ಐಐಟಿ ಗಾಂಧಿನಗರದ ಕ್ರಿಯೇಟಿವ್ ಲರ್ನಿಂಗ್ ಸೆಂಟರ್ ಮಾಂತ್ರಿಕ ಜಗತ್ತು; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬಣ್ಣನೆ
ವಿಜ್ಞಾನವನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಕೇಂದ್ರವು ಸಹಾಯ ಮಾಡುತ್ತದೆ. ವಿಜ್ಞಾನದ ಸುಲಭ ಕಲಿಕೆ ಮತ್ತು ತಿಳಿವಳಿಕೆಯನ್ನು ಉತ್ತೇಜಿಸುವ ಐಐಟಿ ಗಾಂಧಿನಗರದ ಈ ಕೇಂದ್ರವನ್ನು ನಾನು ಪ್ರಶಂಸಿಸುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.
ಗಾಂಧಿನಗರ, ಜುಲೈ 17: ಐಐಟಿ ಗಾಂಧಿನಗರದ ಸೃಜನಾತ್ಮಕ ಕಲಿಕೆಯ ಕೇಂದ್ರ (Centre For Creative Learning) ಒಂದು ಮ್ಯಾಜಿಕಲ್ ವರ್ಲ್ಡ್ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmerndra Pradhan) ಬಣ್ಣಿಸಿದರು. ಐಐಟಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೆಂಟರ್ ಫಾರ್ ಕ್ರಿಯೇಟಿವ್ ಲರ್ನಿಂಗ್ ಒಂದು ಮಾಂತ್ರಿಕ ಜಗತ್ತು. ಇದು ಸಂತೋಷದಾಯಕ ಮತ್ತು ಅನುಭವದ ಕಲಿಕೆಯನ್ನು ಹೊಸ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಐಐಟಿ ಗಾಂಧಿನಗರದ ವಿದ್ಯಾರ್ಥಿಗಳೊಂದಿಗೆ ಇರುವ ಫೋಟೋಗಳನ್ನು ಟ್ವೀಟ್ ಮಾಡಿದ ಪ್ರಧಾನ್, ಐಐಟಿ ಗಾಂಧಿನಗರದಲ್ಲಿನ ಈ ಕೇಂದ್ರವು ಸಂತೋಷದಾಯಕ ಮತ್ತು ಅನುಭವದ ಕಲಿಕೆಯನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಇದು ಸೃಜನಶೀಲತೆಯನ್ನು ಪೋಷಿಸುವುದರ ಜತೆಗೆ ಜನರಲ್ಲಿ ಕುತೂಹಲವನ್ನೂ ಮೂಡಿಸುತ್ತಿದೆ. ಈ ಕೇಂದ್ರವು ಆಟಿಕೆಗಳು, ವಿವಿಧ ಚಟುವಟಿಕೆಗಳು, ಪ್ರಾತ್ಯಕ್ಷಿಕೆಗಳು ಮತ್ತು ಡಿಐವೈ ತಂತ್ರಗಳ ಮೂಲಕ ಕಲಿಯುವವರಲ್ಲಿ ಬಾಲ್ಯದಿಂದಲೇ ವೈಜ್ಞಾನಿಕ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.
ವಿಜ್ಞಾನವನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಕೇಂದ್ರವು ಸಹಾಯ ಮಾಡುತ್ತದೆ. ವಿಜ್ಞಾನದ ಸುಲಭ ಕಲಿಕೆ ಮತ್ತು ತಿಳಿವಳಿಕೆಯನ್ನು ಉತ್ತೇಜಿಸುವ ಐಐಟಿ ಗಾಂಧಿನಗರದ ಈ ಕೇಂದ್ರವನ್ನು ನಾನು ಪ್ರಶಂಸಿಸುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.
Centre For Creative Learning at IIT Gandhinagar is a magical world.
Taking joyous and experiential learning to a whole new level, It is nurturing inherent creativity, piquing curiosity and developing scientific temper among learners right from the foundational stages through… pic.twitter.com/EWXm2oF1Bi
— Dharmendra Pradhan (@dpradhanbjp) July 16, 2023
ಇದಕ್ಕೂ ಮೊದಲು, ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಭವಿಷ್ಯವನ್ನು ನಿರ್ಧರಿಸುವುದು ನಮ್ಮ ಆದ್ಯತೆಯಾಗಿದೆ. ಈ ವಿಷಯದಲ್ಲಿ, ನಾವು ಸಿಂಗಪುರದ ಅನುಭವದಿಂದ ಪ್ರಯೋಜನ ಪಡೆಯಲಿದ್ದೇವೆ ಎಂದು ಭಾವಿಸುತ್ತೇವೆ. ಅದೇ ಸಮಯದಲ್ಲಿ, ವಿಶ್ವಕ್ಕೆ ಭವಿಷ್ಯದ ಉದ್ಯೋಗಿಗಳನ್ನು ಸಿದ್ಧಪಡಿಸಲು ಭಾರತ ಮತ್ತು ಸಿಂಗಾಪುರ ಒಟ್ಟಾಗಿ ಕೆಲಸ ಮಾಡಲು ಅಪಾರ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಾವು ಕಲಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿ,ಶಿಕ್ಷಕರೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಭಾರತದ ಭವಿಷ್ಯವನ್ನು ನಿರ್ಧರಿಸುವುದು ನಮ್ಮ ಆದ್ಯತೆ: ಧರ್ಮೇಂದ್ರ ಪ್ರಧಾನ್
ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (ಎಐಸಿಟಿಇ) ಮತ್ತು ಸಿಂಗಾಪುರದ ನ್ಯಾನ್ಯಾಂಗ್ ಟೆಕ್ನಾಲಜಿಕಲ್ ಯುನಿವರ್ಸಿಟಿ ಜಂಟಿಯಾಗಿ ಆಯೋಜಿಸಿದ್ದ ಭಾರತ-ಸಿಂಗಾಪುರ್ ಹ್ಯಾಕಥಾನ್‌ನ ಮೂರನೇ ಆವೃತ್ತಿಯ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಶಿಕ್ಷಣ ಸಚಿವರು, ನಾವು ಭಾರತದಲ್ಲಿ ಕೌಶಲಯುಕ್ತ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಬಯಸುತ್ತೇವೆ ಎಂದು ಹೇಳಿದರು. ಭಾರತದ ಭವಿಷ್ಯವನ್ನು ನಿರ್ಧರಿಸುವುದು ನಮ್ಮ ಆದ್ಯತೆಯಾಗಿದೆ ಮತ್ತು ಈ ವಿಷಯದಲ್ಲಿ ಸಿಂಗಪುರದ ಅನುಭವವು ಹೆಚ್ಚಿನ ಪ್ರಯೋಜನವನ್ನು ನೀಡಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.
ಐಐಟಿ ಗಾಂಧಿನಗರದಲ್ಲಿ ಜಿ-20 ಅಧ್ಯಕ್ಷ ರಾಷ್ಟ್ರದ ನೇತೃತ್ವದಲ್ಲಿ ಆಯೋಜಿಸಲಾದ ಹ್ಯಾಕಥಾನ್‌ನ ಸಮಾರೋಪ ಸಮಾರಂಭದಲ್ಲಿ ಎರಡೂ ದೇಶಗಳ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್‌ಗಳು, ಹೂಡಿಕೆದಾರರು, ನೀತಿ ನಿರೂಪಕರು, ಕಾರ್ಪೊರೇಟ್‌ಗಳು ಮತ್ತು ಅಕಾಡೆಮಿಕ್‌ಗಳು ಭಾಗವಹಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ