ಎನ್‌ಇಪಿ ವಿಷಯದಲ್ಲಿ ಸ್ಟಾಲಿನ್ ರಾಜ್ಯಗಳನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ: ಧರ್ಮೇಂದ್ರ ಪ್ರಧಾನ್

|

Updated on: Sep 09, 2024 | 6:11 PM

ಎನ್‌ಇಪಿಯನ್ನು ಜಾರಿಗೆ ತರಲು ನಿರಾಕರಿಸಿದ್ದಕ್ಕಾಗಿ ಸಮಗ್ರ ಶಿಕ್ಷಾ ಯೋಜನೆಯಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳಿಗೆ ಕೇಂದ್ರವು ಹಣವನ್ನು ನಿರಾಕರಿಸುತ್ತಿದೆ ಎಂದು ಸ್ಟಾಲಿನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಧರ್ಮೇಂದ್ರ ಪ್ರದಾನ್, ಪ್ರಜಾಪ್ರಭುತ್ವದಲ್ಲಿ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಯಾವಾಗಲೂ ಸ್ವಾಗತಾರ್ಹ. ಆದಾಗ್ಯೂ, ಒಂದು ವಿಷಯವನ್ನು ತೋರಿಸಲು ರಾಜ್ಯಗಳನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟುವುದು ಸಂವಿಧಾನದ ಆಶಯ ಮತ್ತು ಏಕೀಕೃತ ಭಾರತದ ಮೌಲ್ಯಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

ಎನ್‌ಇಪಿ ವಿಷಯದಲ್ಲಿ ಸ್ಟಾಲಿನ್ ರಾಜ್ಯಗಳನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ: ಧರ್ಮೇಂದ್ರ ಪ್ರಧಾನ್
ಸ್ಟಾಲಿನ್- ಧರ್ಮೇಂದ್ರ ಪ್ರಧಾನ್
Follow us on

ದೆಹಲಿ ಸೆಪ್ಟೆಂಬರ್ 09: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಜಾರಿಯಾಗದಿರುವ ಬಗ್ಗೆ ಹೇಳಿಕೆ ನೀಡಲು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (M K Stalin) ರಾಜ್ಯಗಳನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಸೋಮವಾರ ಆರೋಪಿಸಿದ್ದಾರೆ.  ಎನ್‌ಇಪಿಯನ್ನು ಜಾರಿಗೆ ತರಲು ನಿರಾಕರಿಸಿದ್ದಕ್ಕಾಗಿ ಸಮಗ್ರ ಶಿಕ್ಷಾ ಯೋಜನೆಯಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳಿಗೆ ಕೇಂದ್ರವು ಹಣವನ್ನು ನಿರಾಕರಿಸುತ್ತಿದೆ ಎಂದು ಸ್ಟಾಲಿನ್ ಅವರ ಹೇಳಿಕೆಗೆ ಧರ್ಮೇಂದ್ರ ಪ್ರದಾನ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಯಾವಾಗಲೂ ಸ್ವಾಗತಾರ್ಹ. ಆದಾಗ್ಯೂ, ಒಂದು ವಿಷಯವನ್ನು ತೋರಿಸಲು ರಾಜ್ಯಗಳನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟುವುದು ಸಂವಿಧಾನದ ಆಶಯ ಮತ್ತು ಏಕೀಕೃತ ಭಾರತದ ಮೌಲ್ಯಕ್ಕೆ ವಿರುದ್ಧವಾಗಿದೆ. NEP 2020 ಅನ್ನು ವ್ಯಾಪಕವಾದ ಸಮಾಲೋಚನೆಗಳ ಮೂಲಕ ರೂಪಿಸಲಾಗಿದೆ. ಇದು ಭಾರತದ ಜನರ ಸಾಮೂಹಿಕ ಬುದ್ಧಿವಂತಿಕೆಯನ್ನು ಹೊಂದಿದೆ ಎಂದು ಪ್ರಧಾನ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಧರ್ಮೇಂದ್ರ ಪ್ರಧಾನ್ ಟ್ವೀಟ್


NEPಗೆ ರಾಜ್ಯದ “ತಾತ್ವಿಕ” ವಿರೋಧದ ಬಗ್ಗೆ ಶಿಕ್ಷಣ ಸಚಿವರು ಸ್ಟಾಲಿನ್ ಅವರನ್ನು ಪ್ರಶ್ನಿಸಿದ್ದು ,“ನೀವು ತಮಿಳು ಸೇರಿದಂತೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ವಿರೋಧಿಸುತ್ತೀರಾ? ತಮಿಳು ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸುವುದನ್ನು ನೀವು ವಿರೋಧಿಸುತ್ತೀರಾ? ತಮಿಳು ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಪಠ್ಯಪುಸ್ತಕಗಳು ಮತ್ತು ವಿಷಯವನ್ನು ರಚಿಸುವುದನ್ನು ನೀವು ವಿರೋಧಿಸುತ್ತೀರಾ? ಎನ್​​ಇಪಿಯ ಸಮಗ್ರ, ಬಹು-ಶಿಸ್ತಿನ, ಸಮಾನ, ಭವಿಷ್ಯದ ಮತ್ತು ಅಂತರ್ಗತ ಫ್ರೇಮ್​​​ವರ್ಕ್​​​ನ್ನು  ನೀವು ವಿರೋಧಿಸುತ್ತೀರಾ? ಎಂದು ಕೇಳಿದ್ದಾರೆ.

ಎನ್‌ಇಪಿಯನ್ನು ಜಾರಿಗೆ ತರಲು ನಿರಾಕರಿಸಿದ ರಾಜ್ಯಗಳಿಗೆ ಕೇಂದ್ರವು ಸಮಗ್ರ ಶಿಕ್ಷಾ ನಿಧಿಯನ್ನು ಕಡಿತಗೊಳಿಸುತ್ತಿರುವ ಕುರಿತು ಸ್ಟಾಲಿನ್ ಇಂದು ಬೆಳಿಗ್ಗೆ ಎಕ್ಸ್‌ನಲ್ಲಿ ವರದಿಯೊಂದನ್ನು ಶೇರ್ ಮಾಡಿದ್ದರು.

ಇದನ್ನೂ ಓದಿ: ಮಣಿಪುರ ಹಿಂಸಾಚಾರವನ್ನು ಕೊನೆಗಾಣಿಸುವಲ್ಲಿ ವಿಫಲ; ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ವರದಿ ಶೇರ್ ಮಾಡಿರುವ ಸ್ಟಾಲಿನ್,NEP ಗೆ ತಲೆಬಾಗಲು ನಿರಾಕರಿಸಿದ್ದಕ್ಕಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳಿಗೆ ಹಣವನ್ನು ನಿರಾಕರಿಸುವುದು, ಉದ್ದೇಶಗಳನ್ನು ತಲುಪಿಸದವರಿಗೆ ಉದಾರವಾಗಿ ಬಹುಮಾನ ನೀಡುವುದು – ಕೇಂದ್ರ ಬಿಜೆಪಿ ಸರ್ಕಾರವು ಗುಣಮಟ್ಟದ ಶಿಕ್ಷಣ ಮತ್ತು ಸಮಾನತೆಯನ್ನು ಉತ್ತೇಜಿಸಲು ಈ ರೀತಿ ಯೋಜಿಸುತ್ತಿದೆಯೇ? ನಾನು ಅದನ್ನು ನಿರ್ಧರಿಸಲು ನಮ್ಮ ರಾಷ್ಟ್ರ ಮತ್ತು ನಮ್ಮ ಜನರ ಯೋಚನೆಗೆ ಬಿಡುತ್ತೇನೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ