Farmer’s Protest: ನಾಳೆ ಕೇಂದ್ರ ಸಚಿವರೊಂದಿಗೆ ಸಭೆ ನಡೆಸಲು ಒಪ್ಪಿದ ರೈತ ಮುಖಂಡರು
ಕಳೆದ ರಾತ್ರಿ ನಮಗೆ ಬಂದ ಸಂದೇಶ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಂವಾದಕ್ಕೆ ಕರೆದ ಆಧಾರದ ಮೇಲೆ, ನಾವು ಚಳವಳಿಯಲ್ಲಿ ಎಲ್ಲರೊಂದಿಗೆ ಮಾತನಾಡಿದ್ದೇವೆ. ನಾವು ಇಂದು ಶಾಂತಿಯಿಂದಿರಲು ನಿರ್ಧರಿಸಿದ್ದೇವೆ. ನಾವಿದ್ದ ಸ್ಥಳದಿಂದ ಮುಂದೆ ಹೋಗಲು ಪ್ರಯತ್ನಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ. ನಾಳೆ ಸಂಜೆ 5 ಗಂಟೆಗೆ ಸಭೆ ಕರೆಯಲಾಗಿದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡರು ಹೇಳಿದ್ದಾರೆ.
ಚಂಡೀಗಢ ಫೆಬ್ರುವರಿ 14: ಕೇಂದ್ರ ಸರ್ಕಾರ ನಾಳೆ ( ಗುರುವಾರ) ಚಂಡೀಗಢದಲ್ಲಿ (Chandigarh) ರೈತರೊಂದಿಗೆ ಸಭೆ ನಡೆಸಲಿದ್ದು, ಪ್ರತಿಭಟನಾಕಾರರು (Farmer’s protest) ತಾಳ್ಮೆಯಿಂದಿರುತ್ತಾರೆ. ಅಲ್ಲಿಯವರೆಗೆ ವಿವಿಧ ಗಡಿಗಳಲ್ಲಿನ ಬ್ಯಾರಿಕೇಡ್‌ಗಳು ಮತ್ತು ಇತರ ಅಡೆತಡೆಗಳನ್ನು ದಾಟಲು ಪ್ರಯತ್ನಿಸುವುದಿಲ್ಲ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ. ಚಂಡೀಗಢದಲ್ಲಿ ಬುಧವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್(Sarwan Singh Pandher), ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಮತ್ತು ಇತರ ಇಬ್ಬರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರಾಯ್ ಅವರು ನಗರದಲ್ಲಿ ಪ್ರತಿಭಟನೆ ನಿರತ ರೈತರ ಪ್ರತಿನಿಧಿಗಳನ್ನು ಗುರುವಾರ ಸಂಜೆ 5 ಗಂಟೆಗೆ ಭೇಟಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಗೋಯಲ್ ಅವರು ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯನ್ನು ಹೊಂದಿದ್ದು ರಾಯ್ ಅವರು ಗೃಹ ಖಾತೆ ರಾಜ್ಯ ಸಚಿವರಾಗಿದ್ದಾರೆ.
“ಕಳೆದ ರಾತ್ರಿ ನಮಗೆ ಬಂದ ಸಂದೇಶ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಂವಾದಕ್ಕೆ ಕರೆದ ಆಧಾರದ ಮೇಲೆ, ನಾವು ಚಳವಳಿಯಲ್ಲಿ ಎಲ್ಲರೊಂದಿಗೆ ಮಾತನಾಡಿದ್ದೇವೆ. ನಾವು ಇಂದು ಶಾಂತಿಯಿಂದಿರಲು ನಿರ್ಧರಿಸಿದ್ದೇವೆ. ನಾವಿದ್ದ ಸ್ಥಳದಿಂದ ಮುಂದೆ ಹೋಗಲು ಪ್ರಯತ್ನಿಸುವುದಿಲ್ಲ ಎಂದು ನಿರ್ಧರಿಸಿದ್ದೇವೆ. ನಾಳೆ ಸಂಜೆ 5 ಗಂಟೆಗೆ ಸಭೆ ಕರೆಯಲಾಗಿದೆ. ನಾವು ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಅಲ್ಲಿಯವರೆಗೆ ನಮ್ಮ ಕಡೆಯಿಂದ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ ಪಂಧೇರ್.
VIDEO | Here’s what Punjab Kisan Mazdoor Sangharsh Committee general secretary Sarwan Singh Pandher said on injuries suffered by journalists at the Shambhu border (Punjab-Haryana) during scuffle between security forces and protesting farmers on Tuesday.
“I request that all our… pic.twitter.com/6rATeCG10J
— Press Trust of India (@PTI_News) February 14, 2024
ಬುಧವಾರ ಶಾಂತಿಯುತ ಪ್ರತಿಭಟನೆ ನಡೆಸಿದರೂ ಡ್ರೋನ್‌ಗಳನ್ನು ಬಳಸಲಾಗಿದ್ದು, ಅಶ್ರುವಾಯು ಶೆಲ್‌ಗಳು ಮತ್ತು ರಬ್ಬರ್ ಪೆಲೆಟ್‌ಗಳನ್ನು ಹಾರಿಸಲಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. “ನಮ್ಮ ಮೇಲೆ ದಾಳಿ ಮಾಡಿದ್ದು ಪೋಲೀಸರಲ್ಲ, ಅರೆಸೇನಾ ಪಡೆಗಳು. ಇಷ್ಟೆಲ್ಲಾ ಆದರೂ ನಾವು ಕೇಂದ್ರ ಸರ್ಕಾರದೊಂದಿಗೆ ಮಾತನಾಡಲು ಸಿದ್ಧರಿದ್ದೇವೆ ಎಂದಿದ್ದಾರೆ ” ಅವರು.
ಇದಕ್ಕೂ ಮುನ್ನ ಬುಧವಾರ ಕೃಷಿ ಸಚಿವ ಅರ್ಜುನ್ ಮುಂಡಾ ಅವರು ಸಂವಾದಕ್ಕೆ ಕರೆ ನೀಡಿದ್ದರು. ಸಾಮಾನ್ಯ ಜನರಿಗೆ ಅನಾನುಕೂಲವಾಗುವ ಯಾವುದನ್ನೂ ಮಾಡಬೇಡಿ ಎಂದು ಮುಂಡಾ ರೈತರಿಗೆ ಒತ್ತಾಯಿಸಿದರು.
ಇದನ್ನೂ ಓದಿ: Delhi Chalo: ಅಶ್ರುವಾಯು ಶೆಲ್‌ಗಳನ್ನು ಹೊತ್ತ ಡ್ರೋನ್‌ಗಳನ್ನು ಎದುರಿಸಲು ಗಾಳಿಪಟ ಹಾರಿಸಿದ ರೈತರು
“ನಾವು ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಚರ್ಚಿಸಬೇಕು. ರೈತರು ಸಹಜ ಜೀವನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಸಾಮಾನ್ಯ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಯಾವುದನ್ನಾದರೂ ಮಾಡುವುದರಿಂದ ಯಾವುದೇ ಪರಿಹಾರವನ್ನು ಕಂಡುಹಿಡಿಯಲಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಇಂತಹ ಕ್ರಮಗಳು ಹುಡುಕುವಲ್ಲಿ ಅಡೆತಡೆಗಳನ್ನು ಮಾತ್ರ ಸೃಷ್ಟಿಸುತ್ತವೆ. ಪರಿಹಾರ, ಸಂವಾದಕ್ಕೆ ಅನುಕೂಲಕರ ವಾತಾವರಣವನ್ನು ಕಾಯ್ದುಕೊಳ್ಳುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ ಎಂದು ಸಚಿವರು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ