Amit Shah Telangana Tour: ಕೇಂದ್ರ ಗೃಹ ಸಚಿವ ಅಮಿತ್​ ಶಾ ತೆಲಂಗಾಣ ಪ್ರವಾಸ ಪಟ್ಟಿ ಸಿದ್ದ

| Updated By: ಸಾಧು ಶ್ರೀನಾಥ್​

Updated on: May 12, 2022 | 8:12 PM

Amit Shah Telangana Tour: ಶನಿವಾರ ಸಂಜೆ 6.30 ಕ್ಕೆ ಹೈದರಾಬಾದ್ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ತುಕ್ಕುಗೂಡದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಅಮಿತ್​ ಶಾ ಪಾಲ್ಗೊಳ್ಳಲಿದ್ದಾರೆ. ಆ ನಂತರ ರಾತ್ರಿ 8.25ಕ್ಕೆ ಡೆಲ್ಲಿಗೆ ವಾಪಸ್​ ಪ್ರಯಾಣ ಮಾಡಲಿದ್ದಾರೆ.

Amit Shah Telangana Tour: ಕೇಂದ್ರ ಗೃಹ ಸಚಿವ ಅಮಿತ್​ ಶಾ ತೆಲಂಗಾಣ ಪ್ರವಾಸ ಪಟ್ಟಿ ಸಿದ್ದ
ಕೇಂದ್ರ ಗೃಹ ಸಚಿವ ಅಮಿತ್​ ಶಾ ತೆಲಂಗಾಣ ಪ್ರವಾಸ ಪಟ್ಟಿ ಸಿದ್ದ
Follow us on

ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೈದರಾಬಾದ್ ಪ್ರವಾಸ ಪಟ್ಟಿ ಸಿದ್ದಗೊಂಡಿದೆ. ತೆಲಂಗಾಣ ಬಿಜೆಪಿ ರಾಜ್ಯ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ (Bandi Sanjay Kumar) ಎರಡನೆಯ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್​ ಶಾ ಭಾಗವಹಿಸಲಿದ್ದಾರೆ (Amit Shah Hyderabad Tour). ಕೇಂದ್ರ ಸಹಕಾರ ಮತ್ತು ಗೃಹ ಖಾತೆ ಸಚಿವ ಅಮಿತ್​ ಶಾ ಅವರ ಹೈದರಾಬಾದ್ ಪ್ರವಾಸ ಪಟ್ಟಿಅಂತಿಮಗೊಂಡಿದೆ. ತೆಲಂಗಾಣ ಬಿಜೆಪಿ ರಾಜ್ಯ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪ್ರಜಾ ಸಂಗ್ರಾಮ ಯಾತ್ರೆ (Praja Sangrama Yatra) ಮುಕ್ತಾಯ ಹಂತಕ್ಕೆ ಬಂದಿದ್ದು, ಕೊನೆಯ ಚರಣದಲ್ಲಿ ಕೇಂದ್ರ ಸಚಿವ ಅಮಿತ್​ ಶಾ ಉಪಸ್ಥಿತರಾಗಲಿದ್ದಾರೆ. ಈ ಸಂದರ್ಭದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. ಇದೇ ಮೇ 14 ರಂದು ಶನಿವಾರ ಹೈದರಾಬಾದಿಗೆ ಬರಲಿರುವ ಅಮಿತ್​ ಶಾ, ಮಧ್ಯಾಹ್ನ 2.30 ಕ್ಕೆ ಬೇಗಂ ಪೇಟೆ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. 3 ಗಂಟೆಗೆ ಸೆಂಟ್ರಲ್ ಫೋರೆನ್ಸಿಕ್ ಸೈನ್ಸ್​ ಲ್ಯಾಬೊರೇಟರಿಗೆ ಭೇಟಿ ನೀಡಲಿದ್ದಾರೆ. ಸಂಜೆ 4.30ರವರೆಗೂ ಅಲ್ಲಿರಲಿದ್ದಾರೆ.

ಹಾಗೆಯೇ, ಸಂಜೆ 5 ಗಂಟೆಗೆ ಶಂಷಾಬಾದ್ ಏರ್​​ಪೋರ್ಟ್​​​ನಲ್ಲಿರುವ ನೋವಾಟೆಲ್ (Novotel Hotel) ಹೋಟೆಲಿಗೆ ತೆರಳಲಿದ್ದಾರೆ. 6.30 ಕ್ಕೆ ಹೈದರಾಬಾದ್ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ತುಕ್ಕುಗೂಡದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಅಮಿತ್​ ಶಾ ಪಾಲ್ಗೊಳ್ಳಲಿದ್ದಾರೆ. ಆ ನಂತರ ರಾತ್ರಿ 8 ಗಂಟೆಗೆ ಸಭಾ ಸ್ಥಳದಿಂದ ಏರ್​ ಪೋರ್ಟ್​ ಗೆ ತೆರಳಲಿದ್ದಾರೆ. ರಾತ್ರಿ 8.25ಕ್ಕೆ ಡೆಲ್ಲಿಗೆ ವಾಪಸ್​ ಪ್ರಯಾಣ ಮಾಡಲಿದ್ದಾರೆ. ಸಂಜೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ತನ್ನ ಕಾರ್ಯಕರ್ತರಿಗೆ ಸೂಚನೆ ನೀಡಿದೆ.

To read in Telugu click the link here

ಇತರೆ ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ