AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

25ವರ್ಷದ ಹಿಂದೆ ತಮ್ಮ ತಾಯಿ ಸುಷ್ಮಾ ಎಂದು ಹೆಸರಿಟ್ಟ ಸಂದರ್ಭ ವಿವರಿಸಿದ ಪ್ರಧಾನಿ ಮೋದಿ; ಸುಷ್ಮಾ ಸ್ವರಾಜ್​ ಜನ್ಮದಿನದಂದು ಫೇಸ್​ಬುಕ್​ ಪೋಸ್ಟ್​

ಈಗೊಂದು 25ವರ್ಷಗಳ ಹಿಂದೆ ನಾನು ಆಗ ಗುಜರಾತ್​​ನಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆ. ಆ ಸಮಯದಲ್ಲಿ ಚುನಾವಣೆ ನಿಮಿತ್ತ ಸುಷ್ಮಾ ಸ್ವರಾಜ್​ ಜೀ ಅವರು ಗುಜರಾತ್​ಗೆ ಆಗಮಿಸಿದ್ದರು. ಅವರು ನನ್ನ ಹಳ್ಳಿ ವಡ್ನಗರಕ್ಕೆ ಭೇಟಿ ಕೊಟ್ಟಿದ್ದರು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿವರಿಸಿದ್ದಾರೆ.

25ವರ್ಷದ ಹಿಂದೆ ತಮ್ಮ ತಾಯಿ ಸುಷ್ಮಾ ಎಂದು ಹೆಸರಿಟ್ಟ ಸಂದರ್ಭ ವಿವರಿಸಿದ ಪ್ರಧಾನಿ ಮೋದಿ; ಸುಷ್ಮಾ ಸ್ವರಾಜ್​ ಜನ್ಮದಿನದಂದು ಫೇಸ್​ಬುಕ್​  ಪೋಸ್ಟ್​
ಸುಷ್ಮಾ ಸ್ವರಾಜ್​ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ
TV9 Web
| Edited By: |

Updated on:Feb 15, 2022 | 12:30 PM

Share

ಸುಷ್ಮಾ ಸ್ವರಾಜ್(Sushma Swaraj)​ -ಇದು ಭಾರತದ ಪಾಲಿಗೆ ಸದಾ ಸ್ಮರಣೀಯ ಹೆಸರು. ನಮ್ಮ ದೇಶ ಕಂಡ ಒಬ್ಬರು ಅದ್ಭುತ ರಾಜಕಾರಣಿ. ಅವರು ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವರಾದ ಮೇಲೆ ಹಲವು ದೇಶಗಳೊಂದಿಗೆ ನಮ್ಮ ರಾಷ್ಟ್ರದ ಸಂಬಂಧವನ್ನು ಉತ್ತಮಗೊಳಿಸಿದ್ದಾರೆ. ಮಾನವೀಯ ಮೌಲ್ಯಗಳ ಜತೆಗೆ ತಮ್ಮ ಇಲಾಖೆ ಆಡಳಿತ ನಡೆಸಿದ ಅವರು ತುಂಬ ಸರಳ ವ್ಯಕ್ತಿತ್ವದವರು. ಅದೆಷ್ಟೋ ಜನರ ಪಾಲಿಗೆ ಅಮ್ಮನಾಗಿದ್ದವರು. ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಯವರ ಜತೆ ರಾಜಕೀಯದಲ್ಲಿ ಪಳಗಿದ್ದ ಸುಷ್ಮಾ ಸ್ವರಾಜ್,​ ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರಿಗೂ ಆಪ್ತರು.

ನಿನ್ನೆ ಫೆಬ್ರವರಿ 14 ಸುಷ್ಮಾ ಸ್ವರಾಜ್​ ಅವರ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ಆಸಕ್ತಿಕರ ವಿಷಯವನ್ನು ದೇಶದ ಜನರೊಂದಿಗೆ ಹಂಚಿಕೊಂಡಿದ್ದಾರೆ. ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪಂಜಾಬ್​ನ ಜಲಂಧರ್​ನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಅಲ್ಲಿಂದ ವಾಪಸ್​ ಬರುತ್ತಿದ್ದಂತೆ ಫೇಸ್​ಬುಕ್​​ನಲ್ಲಿ ಪೋಸ್ಟ್ ಹಾಕಿದ್ದಾರೆ. ಸುಷ್ಮಾ ಸ್ವರಾಜ್​​ಗೆ ಸಂಬಂಧಪಟ್ಟ ಅವರ ಪೋಸ್ಟ್​ ಹೀಗಿದೆ.

‘ನಾನೀಗಷ್ಟೇ ಪಂಜಾಬ್​ ಜಲಂಧರ್​ನಲ್ಲಿ ಚುನಾವಣಾ ಪ್ರಚಾರ ಮುಗಿಸಿ ವಾಪಸ್​ ಬಂದೆ. ಇಂದು ಸುಷ್ಮಾ ಜೀ ಅವರ ಹುಟ್ಟಿದ ದಿನ. ಈ ಹೊತ್ತಲ್ಲಿ ಇದ್ದಕ್ಕಿದ್ದಂತೆ ನನಗೊಂದು ತುಂಬ ಹಳೇ ವಿಷಯ ನೆನಪಾಯ್ತು. ಸುಷ್ಮಾ ಜೀ ಅವರಿಗೆ ಸಂಬಂಧಪಟ್ಟ ಈ ವಿಚಾರವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.  ಈಗೊಂದು 25ವರ್ಷಗಳ ಹಿಂದೆ ನಾನು ಆಗ ಗುಜರಾತ್​​ನಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆ. ಆ ಸಮಯದಲ್ಲಿ ಚುನಾವಣಾ ಪ್ರವಾಸ ನಿಮಿತ್ತ ಸುಷ್ಮಾ ಸ್ವರಾಜ್​ ಜೀ ಅವರು ಗುಜರಾತ್​ಗೆ ಆಗಮಿಸಿದ್ದರು. ಅವರು ನನ್ನ ಹಳ್ಳಿ ವಡ್ನಗರಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿಗೆ ಹೋಗಿದ್ದ ಸುಷ್ಮಾ ಜೀ ನನ್ನ ತಾಯಿಯನ್ನೂ ಭೇಟಿ ಮಾಡಿ, ಮಾತುಕತೆ ನಡೆಸಿದರು. ಅದೇ ಸಮಯದಲ್ಲಿ ನಮ್ಮ ಕುಟುಂಬದಲ್ಲಿ, ನನ್ನ ಸೋದರಳಿಯನಿಗೆ ಹೆಣ್ಣು ಮಗು ಜನಿಸಿತ್ತು.  ಅದಾಗಲೇ ಜ್ಯೋತಿಷಿಗಳು ಅವಳ ಜಾತಕವನ್ನೆಲ್ಲ ನೋಡಿದ್ದರು. ಯಾವ ಹೆಸರು ಇಡುವುದು ಎಂದೂ ನಿರ್ಧರಿತವಾಗಿತ್ತು. ಆದರೆ ಸುಷ್ಮಾ ಜೀ ನಮ್ಮ ಮನೆಗೆ ಭೇಟಿ ಕೊಟ್ಟು ಹೋದ ತಕ್ಷಣ ನನ್ನ ಅಮ್ಮ ಮಗುವಿಗೆ  ಸುಷ್ಮಾ ಎಂದೇ ಹೆಸರಿಟ್ಟರು. ಅದಾಗಲೇ ಮನೆಯಲ್ಲಿ ನಿರ್ಧರಿತವಾದ ಹೆಸರು ಬೇಡವೆಂದು ತೀರ್ಮಾನವಾಯಿತು. ನನ್ನ ತಾಯಿ ಶಿಕ್ಷಣವಂತರಲ್ಲ. ಆದರೆ ಅವರ ಕಲ್ಪನೆಗಳು, ಯೋಚನೆಗಳಲ್ಲಿ ಹೊಸತನ ಇರುತ್ತದೆ. ಅಂದು ಸುಷ್ಮಾ ಎಂಬ ಹೆಸರನ್ನು ಯಾಕೆ ಇಟ್ಟ ಎಂಬುದಕ್ಕೆ ಕಾರಣ ಕೊಡುವಾಗ ತುಂಬ ಚೆನ್ನಾಗಿ ಮಾತನಾಡಿದ್ದರು. ಅದೆಲ್ಲವೂ ನನಗೆ ಇನ್ನೂ ನೆನಪಿದೆ ಎಂದು ಪೋಸ್ಟ್ ಹಾಕಿದ್ದಾರೆ. ಹಾಗೇ, ಸುಷ್ಮಾ ಜೀ ಅವರಿಗೆ ಗೌರವ ಸಮರ್ಪಿಸಿದ್ದಾರೆ.

ಸುಷ್ಮಾ ಸ್ವರಾಜ್​ ಒಬ್ಬರು ಗಟ್ಟಿಗಿತ್ತಿ ಎಂಬುದರಲ್ಲಿ ಸಂಶಯವೇ ಇಲ್ಲ. ಭಾಷಣಕ್ಕೆ ನಿಂತರೆ ಎದುರಿನವರನ್ನು ಮೋಡಿ ಮಾಡುವಷ್ಟು ಶಕ್ತಿ. ಕೆಲಸ ಎಂದು ಬಂದರೆ ಅಚ್ಚುಕಟ್ಟು. ಎಂಥ ಸಂದರ್ಭವನ್ನೂ ಗಟ್ಟಿಯಾಗಿ ನಿಂತು ಎದುರಿಸುವ ಆತ್ಮವಿಶ್ವಾಸ ತುಂಬಿದ್ದ ಸುಷ್ಮಾ ಸ್ವರಾಜ್​ ಭಾರತದ ವಿದೇಶಾಂಗ ವ್ಯವಹಾರ ಇಲಾಖೆಗೆ ಹೊಸ ಸ್ವರೂಪವನ್ನೇ ಕೊಟ್ಟಿದ್ದಾರೆ ಎಂದರೂ ತಪ್ಪಾಗಲಾರದು. ಅವರು ಆಗಸ್ಟ್​ 6ರ 2019ರಲ್ಲಿ ಮೃತಪಟ್ಟಾಗ ಪಾಕಿಸ್ತಾನವೂ ಸೇರಿ, ಅದೆಷ್ಟೋ ವಿದೇಶಿ ನಾಯಕರೂ ಕಂಬನಿ ಮಿಡಿದಿದ್ದಾರೆ. ಅದು ಸುಷ್ಮಾ ಸ್ವರಾಜ್​ ಸಂಪಾದಿಸಿದ್ದ ಪ್ರೀತಿ.

ಇದನ್ನೂ ಓದಿ: ಬೆಂಗಳೂರಿನ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ನೋಟಿಸ್ ಜಾರಿ ಮಾಡಿದ ಧಾರ್ಮಿಕ ದತ್ತಿ ಇಲಾಖೆ

Published On - 11:47 am, Tue, 15 February 22

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ