ತಾವು ಧರಿಸಿದ್ದ ಮಾಸ್ಕ್​​ನ್ನೇ ತೆಗೆದು ಮಾಜಿ ಎಂಪಿಗೆ ತೊಡಿಸಿದ ಜ್ಯೋತಿರಾದಿತ್ಯ ಸಿಂಧಿಯಾ; ‘ಇದೆಂತಾ ವರ್ತನೆ ಕೇಂದ್ರ ಸಚಿವರೇ’ ಎನ್ನುತ್ತಿದ್ದಾರೆ ಜನ !

Jyotiraditya Scindia: ಕೊರೊನಾ ವಿರುದ್ಧ ಕಟ್ಟುನಿಟ್ಟಿನ ಸ್ವಚ್ಛತೆ ಕಾಪಾಡಬೇಕು ಎಂಬುದು ವೈದ್ಯಕೀಯ ಕ್ಷೇತ್ರದ ಸಲಹೆ. ಕೇಂದ್ರ ಸರ್ಕಾರವೂ ಕೂಡ ಇದನ್ನೇ ಒತ್ತಿ ಹೇಳುತ್ತಿದೆ.

ತಾವು ಧರಿಸಿದ್ದ ಮಾಸ್ಕ್​​ನ್ನೇ ತೆಗೆದು ಮಾಜಿ ಎಂಪಿಗೆ ತೊಡಿಸಿದ ಜ್ಯೋತಿರಾದಿತ್ಯ ಸಿಂಧಿಯಾ; ‘ಇದೆಂತಾ ವರ್ತನೆ ಕೇಂದ್ರ ಸಚಿವರೇ’ ಎನ್ನುತ್ತಿದ್ದಾರೆ ಜನ !
ಮಾಸ್ಕ್​ ತೆಗೆದು, ಮಾಜಿ ಎಂಪಿಗೆ ತೊಡಿಸಿದ ಜ್ಯೋತಿರಾದಿತ್ಯ ಸಿಂಧಿಯಾ
Follow us
TV9 Web
| Updated By: Lakshmi Hegde

Updated on:Sep 23, 2021 | 4:46 PM

ಗ್ವಾಲಿಯರ್​: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia )ಒಂದು ವಿಚಿತ್ರ ಕಾರಣಕ್ಕೆ ಸುದ್ದಿಯಾಗಿದ್ದಾರೆ. ತಾವು ಧರಿಸಿದ್ದ ಮಾಸ್ಕನ್ನೇ (Used Mask) ತೆಗೆದು ವ್ಯಕ್ತಿಯೊಬ್ಬರಿಗೆ ತೊಡಿಸಿದ ಸಿಂಧಿಯಾ ನಡೆ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್​ ಆಗಿದ್ದು, ಹೀಗೆ ಒಬ್ಬರು ಧರಿಸಿದ ಮಾಸ್ಕ್​ನ್ನು ಇನ್ನೊಬ್ಬರಿಗೆ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೂ ಸಿಂಧಿಯಾ ತಾವು ತೊಟ್ಟ ಮಾಸ್ಕ್​ನ್ನು ತೊಡಿಸಿದ್ದು ಇನ್ಯಾರಿಗೂ ಅಲ್ಲ, ಗ್ವಾಲಿಯರ್ (Gwalior) ​​ನ ಮಾಜಿ ಸಂಸದ ಅನೂಪ್​​ ಮಿಶ್ರಾರಿಗೆ ಎಂದೂ ಟೈಮ್ಸ್​ ನೌ ವರದಿ ಮಾಡಿದೆ.  

ಜ್ಯೋತಿರಾದಿತ್ಯ ಸಿಂಧಿಯಾ ಗುರುವಾ ಮುಂಜಾನೆ ಗ್ವಾಲಿಯರ್​ನಲ್ಲಿರುವ ಮಾಂಡ್ರೆ ಮಾತಾ ದೇಗುಲಕ್ಕೆ ಭೇಟಿ ನೀಡಿದ್ದರು. ದೇಗುಲವನ್ನು ಪ್ರವೇಶಿಸುವ ಸಂದರ್ಭದಲ್ಲಿ ಅನೂಪ್​ ಮಿಶ್ರಾ ಮಾಸ್ಕ್​ ಧರಿಸಿಲ್ಲ ಎಂಬುದನ್ನು ಗಮನಿಸಿದ ಕೇಂದ್ರ ಸಚಿವ, ತಾವು ಧರಿಸಿದ್ದ ಎರಡು ಮಾಸ್ಕ್​ಗಳಲ್ಲಿ ಒಂದನ್ನು ತೆಗೆದು ಅವರಿಗೆ ತೊಡಿಸಿದ್ದಾರೆ. ಅದಾದ ಬಳಿಕ ದೇವಿಯ ದರ್ಶನ ಪಡೆದಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಒಂದು ಎನ್​95 ಮಾಸ್ಕ್​ ಧರಿಸಿದ್ದರು. ಅದರ ಮೇಲಿಂದ ಸರ್ಜಿಕಲ್​ ಮಾಸ್ಕ್​ ಹಾಕಿಕೊಂಡಿದ್ದರು. ಅರುಣ್​ ಮಿಶ್ರಾ ಅವರಿಗೆ ತಾವು ಧರಿಸಿದ್ದ ಸರ್ಜಿಕಲ್​ ಮಾಸ್ಕ್​ ಕೊಟ್ಟಿದ್ದಾರೆ.  ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಇನ್ನು ಜ್ಯೋತಿರಾದಿತ್ಯ ಸಿಂಧಿಯಾ ಮಾಂಡ್ರೆ ಮಾತಾ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಖೇದಾಪತಿ ಹನುಮಾನ್​ ದೇಗುಲಕ್ಕೆ ತೆರಳಿ ಆಂಜನೇಯನ ಆಶೀರ್ವಾದ ಪಡೆದಿದ್ದಾರೆ.  ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಗ್ವಾಲಿಯರ್​ಗೆ ಭೇಟಿ ನೀಡಿರುವ ಅವರು ನಿನ್ನೆ (ಬುಧವಾರ) ರೋಡ್​ ಶೋ ಕೂಡ ನಡೆಸಿ, ಸಾರ್ವಜನಿಕರೊಂದಿಗೆ ಬೆರೆತಿದ್ದರು.

ಇದೆಂತಾ ಸ್ವಚ್ಛತೆ? ಕೊರೊನಾ ವಿರುದ್ಧ ಕಟ್ಟುನಿಟ್ಟಿನ ಸ್ವಚ್ಛತೆ ಕಾಪಾಡಬೇಕು ಎಂಬುದು ವೈದ್ಯಕೀಯ ಕ್ಷೇತ್ರದ ಸಲಹೆ. ಕೇಂದ್ರ ಸರ್ಕಾರವೂ ಕೂಡ ಇದನ್ನೇ ಒತ್ತಿ ಹೇಳುತ್ತಿದೆ. ಮಾಸ್ಕ್​ ಧರಿಸುವುದೇ ಕೊರೊನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡದಿರಲಿ ಎಂದು. ಅಂಥದ್ದರಲ್ಲಿ ಹೀಗೆ ಒಬ್ಬರು ಬಳಸಿದ ಮಾಸ್ಕ್​ನ್ನೇ ಇನ್ನೊಬ್ಬರು ಬಳಸುವುದು ಎಷ್ಟು ಸರಿ ಎಂದು ಈ ಘಟನೆಯ ವಿಡಿಯೋ ನೋಡಿದವರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯಿಂದ ಆರೋಪಿಗಳ ಗುರುತು ಪತ್ತೆಹಚ್ಚುವ ಕಾರ್ಯ

ಮಹಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವು: ತನಿಖೆ ಆರಂಭಿಸಿದ ಸಿಬಿಐ

(Union minister Jyotiraditya Scindia gives his used mask to Former MP in Madhya Pradesh)

Published On - 4:36 pm, Thu, 23 September 21