ಕಾನೂನು, ಸಂವಿಧಾನ ನಮಗಲ್ಲ ಅಂದ್ರೆ, ಅವರು ಈ ದೇಶದ ನಾಗರಿಕರಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ
ಮತಾಂಧರು ನಿನ್ನೆ ಗ್ರಾಫಿಕ್ ಎನಿಮೇಶನ್ ಇಟ್ಟುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇಗಾಗಲೇ ನಾವು ಎಲ್ಲ ವಿವರ ಪಡೆದಿದ್ದೇವೆ. ಯಾರೇ ಇದ್ರೂ ಅವರನ್ನು ಒಳಗಡೆ ಹಾಕಬೇಕು.
ಹುಬ್ಬಳ್ಳಿ: ನಿನ್ನೆ ಒಂದು ದೊಡ್ಡ ಗುಂಪು ಕಾನೂನು (Law) ಕೈಗೆ ತಗೆದುಕೊಂಡಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ, ವಾಹನ ಜಕಂ ಮಾಡಿದ್ದಾರೆ. ಓಣಿಯಲ್ಲಿ ಕಲ್ಲು ಎಸೆದು ಅರಾಜಕತೆ ಸೃಷ್ಟಿ ಮಾಡಿದ್ದು, ಇದನ್ನು ನಮ್ಮ ಸರ್ಕಾರ ಸಹಿಸೋದಿಲ್ಲ ಎಂದು ನಗರದ ದಿಡ್ಡಿಕೇರಿ ಓಣಿಯಲ್ಲಿರುವ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಮಾಬ್ನಲ್ಲಿ ಏನೋ ಮಾಡಿದೀವಿ ಅಂದ್ರೆ ನಡೆಯೋದಿಲ್ಲ. ಕಾನೂನು, ಸಂವಿಧಾನ ನಮಗಲ್ಲ ಅಂದ್ರೆ, ಅವರು ಈ ದೇಶದ ನಾಗರಿಕರಲ್ಲ ಅನ್ನೋ ಅನುಮಾನ ಬರತ್ತೆ. ಇದರ ಹಿಂದೆ ಮತೀಯ ಸಂಘಟನೆಗಳಿದ್ರೆ ಅದು ಹೊರಗೆ ಬರತ್ತೆ. ಕಂಪ್ಲೇಟ್ ಕೊಟ್ಟು ಕೆಲವರು ವಾಪಸ್ ಬಂದಿದ್ದಾರೆ. ಯಾರೇ ಇದ್ರೂ ಪೊಲೀಸರು ಕ್ರಮ ಕೈಗೊಳುತ್ತಾರೆ. ಇಲ್ಲಿ ಇಂಟಲಿಜೆನ್ಸ್ ಫೆಲ್ಯೂವರ್ ಏನ್ ಆಗಿಲ್ಲ. ಮತೀಯ ಸಂಘಟನೆಗಳನ್ನ ಹದ್ದ ಬಸ್ತಿನಲ್ಲಿಡೋ ಅವಶ್ಯಕತೆ ಇದೆ. ಹಿಂದಿನ ಸರ್ಕಾರ ಅಂತಹ ಸಂಘಟನೆಗಳನ್ನು ತುಷ್ಟೀಕರಣ ಮಾಡಿವೆ. ಕಾಂಗ್ರೆಸ್ನವರಿಗೆ ಬೇರೆ ಏನೂ ಇಸ್ಯೂ ಇಲ್ಲ. ಅವರು ಹುಬ್ಬಳ್ಳಿಯಲ್ಲಿ ಇಂತಹ ಘಟನೆ ನಡೆದರೂ ಖಂಡಿಸೋ ಸೌಜನ್ಯ ಇಲ್ಲ. ಡಿಜೆ ಕೆಜಿ ಹಳ್ಳಿಗೂ ಸಾಮ್ಯತೆ ಇದೆ ಎಂದು ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕೇಂದ್ರದ ಗಣಿ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಮತಾಂಧರು ನಿನ್ನೆ ಗ್ರಾಫಿಕ್ ಎನಿಮೇಶನ್ ಇಟ್ಟುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇಗಾಗಲೇ ನಾವು ಎಲ್ಲ ವಿವರ ಪಡೆದಿದ್ದೇವೆ. ಯಾರೇ ಇದ್ರೂ ಅವರನ್ನು ಒಳಗಡೆ ಹಾಕಬೇಕು. ಕಾರ್ಪೋರೇಟ್ ಇರಲಿ, ಅವರ ಮನೆಯವರಿರಲಿ, ಯಾರೇ ಇದ್ರೂ ಒಳಗಡೆ ಹಾಕಬೇಕು. ಅತ್ಯಂತ ಕಠಿಣ ಕಾನೂನು ಕ್ರಮ ನಾನು ಕೈಗೊಳುತ್ತೇನೆ. ಪೊಲೀಸ್ ಠಾಣೆ ಬಲಪಡಿಸೋ ಕೆಲಸ ಮಾಡ್ತೀವಿ. ಪೂರ್ತಿ ತಯಾರಿ ಮಾಡಿಕೊಂಡು ಮತೀಯ ಸಂಘಟನೆ ಬ್ಯಾನ್ ಮಾಡ್ತೀವಿ ಎಂದು ಹೇಳಿದರು.
ಸೆಕ್ಯೂರ್ ಆಸ್ಪತ್ರೆಗೆ ಭೇಟಿ ನಿಡಿದ ಸಚಿವ ಆರಗ ಜ್ಞಾನೇಂದ್ರ, ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುವ ಇನ್ಸ್ಪೆಕ್ಟರ್ ಕಾಡದೇವರಮಠ ಮತ್ತು ಪೇದೆ ಗುರುಪಾದಪ್ಪ ಸ್ವಾದಿ ಆರೋಗ್ಯ ವಿಚಾರಿಸಿದ್ದಾರೆ. ಎ.ಡಿ ಜೀಪಿ ಪ್ರತಾಪ್ ರೆಡ್ಡಿ (ಕಾನೂನು ಮತ್ತು ಸುವ್ಯವಸ್ಥೆ) ಜೊತೆ ದುರ್ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯ ಕೊಠಡಿಯಲ್ಲೇ ಪ್ರತಾಪ್ ರೆಡ್ಡಿ ಜೊತೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೀಟಿಂಗ್ ಮಾಡಿದ್ದಾರೆ.
ಹುಬ್ಬಳ್ಳಿ ನಗರದ ದಿಡ್ಡಿಕೇರಿ ಓಣಿಯಲ್ಲಿರುವ ಹನುಮಂತನ ದೇವಸ್ಥಾನಕ್ಕೆ ಪ್ರಹ್ಲಾದ್ ಜೋಶಿ, ಆರಗ ಜ್ಞಾನೇಂದ್ರ ಭೇಟಿ ಹಿನ್ನೆಲೆ ಜನರು ಸೇರಿದ್ದರು. ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆ ಪೊಲೀಸರು ಜನರನ್ನು ಕಳಿಸಿದ್ದಾರೆ. ನಿನ್ನೆ ರಾತ್ರಿ ಹನುಮಂತನ ದೇವಸ್ಥಾನದ ಮೇಲೆ ಕಲ್ಲು ತೂರಿದ್ದು, ಪ್ರಹ್ಲಾದ್ ಜೋಶಿ, ಆರಗ ಜ್ಞಾನೇಂದ್ರ, ಶೆಟ್ಟರ್ ದೇಗುಲ ಪರಿಶೀಲಿಸಿದ್ದಾರೆ. ಹನುಮಂತ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಆರಗ ಜ್ಞಾನೇಂದ್ರ, ಬಳಿಕ ಹಳೇ ಹುಬ್ಬಳ್ಳಿ ಠಾಣೆಗೆ ಭೇಟಿ ನೀಡಿ ಹು-ಧಾ ನಗರ ಪೊಲೀಸರಿಂದ ಮಾಹಿತಿ ಪಡೆದುಕೊಂಡರು.
ಎಲ್ಲೋ ಗಲಭೆಗಳಾದರೆ ಗೃಹ ಸಚಿವ, ಸಿಎಂ ಜವಾಬ್ದಾರರೇ?
ಚಿತ್ರದುರ್ಗ: ಆ ರೀತಿಯ ಘಟನೆಗಳು ನಡೆಯಬಾರದು. ಗಲಭೆ ತಡೆಯಲು ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಎಲ್ಲೋ ಗಲಭೆಗಳಾದರೆ ಗೃಹ ಸಚಿವ, ಸಿಎಂ ಜವಬ್ದಾರರೇ ಎಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಗಲಭೆಗೆ ಯಾರೇ ಕಾರಣ ಆಗಿದ್ದರೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿ. ಹೊಸಪೇಟೆಯಲ್ಲಿ 2 ದಿನದ ಬಿಜೆಪಿ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಲಾಗಿದೆ. ಮುಂಬರುವ ಚುನಾವಣೆ ತಂತ್ರಗಾರಿಕೆ ಬಗ್ಗೆ ಚರ್ಚೆ ಆಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಚರ್ಚೆ ಮಾಡಿದ್ದು, ಮತ್ತೆ ರಾಜ್ಯದಾದ್ಯಂತ ನಾವು ಪ್ರವಾಸ ಮಾಡುತ್ತೇವೆ. 150ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತೇವೆ. ಮೋದಿ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:
ಪುನೀತ್ ಧ್ವನಿಯಲ್ಲಿಯೇ ಪ್ರದರ್ಶನ ಕಾಣಲಿದೆ ‘ಜೇಮ್ಸ್’; ಹೇಗೆ? ಎಂದಿನಿಂದ? ಅಪ್ಪು ಅಭಿಮಾನಿಗಳಿಗಿದು ಖುಷಿಯ ವಿಚಾರ
Published On - 8:35 pm, Sun, 17 April 22