ಜೂನ್ 23 ರಂದು ಪಾಟ್ನಾದಲ್ಲಿ (Patna) ನಡೆಯಲಿರುವ ಸಭೆಯ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಸೋಮವಾರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಬಿಹಾರಕ್ಕೆ ಹೋಗುವ ಆ ವಿರೋಧ ಪಕ್ಷಗಳು ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನಿತೀಶ್ ಕುಮಾರ್ (Nitish Kumar) ಅವರನ್ನು ಕೇಳಬೇಕು. ಇದು ಭ್ರಷ್ಟ ಪಕ್ಷಗಳ ಮೈತ್ರಿಯಾಗಬಾರದು. ತಮ್ಮ ಮೈತ್ರಿಕೂಟದ ನಾಯಕ ಯಾರು ಎಂದು ಅವರು ಹೇಳಬೇಕು ಎಂದು ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್ ಹೇಳಿದ್ದಾರೆ.
ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಬಿಹಾರಕ್ಕೆ ತೆರಳುವ ಪ್ರತಿಪಕ್ಷ ನಾಯಕರು ನಿತೀಶ್ ಕುಮಾರ್‌ಗೆ ₹ 1,750 ಕೋಟಿ ವೆಚ್ಚದಲ್ಲಿ ಹಲವು ಬಾರಿ ಕಾರ್ಡ್‌ಗಳ ಪ್ಯಾಕ್‌ನಂತೆ ಕುಸಿದಿರುವ ಸೇತುವೆಯ ಬಗ್ಗೆ ಕೇಳಬೇಕು. ಹಲವಾರು ಕೋಟಿ ರೂಪಾಯಿಗಳ ಆಂಬ್ಯುಲೆನ್ಸ್ ಹಗರಣ ಮತ್ತು ಬಿಲ್ಡರ್‌ಗಳು ನಡೆಸಿದ ಹಗರಣಗಳ ಬಗ್ಗೆಯೂ ಅವರು ಕೇಳಬೇಕು.
ಜೂನ್ 12 ರಂದು ಪಾಟ್ನಾದಲ್ಲಿ ವಿರೋಧ ಪಕ್ಷದ ನಾಯಕರು ಸಭೆ ಸೇರಬೇಕಿತ್ತು. ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಪೂರ್ವ ನಿಗದಿತ ಕಾರ್ಯಕ್ರಮದ ಕಾರಣದಿಂದಾಗಿ ಇದನ್ನು ಮುಂದೂಡಲಾಗಿತ್ತು.
बिहार जाने वाले विपक्ष तमाम नेता क्या बिहार के भ्रष्टाचार पर नीतीश कुमार जी से सवाल पूछेंगे? pic.twitter.com/wtKCQrOK2U
— Anurag Thakur (@ianuragthakur) June 19, 2023
2024 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ವಿರುದ್ಧ ಸಂಯೋಜಿತ ರಂಗವನ್ನು ರಚಿಸಲು ಈಗ ಜೂನ್ 23 ರಂದು ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆ ನಡೆಯಲಿದೆ. ರಾಹುಲ್ ಗಾಂಧಿ, ಖರ್ಗೆ ಮತ್ತು ಸ್ಟಾಲಿನ್ ಅವರಲ್ಲದೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಗಾಂಧಿ ಶಾಂತಿ ಪ್ರಶಸ್ತಿ ಗೌರವ ವಿವಾದ: 1 ಕೋಟಿ ರೂಪಾಯಿ ನಗದು ಬಹುಮಾನ ನಿರಾಕರಿಸಿದ ಗೀತಾ ಪ್ರೆಸ್
ಕಳೆದ ವಾರ, ಬಿಹಾರ ಮುಖ್ಯಮಂತ್ರಿ ಕಾರ್ಯಕ್ರಮವೊಂದರಲ್ಲಿ ಲೋಕಸಭೆಗೆ ಶೀಘ್ರ ಚುನಾವಣೆ ನಡೆಯುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು. 2024ರ ಜನವರಿಯೊಳಗೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಭೆಯಲ್ಲಿ ತಿಳಿಸಿರುವುದಾಗಿ ನಿತೀಶ್ ಕುಮಾರ್ ಹೇಳಿದ್ದರು. ಎಲ್ಲ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ, ಸಾರ್ವತ್ರಿಕ ಚುನಾವಣೆ ಯಾವಾಗ ನಡೆಯಲಿದೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಹೇಳಿದರು. ಈ ವರ್ಷವೇ ಅದನ್ನು ಸಮಯಕ್ಕಿಂತ ಮುಂಚಿತವಾಗಿ ನಡೆಸಬಹುದು ಎಂದಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Mon, 19 June 23