ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ. ಈ ವೇಳೆ ರೈಲ್ವೆ ಇಲಾಖೆ ವಿಸ್ತರಣೆಗೆ ಹೆಚ್ಚು ಒತ್ತು ನೀಡಿದ್ದಾರೆ. ಇನ್ನು, ಬೆಂಗಳೂರು ಮೆಟ್ರೋ ಯೋಜನೆ ವಿಸ್ತರಣೆಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ ಸಿಕ್ಕಿದೆ.
ಬೆಂಗಳೂರು ಮೆಟ್ರೊದ 2ಎ, 2 ಬಿ ಯೋಜನೆಯಡಿ 58.19 ಕಿಮೀ ವಿಸ್ತರಣೆಗಾಗಿ ಅನುದಾನ ಘೋಷಣೆ ಆಗಿದೆ. ಮೆಟ್ರೋ ವಿಸ್ತರಣೆಗೆ ಕೇಂದ್ರ ಸರ್ಕಾರ 14,778 ಕೋಟಿ ರೂಪಾಯಿ ಹಣ ನೀಡುತ್ತಿದೆ. ಮೆಟ್ರೊ ವಿಸ್ತರಣೆ ಆದರೆ, ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಆಗಲಿದೆ.
ಇದರ ಜೊತೆಗೆ ಚೆನ್ನೈ ಮತ್ತು ಕೇರಳದ ಎರಡನೇ ಫೇಸ್ ಮೆಟ್ರೊ ನಿರ್ಮಾಣಕ್ಕೂ ಹಸಿರು ನಿಶಾನೆ ತೋರಲಾಗಿದೆ. ಕೊಚ್ಚಿ ಮೆಟ್ರೋ ಪೇಸ್-2ಗೆ 1.7 ಸಾವಿರ ಕೋಟಿ ಮೀಸಲು ಇಡಲಾಗಿದೆ.
2023ರ ವೇಳೆಗೆ ಎಲ್ಲಾ ಬ್ರಾಡ್ಗೇಜ್ ಮಾರ್ಗವನ್ನು ಸಂಪೂರ್ಣವಾಗಿ ವಿದ್ಯುದೀಕರಣಗೊಳಿಸಲಾಗುವುದು ಈ ಮೂಲಕ ಹಣದ ಉಳಿತಾಯಕ್ಕೆ ಒತ್ತು ನೀಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ನಮ್ಮ ಮೆಟ್ರೋ ಯೋಜನೆ ವೇಳೆ ಎಷ್ಟು ಮರ ಉಳಿಸೋಕಾಗುತ್ತದೋ ಉಳಿಸಿ.. ತಜ್ಞರ ಸಮಿತಿಗೆ ಹೈಕೋರ್ಟ್ ಸೂಚನೆ