ಅಸ್ಸಾಂ: ಅಲ್ಖೈದಾ ಸಂಘಟನೆ ಜತೆ ನಂಟಿದೆ ಎಂದು ಶಂಕಿಸಲಾಗುವ ಇಬ್ಬರು ಉಗ್ರರ ಬಂಧನ
ಬಂಧಿತರನ್ನು ಅಬ್ಬಾಸ್ ಸುಬಾನ್ ಮತ್ತು ಜಲಾಲುದ್ದೀಮ್ ಶೇಖ್ ಎಂದು ಗುರುತಿಸಲಾಗಿದೆ. ಇವರಿಬ್ಬರ ಗೋಲ್ಪಾರಾ ಮಸೀದಿಯ ಇಮಾಮ್ ಆಗಿದ್ದಾರೆ.
ಅಲ್ ಖೈದಾ ಇಂಡಿಯನ್ ಸಬ್ ಕಾಂಟಿನೆಂಟ್ (AQIS) ಮತ್ತು ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆಯಾದ ಅನ್ಸರುಲ್ಲಾ ಬಾಂಗ್ಲಾ ಟೀಂ(ABT) ಜತೆ ನಂಟು ಹೊಂದಿದ್ದಾರೆ ಎಂದು ಶಂಕಿಸಲಾ ಇಬ್ಬರು ಉಗ್ರನರನ್ನು ಅಸ್ಸಾಂನ ಗೋಲ್ ಪಾರಾ ಜಿಲ್ಲೆಯಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶಂಕಿತ ಉಗ್ರರು ಬಾಂಗ್ಲಾದೇಶದಿಂದ ಬೂಂದ ಜಿಹಾದಿಗಳಿಗೆ ಬೆಂಬಲ ಮತ್ತು ಮನೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ ಎಂದು ಗೋಲ್ ಪಾರದ ಸುಪರಿಟೆಂಡೆಂಟ್ ಆಫ್ ಪೊಲೀಸ್ ವಿ.ಕೆ ರಾಕೇಶ್ ರೆಡ್ಡಿ ಹೇಳಿದ್ದಾರೆ. ಬಂಧಿತರನ್ನು ಅಬ್ಬಾಸ್ ಸುಬಾನ್ ಮತ್ತು ಜಲಾಲುದ್ದೀಮ್ ಶೇಖ್ ಎಂದು ಗುರುತಿಸಲಾಗಿದೆ. ಇವರಿಬ್ಬರ ಗೋಲ್ಪಾರಾ ಮಸೀದಿಯ ಇಮಾಮ್ ಆಗಿದ್ದಾರೆ. ಎಕ್ಯುಐಎಸ್ ಮತ್ತು ಜಿಲ್ಲೆಯಲ್ಲಿ ಸ್ಲೀಪರ್ ಸೆಲ್ ಗೆ ನಿಯೋಜನೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಇಬ್ಬರೂ ಒಪ್ಪಿಕೊಂಡಿರುವುದಾಗಿ ರೆಡ್ಡಿ ಮಾಧ್ಯಮದವರಿಗೆ ಹೇಳಿದ್ದಾರೆ. ಬಂಧಿತ ವ್ಯಕ್ತಿಗಳು ಎಕ್ಯೂಐಎಸ್ ಮತ್ತು ಎಬಿಟಿಯ ಭಯೋತ್ಪಾದಕ ಘಟಕಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜಿಹಾದಿ ಶಕ್ತಿಗಳೊಂದಿಗೆ ನಂಟು ಹೊಂದಿರುವ ಬಂಧಿತ ಅಬ್ಬಾಸ್ ಅಲಿಯಿಂದ ಈ ವರ್ಷ ಜುಲೈನಲ್ಲಿ ನಾವು ಮಾಹಿತಿ ಪಡೆದುಕೊಂಡಿದ್ದೇವೆ. ವಿಚಾರಣೆಯ ಸಮಯದಲ್ಲಿ ಆತ ಅಸ್ಸಾಂನ ಎಕ್ಯೂಐಎಸ್ ಮತ್ತು ಎಬಿಟಿಯ ಬಾರ್ಪೇಟಾ ಮತ್ತು ಮೊರಿಗಾಂವ್ ಮಾಡ್ಯೂಲ್ಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದಾನೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ರೆಡ್ಡಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಆರೋಪಿಗಳ ಮನೆ ಶೋಧ ನಡೆಸಿದಾಗ ಅಲ್-ಖೈದಾ, ಜಿಹಾದಿ ಸಂಬಂಧಿಸಿದ ಹಲವಾರು ವಸ್ತುಗಳು, ಪೋಸ್ಟರ್‌ಗಳು, ಪುಸ್ತಕಗಳು ಮತ್ತು ಇತರ ದಾಖಲೆಗಳ ಜೊತೆಗೆ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು ಮತ್ತು ಐಡಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ತಿಂಗಳ ಆರಂಭದಲ್ಲಿ ಈಶಾನ್ಯ ರಾಜ್ಯವು ಇಸ್ಲಾಮಿಕ್ ಮೂಲಭೂತವಾದಿಗಳ ತಾಣವಾಗುತ್ತಿದೆ ಎಂದು ಹೇಳಿದ್ದು ಭಯೋತ್ಪಾದನಾ ಕೃತ್ಯಗಳಿಗೆ ಸಂಬಂಧಿಸಿದಂತೆ ಮಾಡಿದ ಬಂಧನಗಳನ್ನು ಉಲ್ಲೇಖಿಸಿ ಹೇಳಿದರು. ಬಾರ್‌ಪೇಟಾ, ಬೊಂಗೈಗಾಂವ್ ಮತ್ತು ಮೋರಿಗಾಂವ್‌ನಲ್ಲಿ ಸ್ಲೀಪರ್ ಸೆಲ್‌ಗಳು ಬಳಸುತ್ತಿದ್ದ ಉನ್ನತ ಮಟ್ಟದ ಎಲೆಕ್ಟ್ರಾನಿಕ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ಇಸ್ಲಾಮಿಕ್ ಮೂಲಭೂತವಾದಿಗಳ ತಾಣವಾಗುತ್ತಿದೆ ಎಂಬುದು ಅನುಮಾನಾಸ್ಪದವಾಗಿ ಸಾಬೀತಾಗಿದೆ. 5 ಮಾಡ್ಯೂಲ್‌ಗಳನ್ನು ಪತ್ತೆ ಹಚ್ಚಿದ್ದು ಇತರ 5 ಬಾಂಗ್ಲಾದೇಶಿ ಪ್ರಜೆಗಳು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ ಎಂದು ಶರ್ಮಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
Published On - 1:30 pm, Sun, 21 August 22