Lakhimpur Kheri Violence: ಹಿಂಸಾಚಾರದಲ್ಲಿ ಮೃತಪಟ್ಟ ಬಿಜೆಪಿ ಮುಖಂಡನ ಮನೆಗೆ ಭೇಟಿ ಕೊಟ್ಟ ಕೇಂದ್ರ ಸಚಿವ ಅಜಯ್​ ಮಿಶ್ರಾ; ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವಂತೆ !

| Updated By: Lakshmi Hegde

Updated on: Oct 18, 2021 | 8:18 AM

ಬಿಜೆಪಿಯ ಮುಖಂಡ ಶ್ಯಾಮ್​ ಸುಂದರ್​ ನಿಶಾದ್​​ ಎಂಬುವರು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ. ಇವರ ಮನೆಗೆ ಭಾನುವಾರ ಕೇಂದ್ರ ಸಚಿವ ಅಜಯ್​ ಮಿಶ್ರಾ ತೇನಿ, ಬಿಜೆಪಿ ನಾಯಕರಾದ ಅರವಿಂದ್ ಸಿಂಗ್​ ಸಂಜಯ್​, ಯೋಗೇಶ್​ ವರ್ಮಾ ಮತ್ತಿತರರು ಭೇಟಿಕೊಟ್ಟಿದ್ದರು.

Lakhimpur Kheri Violence: ಹಿಂಸಾಚಾರದಲ್ಲಿ ಮೃತಪಟ್ಟ ಬಿಜೆಪಿ ಮುಖಂಡನ ಮನೆಗೆ ಭೇಟಿ ಕೊಟ್ಟ ಕೇಂದ್ರ ಸಚಿವ ಅಜಯ್​ ಮಿಶ್ರಾ; ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣವಂತೆ !
ಕೇಂದ್ರ ಸಚಿವ ಅಜಯ್​ ಮಿಶ್ರಾ
Follow us on

ಲಖಿಂಪುರ ಖೇರಿಯಲ್ಲಿ ಹಿಂಸಾಚಾರ (Lakhimpur Violence) ನಡೆದು ಒಟ್ಟು 8 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ರೈತರು. ಇನ್ನೂ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ಬಂಧಿತರಾಗಿದ್ದಾರೆ. ಇದೀಗ ಘಟನೆ ನಡೆದು ಸುಮಾರು ಒಂದು ವಾರಕ್ಕೂ ಅಧಿಕದಿನಗಳಾದ ನಂತರ ಕೇಂದ್ರ ಸಚಿವ ಅಜಯ್​ ಮಿಶ್ರಾ, ನಿನ್ನೆ ಮೃತ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. 

ಬಿಜೆಪಿಯ ಮುಖಂಡ ಶ್ಯಾಮ್​ ಸುಂದರ್​ ನಿಶಾದ್​​ ಎಂಬುವರು ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ. ಇವರ ಮನೆಗೆ ಭಾನುವಾರ ಕೇಂದ್ರ ಸಚಿವ ಅಜಯ್​ ಮಿಶ್ರಾ ತೇನಿ, ಬಿಜೆಪಿ ನಾಯಕರಾದ ಅರವಿಂದ್ ಸಿಂಗ್​ ಸಂಜಯ್​, ಯೋಗೇಶ್​ ವರ್ಮಾ ಮತ್ತಿತರರು ಭೇಟಿಕೊಟ್ಟಿದ್ದರು. ಹಾಗೇ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.  ಅಷ್ಟೇ ಅಲ್ಲ, ಶ್ಯಾಮ್​ ಸುಂದರ್​ ಕುಟುಂಬದವರಿಗೆ ಎಲ್ಲ ರೀತಿಯ ನೆರವು ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.

ಇದೇ ಹೊತ್ತಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಲಖಿಂಪುರ ಸರ್ದಾರ್​ ಕ್ಷೇತ್ರದ ಬಿಜೆಪಿ ಶಾಸಕ ಯೋಗೇಶ್​ ವರ್ಮಾ, ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಒಟ್ಟು 37 ಜನರಿಗೆ ಸಮನ್ಸ್​ ನೀಡಲಾಗಿದೆ. ಅವರೆಲ್ಲರ ವಿಚಾರಣೆಯೂ ಶೀಘ್ರವೇ ಶುರುವಾಗಲಿದೆ ಎಂದು ತಮಗೆ ಸ್ಥಳೀಯ ಪೊಲೀಸ್​ ಅಧಿಕಾರಿ ಹೇಳಿದ್ದಾಗಿ ತಿಳಿಸಿದ್ದಾರೆ.

ಅದಾದ ಬಳಿಕ ಪ್ರತಿಕ್ರಿಯೆ ನೀಡಿದ ಅಜಯ್​ ಮಿಶ್ರಾ, ಅಂದು ಲಖಿಂಪುರ ಖೇರಿಯಲ್ಲಿ ಪೊಲೀಸರು, ಸ್ಥಳೀಯ ಆಡಳಿತ ಅಧಿಕಾರಿಗಳೆಲ್ಲ ಇದ್ದರು. ಹಾಗಿದ್ದಾಗ್ಯೂ ಈ ಘಟನೆ ನಡೆದಿದೆ ಎಂದರೆ ಅದಕ್ಕೆ ತೀವ್ರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿದ್ದಾರೆ.  ಅಷ್ಟೇ ಅಲ್ಲ, ರೈತರು ಪ್ರತಿಭಟನೆ ನಡೆಸುತ್ತಿದ್ದ ರಸ್ತೆಗೆ ಬ್ಯಾರಿಕೇಡ್​ ಯಾಕೆ ಹಾಕಿರಲಿಲ್ಲ ಎಂದೂ ಪ್ರಶ್ನಿಸಿದ್ದಾರೆ. ಇನ್ನು ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೂ ಉತ್ತರಪ್ರದೇಶ ರಾಜ್ಯ ಸರ್ಕಾರ ವಿಚಾರಣೆ ನಡೆಸಲಿದೆ. ಯಾರಾದರೂ ತಪ್ಪಿತಸ್ಥರಿದ್ದಾರೆ ಎಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಭರವಸೆಯನ್ನೂ ಬಿಜೆಪಿ ನಾಯಕರು ನೀಡಿದ್ದಾರೆ.

ಇದನ್ನೂ ಓದಿ: ಒಂದೇ ಒಂದು ಮಾತಿನಿಂದ ಟ್ರೋಲಿಗನ ಕಮೆಂಟ್​ ಡಿಲೀಟ್​ ಮಾಡಿಸಿದ ರಶ್ಮಿಕಾ; ಅದರಲ್ಲಿ ಅಂಥದ್ದೇನಿತ್ತು?

ICC Mens T20 World Cup: ಟಿ20 ವಿಶ್ವಕಪ್​ನಲ್ಲಿಂದು ಎರಡು ಪಂದ್ಯ: ಐರ್ಲೆಡ್ vs ನೆದರ್ಲೆಂಡ್ಸ್​ ಮತ್ತು ಶ್ರೀಲಂಕಾ vs ನಬಿಯಾ