ರಾಷ್ಟ್ರೀಯ ಹಿತಾಸಕ್ತಿ ಕಾಪಾಡಿಕೊಳ್ಳುವುದು, ಆತ್ಮವಿಶ್ವಾಸವನ್ನು ಅಹಂಕಾರ ಎನ್ನಲಾಗದು; ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು

ರಾಹುಲ್ ಗಾಂಧಿಯ ಹೇಳಿಕೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್, ಹೌದು, ಭಾರತೀಯ ವಿದೇಶಾಂಗ ಸೇವೆ ಬದಲಾಗಿದೆ. ಅವರು ಸರ್ಕಾರದ ಆದೇಶವನ್ನು ಪಾಲಿಸುತ್ತಾರೆ. ಆದರೆ, ಇದು ಅಹಂಕಾರವಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿ ಕಾಪಾಡಿಕೊಳ್ಳುವುದು, ಆತ್ಮವಿಶ್ವಾಸವನ್ನು ಅಹಂಕಾರ ಎನ್ನಲಾಗದು; ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು
Image Credit source: News18
Edited By:

Updated on: May 21, 2022 | 5:08 PM

ನವದೆಹಲಿ: ರಾಹುಲ್ ಗಾಂಧಿ (Rahul Gandhi) ಸಂವಾದವೊಂದರಲ್ಲಿ ಭಾರತೀಯ ವಿದೇಶಾಂಗ ಸೇವೆಯನ್ನು ಅಹಂಕಾರಿ ಎಂದು ಪರಿಗಣಿಸಲಾಗುತ್ತಿದೆ ಎಂದು ಹೇಳಿದ್ದಕ್ಕಾಗಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಹೇಳಿದಂತೆ ಭಾರತದ ವಿದೇಶಾಂಗ ನೀತಿಗಳ ಬದಲಾಗಿವೆ. ಆದರೆ, ಭಾರತೀಯ ವಿದೇಶಾಂಗ ಸೇವೆಯನ್ನು ಅಹಂಕಾರಿ ಎಂದು ಹೇಳಲು ಸಾಧ್ಯವಿಲ್ಲ, ಅದು ವಿಶ್ವಾಸ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿದೆ ಎಂದು ಹೇಳಿದ್ದಾರೆ.

ಲಂಡನ್‌ನಲ್ಲಿ ನಾನ್​ ಪ್ರಾಫಿಟ್ ಥಿಂಕ್-ಟ್ಯಾಂಕ್ ಬ್ರಿಡ್ಜ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತೀಯ ವಿದೇಶಾಂಗ ಸೇವೆ ಸಂಪೂರ್ಣವಾಗಿ ಬದಲಾಗಿದೆ ಎಂದು ಯುರೋಪ್‌ನ ಹಲವಾರು ಅಧಿಕಾರಿಗಳು ಹೇಳಿದ್ದಾರೆ. ಭಾರತೀಯರು ದುರಹಂಕಾರಿಗಳು, ಅವರು ಏನನ್ನೂ ಕೇಳುವುದಿಲ್ಲ. ಅವರಿಗೆ ಯಾವ ಆದೇಶ ಬಂದಿದೆಯೋ ಅದನ್ನು ಮಾತ್ರ ನಮಗೆ ಹೇಳುವುದಷ್ಟೇ ಅವರ ಕೆಲಸ ಎಂದುಕೊಂಡಿದ್ದಾರೆ ಎಂದು ಆ ಅಧಿಕಾರಿಗಳು ಹೇಳಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿಯ ಈ ಹೇಳಿಕೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್, ಹೌದು, ಭಾರತೀಯ ವಿದೇಶಾಂಗ ಸೇವೆ ಬದಲಾಗಿದೆ. ಹೌದು, ಅವರು ಸರ್ಕಾರದ ಆದೇಶವನ್ನು ಪಾಲಿಸುತ್ತಾರೆ. ಹೌದು, ಅವರು ಇತರರ ವಾದಗಳನ್ನು ವಿರೋಧಿಸುತ್ತಾರೆ. ಆದರೆ, ಅದನ್ನು ಅಹಂಕಾರ ಎಂದು ಕರೆಯುವುದಿಲ್ಲ. ಅದಕ್ಕೆ ಆತ್ಮವಿಶ್ವಾಸ ಎನ್ನುತ್ತಾರೆ. ಇದನ್ನು ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವುದು ಎಂದು ಕರೆಯಲಾಗುತ್ತದೆ ಎಂದು ಚಾಟಿ ಬೀಸಿದ್ದಾರೆ.

ಇದನ್ನೂ ಓದಿ: Rahul Gandhi: ‘ಮಾತುಗಳನ್ನು ಕೇಳಿಸಿಕೊಳ್ಳುವ ಮನೋಭಾವ ಪ್ರಧಾನಿಯವರಿಗಿಲ್ಲ’; ಲಂಡನ್​ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ 

ಲಂಡನ್​ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ಭಾರತದಲ್ಲಿ ಖಾಸಗಿ ವಲಯದ ಏಕಸ್ವಾಮ್ಯವನ್ನು ಉತ್ತೇಜಿಸುವ ಮತ್ತು ಬಂಡವಾಳದ ಈ ಕೇಂದ್ರೀಕರಣದ ಮೂಲಕ ಮಾಧ್ಯಮಗಳನ್ನು ನಿಯಂತ್ರಿಸುತ್ತಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಒಂದು ಕಂಪನಿಯು ಎಲ್ಲಾ ವಿಮಾನ ನಿಲ್ದಾಣಗಳು, ಎಲ್ಲಾ ಬಂದರುಗಳು, ಎಲ್ಲಾ ಮೂಲಸೌಕರ್ಯಗಳನ್ನು ನಿಯಂತ್ರಿಸುವುದು ತುಂಬಾ ಅಪಾಯಕಾರಿ ಎಂದು ನಾನು ಭಾವಿಸುತ್ತೇನೆ. ಖಾಸಗಿ ವಲಯದ ಏಕಸ್ವಾಮ್ಯ ಈ ರೂಪದಲ್ಲಿ ಎಂದಿಗೂ ಅಸ್ತಿತ್ವದಲ್ಲಿಲ್ಲ. ಪ್ರಸ್ತುತ ಭಾರತ ಸರ್ಕಾರವು ಈ ಬಂಡವಾಳದ ಕೇಂದ್ರೀಕರಣದ ಮೂಲಕ ಮಾಧ್ಯಮವನ್ನು ನಿಯಂತ್ರಿಸುತ್ತಿದೆ ಎಂದು ರಾಹುಲ್ ಗಾಂಧಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

TV9 Web

TV9 Kannada

Read More
Loading...
Unable to load recommendations.
Follow Us