‘ಕಾದು ನೋಡೋಣ’: ‘ಸನಾತನ ಧರ್ಮ’ ಹೇಳಿಕೆ ಬಗ್ಗೆ ಪವನ್ ಕಲ್ಯಾಣ್ ಟೀಕೆಗೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ

|

Updated on: Oct 04, 2024 | 4:46 PM

ಆಂಧ್ರಪ್ರದೇಶದ ತಿರುಪತಿಯಲ್ಲಿ ಗುರುವಾರ ನಡೆದ ಸಭೆಯನ್ನುದ್ದೇಶಿಸಿ, ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ‘ಲಡ್ಡು’ಗಳಲ್ಲಿ ಕಲಬೆರಕೆ ಆರೋಪದ ನಡುವೆಯೇ ಕಲ್ಯಾಣ್, ‘ಸನಾತನ ಧರ್ಮವನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಜನಸೇನಾ ಮುಖ್ಯಸ್ಥರು ಯಾರನ್ನೂ ಹೆಸರಿಸದಿದ್ದರೂ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಉದಯನಿಧಿ ಅವರು ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿದ್ದರು.

‘ಕಾದು ನೋಡೋಣ’: ‘ಸನಾತನ ಧರ್ಮ’ ಹೇಳಿಕೆ ಬಗ್ಗೆ ಪವನ್ ಕಲ್ಯಾಣ್ ಟೀಕೆಗೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ
ಉದಯನಿಧಿ ಸ್ಟಾಲಿನ್
Follow us on

ಚೆನ್ನೈ ಅಕ್ಟೋಬರ್ 04: ಸನಾತನ ಧರ್ಮದ ಕುರಿತು ಕಳೆದ ವರ್ಷ ಡಿಎಂಕೆ ನಾಯಕ ನೀಡಿದ ಹೇಳಿಕೆಯ ಕುರಿತು ಆಂಧ್ರಪ್ರದೇಶದ ಪವನ್ ಕಲ್ಯಾಣ್ ಅವರು ತಮ್ಮ ಮೇಲೆ ಮೌಖಿಕ ದಾಳಿ ನಡೆಸಿದ್ದಕ್ಕೆ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ.”ನಾವು ಕಾದು ನೋಡೋಣ” ಎಂದು ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಆಂಧ್ರಪ್ರದೇಶದ ತಿರುಪತಿಯಲ್ಲಿ ಗುರುವಾರ ನಡೆದ ಸಭೆಯನ್ನುದ್ದೇಶಿಸಿ, ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ‘ಲಡ್ಡು’ಗಳಲ್ಲಿ ಕಲಬೆರಕೆ ಆರೋಪದ ನಡುವೆಯೇ ಕಲ್ಯಾಣ್, ‘ಸನಾತನ ಧರ್ಮವನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಜನಸೇನಾ ಮುಖ್ಯಸ್ಥರು ಯಾರನ್ನೂ ಹೆಸರಿಸದಿದ್ದರೂ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಉದಯನಿಧಿ ಅವರು ಸನಾತನ ಧರ್ಮದ ನಿರ್ಮೂಲನೆಗೆ ಕರೆ ನೀಡಿದ್ದರು. ಉದಯನಿಧಿ ಅವರು ಅದನ್ನು ಮಲೇರಿಯಾ, ಡೆಂಗ್ಯೂ ಮತ್ತು ಕೊರೊನಾವೈರಸ್ ಗೆ ಹೋಲಿಸಿದ್ದರು.

ಏತನ್ಮಧ್ಯೆ, ಕಲ್ಯಾಣ್ ಅವರು ತಮ್ಮ ತಿರುಪತಿ ಭಾಷಣದಲ್ಲಿ ಸನಾತನ ಧರ್ಮವನ್ನು ‘ರಕ್ಷಿಸಲು’ ‘ಬಲವಾದ ರಾಷ್ಟ್ರೀಯ ಕಾಯ್ದೆ’ಗೆ ಕರೆ ನೀಡಿದರು. “ಸನಾತನ ಧರ್ಮದ ನಂಬಿಕೆಗಳಿಗೆ ಧಕ್ಕೆ ತರುವ ಕ್ರಮಗಳನ್ನು ತಡೆಯಲು ಪ್ರಬಲ ರಾಷ್ಟ್ರೀಯ ಕಾಯಿದೆಯ ಅಗತ್ಯವಿದೆ. ಇದನ್ನು ಏಕರೂಪವಾಗಿ ಮತ್ತು ತಕ್ಷಣವೇ ಭಾರತದಾದ್ಯಂತ ಜಾರಿಗೊಳಿಸಬೇಕು ”ಎಂದು ನಟ-ರಾಜಕಾರಣಿ ಪವನ್ ಕಲ್ಯಾಣ್ ಹೇಳಿದ್ದಾರೆ.

“ಈ ಕಾಯಿದೆಯ ಅನುಷ್ಠಾನದ ಮೇಲ್ವಿಚಾರಣೆಗೆ ‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪಿಸಬೇಕು. ಈ ಮಂಡಳಿ ಮತ್ತು ಅದರ ಚಟುವಟಿಕೆಗಳನ್ನು ಬೆಂಬಲಿಸಲು ವಾರ್ಷಿಕ ಹಣವನ್ನು ವಿನಿಯೋಗಿಸಬೇಕು. ಇದಲ್ಲದೆ, ಕಲ್ಯಾಣ್ ಅವರು ಸನಾತನ ಧರ್ಮದ ಬಗ್ಗೆ ‘ಮಾನಹಾನಿಕರ’ ಅಥವಾ ‘ದ್ವೇಷ ಹರಡುವ’ ವಿರುದ್ಧ ‘ಅಸಹಕಾರ ಚಳುವಳಿ’ಗೆ ಕರೆ ನೀಡಿದ್ದಾರೆ.

ದೇವಾಲಯಗಳಲ್ಲಿ ನೈವೇದ್ಯ ಮತ್ತು ಪ್ರಸಾದದಲ್ಲಿ ಬಳಸುವ ವಸ್ತುಗಳ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ‘ಸನಾತನ ಧರ್ಮ ಪ್ರಮಾಣೀಕರಣ’ವನ್ನು ಜಾರಿಗೊಳಿಸಬೇಕು. ‘ಅವರು’ ನಿರಪರಾಧಿ ಅಲ್ಲ ಎಂದು ನಾನು ಅತ್ಯುನ್ನತ ನ್ಯಾಯಾಂಗಕ್ಕೆ ತಿಳಿಸಲು ಬಯಸುತ್ತೇನೆ ಎಂದು ಆಂಧ್ರದ ಉಪ ಮುಖ್ಯಮಂತ್ರಿ ಹೇಳಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಟಾಯ್ಲೆಟ್ ಸೀಟ್ ಟ್ಯಾಕ್ಸ್?; ಇದೆಲ್ಲ ಆಧಾರರಹಿತ ಎಂದ ಸಿಎಂ ಸುಖವಿಂದರ್ ಸಿಂಗ್ ಸುಖು

‘ಅವರು’ ಉಲ್ಲೇಖವು ಬಹುಶಃ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರದ್ದಾಗಿತ್ತು. ಅವರ ಉತ್ತರಾಧಿಕಾರಿ ಎನ್ ಚಂದ್ರಬಾಬು ನಾಯ್ಡು, ಹಾಲಿ ಸಿಎಂ, ಕಲಬೆರಕೆ ಆರೋಪದ ಬಗ್ಗೆ ಮೊದಲು ಮಾತನಾಡಿದ್ದು, ಇದು ರೆಡ್ಡಿ ಆಡಳಿತದಲ್ಲಿ ನಡೆದಿದೆ ಎಂದು ಹೇಳಿದರು. ರೆಡ್ಡಿ ಆರೋಪವನ್ನು ನಿರಾಕರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ