ಹುಟ್ಟುಹಬ್ಬದ ಖುಷಿಯಲ್ಲಿದ್ದ 2ವರ್ಷದ ಹೆಣ್ಣುಮಗು ಅಡುಗೆ ಮನೆಗೆ ಹೋಗಿ ಸಾವು; ಪ್ರಾಣ ತೆಗೆದ ಬಿಸಿ ಸಾಂಬಾರ್​

ಆಕೆಯ ಪಾಲಕರು ಬಂದ ಅತಿಥಿಗಳಿಗೆ ಸತ್ಕಾರದಲ್ಲಿ ತೊಡಗಿದ್ದರು. ಅದ್ಯಾವ ಮಾಯದಲ್ಲಿ ತೇಜಸ್ವಿ ಅಡುಗೆ ಮನೆಗೆ ಹೋದಳೋ, ಯಾರೂ ನೋಡಲಿಲ್ಲ. ಆಗತಾನೇ ಸಾಂಬಾರನ್ನು ಕುದಿಸಿ, ಅಲ್ಲಿಯೇ ಇಡಲಾಗಿತ್ತು.

ಹುಟ್ಟುಹಬ್ಬದ ಖುಷಿಯಲ್ಲಿದ್ದ 2ವರ್ಷದ  ಹೆಣ್ಣುಮಗು ಅಡುಗೆ ಮನೆಗೆ ಹೋಗಿ ಸಾವು; ಪ್ರಾಣ ತೆಗೆದ ಬಿಸಿ ಸಾಂಬಾರ್​
ಪ್ರಾತಿನಿಧಿಕ ಚಿತ್ರ
Updated By: Lakshmi Hegde

Updated on: Feb 15, 2022 | 9:54 AM

ಫೆಬ್ರವರಿ 13 ಆ ಎರಡು ವರ್ಷದ ಪುಟ್ಟ ಮಗುವಿನ ಹುಟ್ಟುಹಬ್ಬ(Birth Day). ಒಳಗೆಲ್ಲ ಭರ್ಜರಿ ತಯಾರಿ ನಡೆಯುತ್ತಿತ್ತು. ಪಾಲಕರು, ಮನೆಯವರೆಲ್ಲ ಸಂಭ್ರಮದಲ್ಲಿ ಸಿದ್ಧತೆ ನಡೆಸುತ್ತಿದ್ದರು. ಈ ಮಗು ಹೊರಗೆ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಆದರೆ ಆ ದಿನವೇ ಪುಟ್ಟ ಮಗುವಿನ ಪಾಲಿಗೆ ಕೊನೆಯ ದಿನವಾಯಿತು. ಎರಡನೇ ವರ್ಷದ ಹುಟ್ಟಿದ ಹಬ್ಬದಂತೇ ಹೆಣ್ಣು ಮಗು ಜೀವ ಬಿಟ್ಟಳು. ಅದೂ ಕೂಡ ಬಿಸಿಬಿಸಿ ಸಾರಿನ ಪಾತ್ರೆಯಲ್ಲಿ ಬಿದ್ದು, ದಾರುಣವಾಗಿ ಮೃತಪಟ್ಟಳು.

ಈ ಘಟನೆ ನಡೆದದ್ದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಎಂಬಲ್ಲಿ.  ಹೆಣ್ಣುಮಗುವಿನ ಹೆಸರು ತೇಜಸ್ವಿ. ಈಕೆ ಶಿವ ಮತ್ತು ಭಾನುಮತ್​ ದಂಪತಿಯ ಪುತ್ರಿ. ಫೆ.13ರಂದು ಆಕೆಯ ಹುಟ್ಟಿದ ಹಬ್ಬವಿದ್ದುದರಿಂದ ಸಿಹಿ ಅಡುಗೆ, ಬಗೆಬಗೆಯ ಭಕ್ಷ್ಯಗಳನ್ನು ಮಾಡಲಾಗಿತ್ತು. ಮನೆಗೆ ಅತಿಥಿಗಳೂ ಬಂದಿದ್ದರು. ತೇಜಸ್ವಿ ಮನೆಯ ಹೊರಗೆ ಅಲ್ಲೇ ಕಣ್ಣಿಗೆ ಕಾಣುವ ದೂರದಲ್ಲಿ ಆಟವಾಡಿಕೊಳ್ಳುತ್ತಿದ್ದರೆ, ಅತ್ತ ಆಕೆಯ ಪಾಲಕರು ಬಂದ ಅತಿಥಿಗಳಿಗೆ ಸತ್ಕಾರದಲ್ಲಿ ತೊಡಗಿದ್ದರು. ಅದ್ಯಾವ ಮಾಯದಲ್ಲಿ ತೇಜಸ್ವಿ ಅಡುಗೆ ಮನೆಗೆ ಹೋದಳೋ, ಯಾರೂ ನೋಡಲಿಲ್ಲ. ಆಗತಾನೇ ಸಾಂಬಾರನ್ನು ಕುದಿಸಿ, ಅಲ್ಲಿಯೇ ಇಡಲಾಗಿತ್ತು. ಬಾಲಕಿ ಹೋಗಿ, ಖುರ್ಚಿ ಹತ್ತಲು ಪ್ರಯತ್ನಿಸಿದ್ದಾಳೆ. ಆಯ ತಪ್ಪಿ ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದಿದ್ದಾಳೆ. ಸುಟ್ಟಗಾಯಗಳಿಂದ ನರಳುತ್ತಿದ್ದ ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಬದುಕಿಸಲು ಸಾಧ್ಯವಾಗಲಿಲ್ಲ. ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Mobile Schools: ಮಾರ್ಚ್ 1ರಿಂದ ಮೊಬೈಲ್ ಶಾಲೆಗಳನ್ನು ಪುನಾರಂಭ ಮಾಡಲು ಬಿಬಿಎಂಪಿ ನಿರ್ಧಾರ