ಲಪೆರಿಯಾರ್ ಡ್ಯಾಂ ನೀರಿನ ಮಟ್ಟ; ಕೇರಳದಲ್ಲಿ ಪ್ರವಾಹದ ಎಚ್ಚರಿಕೆ

Mullaperiyar Dam: 127 ವರ್ಷಗಳಷ್ಟು ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟು ಕೇರಳ ಮತ್ತು ತಮಿಳುನಾಡು ನಡುವೆ  ಬಹಳ ಹಿಂದಿನಿಂದಲೂ ವಿವಾದದ ಮೂಲವಾಗಿದೆ.

142 ಅಡಿ ತಲುಪಿದ ಮುಲ್ಲಪೆರಿಯಾರ್ ಡ್ಯಾಂ ನೀರಿನ ಮಟ್ಟ; ಕೇರಳದಲ್ಲಿ ಪ್ರವಾಹದ ಎಚ್ಚರಿಕೆ
Image Credit source: facebook
TV9 Web
| Updated By: ಸುಷ್ಮಾ ಚಕ್ರೆ|

Updated on: Dec 27, 2022 | 2:03 PM

Share

ತಿರುವನಂತಪುರಂ: ಕೇರಳದ ಮುಲ್ಲಪೆರಿಯಾರ್ ಡ್ಯಾಂನಲ್ಲಿ (Mullaperiyar Dam) ನೀರಿನ ಮಟ್ಟವು 142 ಅಡಿಯ ಮಿತಿಯನ್ನು ತಲುಪಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಪ್ರವಾಹದ (Kerala Flood Alert) ಅಲರ್ಟ್​ ನೀಡಲಾಗಿದೆ. ಸ್ಥಳೀಯ ಜಿಲ್ಲಾಧಿಕಾರಿಗಳ ಪ್ರಕಾರ, ಮುಲ್ಲಪೆರಿಯಾರ್ ಜಲಾಶಯದ ನೀರಿನ ಮಟ್ಟ 142 ಅಡಿ ತಲುಪಿದ ಕಾರಣ ಇಂದು ಬೆಳಗ್ಗೆ 10 ಗಂಟೆಗೆ ಪ್ರವಾಹ ಎಚ್ಚರಿಕೆಯನ್ನು ನೀಡಲಾಗಿದೆ.

ಇಂದು ಬೆಳಗ್ಗೆ 7 ಗಂಟೆಗೆ 141.95 ಅಡಿ ಇದ್ದ ನೀರಿನ ಮಟ್ಟ ಬೆಳಗ್ಗೆ 10 ಗಂಟೆಗೆ 142 ಅಡಿ ಮಟ್ಟಕ್ಕೆ ತಲುಪಿದೆ. ಮೂರು ಗಂಟೆಯಲ್ಲೇ ನೀರಿನ ಮಟ್ಟ ಏರಿಕೆಯಾಗಿದೆ. ಡ್ಯಾಂನ ನೀರಿನ ಶೇಖರಣಾ ಸಾಮರ್ಥ್ಯ 7,666 ಮಿಲಿಯನ್ ಅಡಿಗಳಿದೆ. 127 ವರ್ಷಗಳಷ್ಟು ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟು ಕೇರಳ ಮತ್ತು ತಮಿಳುನಾಡು ನಡುವೆ  ಬಹಳ ಹಿಂದಿನಿಂದಲೂ ವಿವಾದದ ಮೂಲವಾಗಿದೆ.

ಇದನ್ನೂ ಓದಿ: ಮೇಕೆದಾಟು ಕುಡಿಯುವ ನೀರಿನ ಯೋಜನೆ ಬಗ್ಗೆ ರಾಜ್ಯಸಭೆಯಲ್ಲಿ ಧ್ವನಿ ಎತ್ತಿದ ದೇವೇಗೌಡ

ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟವು ಇಂದು ಗರಿಷ್ಠ 142 ಅಡಿ ಸಂಗ್ರಹಣಾ ಸಾಮರ್ಥ್ಯವನ್ನು ತಲುಪಿದ ಹಿನ್ನೆಲೆಯಲ್ಲಿ ಕೇರಳದಲ್ಲಿ ಎಚ್ಚರಿಕೆ ನೀಡಲಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ಜಲಾಶಯದ ನೀರಿನ ಮಟ್ಟ 142 ಅಡಿ ತಲುಪಿದ್ದರಿಂದ ಮೂರನೇ ಹಾಗೂ ಅಂತಿಮ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಜಲಾಶಯದ ಸುರಂಗದಿಂದ 750 ಕ್ಯೂಸೆಕ್ ನೀರು ಹರಿದು ಬರುತ್ತಿದ್ದರೆ, ಸರಾಸರಿ ಒಳಹರಿವು 1,687.5 ಕ್ಯುಸೆಕ್ ಮತ್ತು ಶೇಖರಣಾ ಸಾಮರ್ಥ್ಯ 7,666 ಮಿಲಿಯನ್ ಕ್ಯೂಬಿಕ್ ಅಡಿ ಇತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ