ನಮ್ಮ ಶಿಕ್ಷಣ ಮುಂದುವರಿಸಲು ದಾರಿ ಮಾಡಿಕೊಡಿ; ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಆಗ್ರಹ, ಪ್ರತಿಭಟನೆ

| Updated By: Lakshmi Hegde

Updated on: Apr 17, 2022 | 9:16 PM

ಈ ಮಧ್ಯೆ ವಿದ್ಯಾರ್ಥಿಗಳ ಪಾಲಕರೂ ಕೂಡ ಬೇಡಿಕೆ ಇಡುತ್ತಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಮಕ್ಕಳ ಜೀವ ಕಾಪಾಡಿದೆ. ಹಾಗೇ, ಅವರ ಶಿಕ್ಷಣ ಮುಂದುವರಿಯಲು ಸಹಾಯ ಮಾಡಿ, ಭವಿಷ್ಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಶಿಕ್ಷಣ ಮುಂದುವರಿಸಲು ದಾರಿ ಮಾಡಿಕೊಡಿ; ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಆಗ್ರಹ, ಪ್ರತಿಭಟನೆ
ವಿದ್ಯಾರ್ಥಿಗಳ ಪ್ರತಿಭಟನೆ
Follow us on

ಯುದ್ಧ ಪೀಡಿತ ಉಕ್ರೇನ್​ನಿಂದ ಭಾರತಕ್ಕೆ ಬಂದ ಅನೇಕ ವಿದ್ಯಾರ್ಥಿಗಳು ದೆಹಲಿಯ ಜಂತರ್​-ಮಂತರ್​​ನಲ್ಲಿ ಒಟ್ಟಿಗೇ ಸೇರಿ, ತಮಗೆ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ನೀಡಬೇಕು. ಅರ್ಧಕ್ಕೆ ನಿಂತ ವೃತ್ತಿಯನ್ನು ಮುಂದುವರಿಸಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.  ಉಕ್ರೇನ್​ನಲ್ಲಿ ಭಾರತದ ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದರು. ಆದರೆ ಫೆ.24ರಿಂದ ರಷ್ಯಾ ಯುದ್ಧ ಶುರು ಮಾಡಿತು. ಅಲ್ಲಿ ವಸತಿ, ಆಹಾರ, ಶಿಕ್ಷಣಕ್ಕೆಲ್ಲ ಸಮಸ್ಯೆಯಾಯಿತು. ಜೀವ ಉಳಿಸಿಕೊಳ್ಳಲೂ ಕಷ್ಟಪಡುವ ಪರಿಸ್ಥಿತಿ ಈ ವಿದ್ಯಾರ್ಥಿಗಳಿಗೆ ಬಂದೊದಗಿತು.  ಆ ಸಂದರ್ಭದಲ್ಲಿ ಅವರ ಕೈ ಹಿಡಿದಿದ್ದು ಭಾರತದ ಸರ್ಕಾರ. ಆಪರೇಶನ್​ ಗಂಗಾ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ, ಎಲ್ಲ ವಿದ್ಯಾರ್ಥಿಗಳನ್ನೂ ಭಾರತಕ್ಕೆ ಕರೆತಂದಿದೆ. ಅವರು ಭಾರತಕ್ಕೇನೋ ಬಂದಿದ್ದಾರೆ. ಆದರೆ ಅಲ್ಲಿ ಅರ್ಧಕ್ಕೆ ಮೊಟಕುಗೊಂಡ ಶಿಕ್ಷಣ ಮುಂದುವರಿಸುವುದು ಅವರಿಗೆ ಈಗ ಸಮಸ್ಯೆಯಾಗಿದೆ. ಕೆಲವು ರಾಜ್ಯಗಳು ತಾವು ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ಹೊರುವುದಾಗಿ ಹೇಳಿಕೊಂಡಿದ್ದರೂ, ಕೇಂದ್ರ ಸರ್ಕಾರ ಮುಂದಾಗಿ ಒಂದು ನಿಯಮ ತರಬೇಕು ಎಂಬುದು ಸದ್ಯ ಕೇಳಿಬರುತ್ತಿರುವ ಬೇಡಿಕೆ.

ಈ ಮಧ್ಯೆ ವಿದ್ಯಾರ್ಥಿಗಳ ಪಾಲಕರೂ ಕೂಡ ಬೇಡಿಕೆ ಇಡುತ್ತಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಮಕ್ಕಳ ಜೀವ ಕಾಪಾಡಿದೆ. ಹಾಗೇ, ಅವರ ಶಿಕ್ಷಣ ಮುಂದುವರಿಯಲು ಸಹಾಯ ಮಾಡಿ, ಭವಿಷ್ಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಉಕ್ರೇನ್​ನಿಂದ ಪಶ್ಚಿಮ ಬಂಗಾಳಕ್ಕೆ ಅನೇಕ ವಿದ್ಯಾರ್ಥಿಗಳು ಬಂದಿದ್ದಾರೆ. ಹಾಗೇ, ಇನ್ನಿತರ ರಾಜ್ಯಗಳಿಗೂ ವಾಪಸ್ ಆಗಿದ್ದಾರೆ. ಅವರಿಗೆಲ್ಲ ಇಲ್ಲಿನ ಕಾಲೇಜುಗಳಲ್ಲಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳಿ ಎಂದು ಹೇಳಿದ್ದರು. ಸದ್ಯ ಈ ಬಗ್ಗೆಯೇ ಚರ್ಚೆಯಾಗುತ್ತಿದೆ. ಉಕ್ರೇನ್​ನಲ್ಲಿ ಶಿಕ್ಷಣ ಕ್ರಮ ಬೇರೆಯಾಗಿರುತ್ತದೆ. ಹೀಗಾಗಿ ಅಲ್ಲಿಂದ ಬಂದವರಿಗೆ ಒಮ್ಮೆಲೇ ಇಲ್ಲಿ ಅವಕಾಶ ಕೊಡುವುದು ಕಷ್ಟ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ಕಾನೂನು, ಸಂವಿಧಾನ ನಮಗಲ್ಲ ಅಂದ್ರೆ, ಅವರು ಈ ದೇಶದ ನಾಗರಿಕರಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ