ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಔಷಧ ಸಿಗ್ತಿಲ್ಲ; ಕೊರತೆ ನೀಗಲು ತಕ್ಷಣ ಅದರ ಉತ್ಪಾದನೆಗೆ ಅಸ್ತು ಎಂದ ಸಚಿವ ನಿತಿನ್ ಗಡ್ಕರಿ
black fungus: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಯತ್ನದ ಫಲವಾಗಿ ಆಂಫೊಟೆರಿಸಿನ್ ಬಿ ಔಷಧ ಉತ್ಪಾದನೆಗೆ ಪರವಾನಗಿ (ಲೈಸೆನ್ಸ್) ಸಿಕ್ಕಿದೆ. ಮಹಾರಾಷ್ಟ್ರದ ವಾರ್ದಾದಲ್ಲಿರುವ ಜೆನಿಟಿಕ್ ಲೈಫ್ ಸೈನ್ಸಸ್ ಕಂಪನಿ ಪ್ರತಿ ನಿತ್ಯ 20 ಸಾವಿರ ವಯಲ್ಸ್ ಇಂಜೆಕ್ಷನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಮುಂದಿನ ಸೋಮವಾರದಿಂದಲೇ ಕಂಪನಿಯು 1,200 ರೂ.ಗೆ ಡ್ರಗ್ಸ್ ನೀಡಲಿದೆ.
ನವದೆಹಲಿ: ಕೊರೊನಾ ಕಾಲದಲ್ಲಿ ಫಂಗಸ್ಗಳ ಹಾವಳಿ ಧುತ್ತನೆ ಎದುರಾಗಿ ದೇಶದ ವೈದ್ಯಕೀಯ ವ್ಯವಸ್ಥೆಯನ್ನು ಬಹುವಾಗಿ ಕಾಡತೊಡಗಿದೆ. ಅದಾಗಲೇ ಕೊರೊನಾ ಮಹಾಮಾರಿಯೇ ವಿಪರೀತ ಅನ್ನುವಷ್ಟು ಸಂಕಷ್ಟ ತಂದೊಡ್ಡಿರುವಾಗ ಅದಕ್ಕಿಂತಲೂ ಮಾರಕವಾದ ಈ ಫಂಗಸ್ಗಳು ನಾನಾ ಬಣ್ಣಗಳಲ್ಲಿ ಸ್ವರೂಪಗಳಲ್ಲಿ ಕೊರೊನಾ ಸೋಂಕಿತರನ್ನು ಬಾಧಿಸತೊಡಗಿದೆ. ಬ್ಲ್ಯಾಕ್ ಫಂಗಸ್ ಬಂದ ಮೇಲೆ ವೈಟ್ ಫಂಗಸ್ ಕಾಣಿಸಿಕೊಂಡಿದ್ದು, ಇದೀಗ ಯೆಲ್ಲೋ ಫಂಗಸ್ ಸಹ ಕಾಣಿಸಿಕೊಂಡಿದೆ.
ಈ ಮಧ್ಯೆ, ಕೇಂದ್ರ ಸರ್ಕಾರವೂ ಪರಿಸ್ಥಿತಿಗೆ ಅನುಗುಣವಾಗಿ ನೀತಿನಿಯಮಗಳಲ್ಲಿ ತಕ್ಷಣಕ್ಕೆ ಮಾರ್ಪಾಡುಗಳನ್ನು ತಂದುಕೊಂಡು ವೈದ್ಯಲೋಕಕ್ಕೆ ಯಾವುದೇ ಬಾಧಕವಾಗದಂತೆ ನೆರವಾಗತೊಡಗಿದೆ. ಬ್ಲ್ಯಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧ ಕೊರತೆ ಎದುರಾಗಿದೆ. ಹಾಗಾಗಿ ದೇಶದಲ್ಲಿ ಆಂಫೊಟೆರಿಸಿನ್ ಬಿ ಔಷಧದ ಕೊರತೆಯನ್ನು ಮನಗಂಡು ಅದರ ಉತ್ಪಾದನೆಗೆ ಜೆನಿಟಿಕ್ ಲೈಫ್ ಸೈನ್ಸಸ್ ಕಂಪನಿಗೆ ಪರವಾನಗಿ ನೀಡಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಯತ್ನದ ಫಲವಾಗಿ ಆಂಫೊಟೆರಿಸಿನ್ ಬಿ ಔಷಧ ಉತ್ಪಾದನೆಗೆ ಪರವಾನಗಿ (ಲೈಸೆನ್ಸ್) ಸಿಕ್ಕಿದೆ. ಮಹಾರಾಷ್ಟ್ರದ ವಾರ್ದಾದಲ್ಲಿರುವ ಜೆನಿಟಿಕ್ ಲೈಫ್ ಸೈನ್ಸಸ್ ಕಂಪನಿ ಪ್ರತಿ ನಿತ್ಯ 20 ಸಾವಿರ ವಯಲ್ಸ್ ಇಂಜೆಕ್ಷನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಆಂಫೊಟೆರಿಸಿನ್ ಬಿ ಡ್ರಗ್ಸ್ ಔಷಧಕ್ಕೆ ಮಾರುಕಟ್ಟೆಯಲ್ಲಿ 7 ಸಾವಿರ ರೂ. ಬೆಲೆಯಿದೆ. ಮುಂದಿನ ಸೋಮವಾರದಿಂದಲೇ ಕಂಪನಿಯು 1,200 ರೂ.ಗೆ ಡ್ರಗ್ಸ್ ನೀಡಲಿದೆ.
(Union minister nitin gadkari mediates to produce amphotericin b injection for black fungus with genetic lifesciences company in vardha)
ಕೋವಿಡ್-19 ಮೂರನೇ ಅಲೆ, ಬ್ಲ್ಯಾಕ್ ಫಂಗಸ್ನಿಂದ ಮಕ್ಕಳ ರಕ್ಷಣೆ ಹೇಗೆನ್ನುವುದನ್ನು ತಜ್ಞರು ಇಲ್ಲಿ ವಿವರಿಸಿದ್ದಾರೆ
Published On - 12:40 pm, Thu, 27 May 21