ಕಲಾಂ ಅವರ ದೂರದೃಷ್ಟಿ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿದೆ: ಅಮಿತ್ ಶಾ
ಪ್ರಧಾನಿ ಮೋದಿಯವರ ನಾಯಕತ್ವದ ಅಡಿಯಲ್ಲಿ ನಮ್ಮ ವಿದ್ಯಾರ್ಥಿಗಳು, ಯುವಕರು ಮತ್ತು ಅವರ ಸ್ಟಾರ್ಟ್‌ಅಪ್‌ಗಳಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಅವಕಾಶಗಳು ಮುಕ್ತವಾಗಿವೆ. ಎಪಿಜೆ ಅಬ್ದುಲ್ ಕಲಾಂ ಅವರ ಬಾಹ್ಯಾಕಾಶ ವಿಜ್ಞಾನದ ಸಾಧನೆಗಳ ಕನಸು, ಪ್ರಧಾನಿ ಮೋದಿಯವರ ಆವಿಷ್ಕಾರಗಳು ಮತ್ತು ಹೊಸ ಉಪಕ್ರಮಗಳಿಂದ ನನಸಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ರಾಮೇಶ್ವರಂ ಜುಲೈ 29: ವಿಜ್ಞಾನಿ ಮತ್ತು ದಿವಂಗತ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ (APJ Abdul Kalam) ಅವರ ದೃಷ್ಟಿಕೋನದೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ದೇಶವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)ಹೇಳಿದ್ದಾರೆ. ತಮಿಳುನಾಡಿನ ರಾಮೇಶ್ವರಂನಲ್ಲಿ ‘ಡಾ ಎಪಿಜೆ ಅಬ್ದುಲ್ ಕಲಾಂ, ಮೆಮೊರೀಸ್ ನೆವರ್ ಡೈ” ಪುಸ್ತಕದ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾ, ಭಾರತದ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಕಲಾಂ ಅವರ ಅದ್ಭುತ ಸೇವೆಗಳನ್ನು ಸ್ಮರಿಸಿದ್ದಾರೆ.
ಪ್ರಧಾನಿ ಮೋದಿಯವರ ನಾಯಕತ್ವದ ಅಡಿಯಲ್ಲಿ ನಮ್ಮ ವಿದ್ಯಾರ್ಥಿಗಳು, ಯುವಕರು ಮತ್ತು ಅವರ ಸ್ಟಾರ್ಟ್‌ಅಪ್‌ಗಳಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಅವಕಾಶಗಳು ಮುಕ್ತವಾಗಿವೆ. ಎಪಿಜೆ ಅಬ್ದುಲ್ ಕಲಾಂ ಅವರ ಬಾಹ್ಯಾಕಾಶ ವಿಜ್ಞಾನದ ಸಾಧನೆಗಳ ಕನಸು, ಪ್ರಧಾನಿ ಮೋದಿಯವರ ಆವಿಷ್ಕಾರಗಳು ಮತ್ತು ಹೊಸ ಉಪಕ್ರಮಗಳಿಂದ ನನಸಾಗಲಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತವು ಇಡೀ ಜಗತ್ತನ್ನು ಮುನ್ನಡೆಸುತ್ತದೆ ಎಂದು ನಾನು ನಂಬುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.
ದಿವಂಗತ ಮಾಜಿ ರಾಷ್ಟ್ರಪತಿಯವರ ಹೆಜ್ಜೆಗಳನ್ನು ಅನುಸರಿಸಿ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ 55 ಬಾಹ್ಯಾಕಾಶ ನೌಕೆ ಕಾರ್ಯಾಚರಣೆಗಳು, 50 ಉಡಾವಣಾ ವಾಹನ ಕಾರ್ಯಾಚರಣೆಗಳು ಮತ್ತು 11 ವಿದ್ಯಾರ್ಥಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಒಂದೇ ಹಾರಾಟದಲ್ಲಿ ದಾಖಲೆಯ 104 ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು (ಪಿಎಸ್‌ಎಲ್‌ವಿ-ಸಿ 37, ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಮತ್ತು ಉಪಗ್ರಹದ ಮರು-ಪ್ರವೇಶ (ಭೂಮಿಯ ವಾತಾವರಣಕ್ಕೆ) ಪ್ರಯೋಗವೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಶಾ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ರ್ಯಾಲಿಯನ್ನುದ್ದೇಶಿಸಿ ಅಮಿತ್ ಶಾ ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರ ‘ಎನ್ ಮಣ್ಣ್ ಎನ್ ಮಕ್ಕಳ್’ (ನನ್ನ ಭೂಮಿ, ನನ್ನ ಜನರು) ರಾಜ್ಯಾದ್ಯಂತ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಮಾಜಿ ರಾಷ್ಟ್ರಪತಿಯವರ ಬದುಕಿನ ಪಯಣ ಬಗ್ಗೆ ಮಾತನಾಡಿದ ಶಾ, ಕಲಾಂ ಅವರು ‘ಪೇಪರ್ ಬಾಯ್’ ಆಗಿ ಪತ್ರಿಕೆಗಳನ್ನು ವಿತರಿಸುತ್ತಿದ್ದರು. ನಂತರ ರಾಷ್ಟ್ರಕ್ಕಾಗಿ ಕೆಲಸ ಮಾಡುವ ಮೂಲಕ ಪತ್ರಿಕೆಗಳಲ್ಲೇ ಸುದ್ದಿಯಾದರು.ಅಂತಿಮವಾಗಿ ಭಾರತದ ರಾಷ್ಟ್ರಪತಿಗಳ ಉನ್ನತ ಹುದ್ದೆಗೇರಿದರು. ಕಲಾಂ ಅವರು ತಮ್ಮ ಕಾರ್ಯಗಳಿಂದಲೇ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದರು. ಜನರು ಅವರನ್ನು ‘ಜನರ ರಾಷ್ಟ್ರಪತಿ’ ಎಂದು ನೆನಪಿಸಿಕೊಳ್ಳುತ್ತಾರೆ.
ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ, ಒಮ್ಮೆ ಅವರನ್ನು ಭೇಟಿ ಮಾಡಿದ ಜನರು ಒಂಬತ್ತು ದಿನಗಳ ಕಾಲ ರಾಷ್ಟ್ರಪತಿ ಭವನದಲ್ಲಿ ತಂಗಿದ್ದರು. ಆಗ ಕಲಾಂ ಅವರು ಶಿಷ್ಟಾಚಾರದ ಪ್ರಕಾರ ರಾಜ್ಯ ಅತಿಥಿಗಳಾಗಿದ್ದರೂ ಅವರ ವಾಸ್ತವ್ಯಕ್ಕಾಗಿ ಸರ್ಕಾರಕ್ಕೆ 9.52 ಲಕ್ಷ ರೂ. ಪಾವತಿ ಮಾಡಿದ್ದರು ಎಂದು ಶಾ ಹೇಳಿದ್ದಾರೆ.
ಇದನ್ನೂ ಓದಿ: Akhil Bharatiya Shiksha Samagam: ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ: ಮೋದಿ
ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಅವರೊಂದಿಗಿನ ಸಭೆಯ ನಂತರ, ದಿವಂಗತ ರಾಷ್ಟ್ರಪತಿಗಳು ಅಂತಹ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗಳಿಗೆ ತಮ್ಮ ಗೌರವವನ್ನು ತೋರಿಸಿದರು. ಅವರಿಗೆ ಬಾಕಿ ಇರುವ ಪಾವತಿಯನ್ನು ಪೂರ್ವಾವಲೋಕನದಿಂದ ಜಾರಿಗೆ ತರಲಾಯಿತು. ಕಲಾಂ ಅವರ ಸರಳತೆಯನ್ನು ಶ್ಲಾಘಿಸಿದ ಶಾ, ಕೇವಲ ಎರಡು ಸೂಟ್‌ಕೇಸ್‌ಗಳೊಂದಿಗೆ ರಾಷ್ಟ್ರಪತಿ ಭವನವನ್ನು ರಾಷ್ಟ್ರಪತಿಯಾಗಿ ಪ್ರವೇಶಿಸಿದ ಏಕೈಕ ವ್ಯಕ್ತಿ ಕಲಾಂ ಎಂದು ಹೇಳಿದರು. ಅವರು ಕಚೇರಿಯಿಂದ ಹೊರಬಂದಾಗಲೂ ಅದೇ ರೀತಿ ಮರಳಿದ್ದರು ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ