ದೆಹಲಿ ಜುಲೈ 22: ಮಣಿಪುರದಲ್ಲಿ (Manipur Violence) ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ (Manipur Viral Video) ಮಾಡಿದ ಪ್ರಕರಣ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೆಲ್ಲದರ ನಡುವೆ ಕಾಂಗ್ರೆಸ್ ಪಕ್ಷ (Congress) ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರಿಗೆ ರಿಪೋರ್ಟ್ ಕಾರ್ಡ್ ನೀಡಿ, ಆಕೆ ಫೇಲ್ ಎಂದು ಹೇಳಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಮಹಿಳೆಯರ ಕಷ್ಟದ ಬಗ್ಗೆ ಸುಳಿವು ಇರಲಿಲ್ಲ. ಎರಡು ತಿಂಗಳ ನಂತರ ಎಚ್ಚರಗೊಂಡಿದ್ದಾರೆ ಎಂದು ಕಾಂಗ್ರೆಸ್‌ನ ರಿಪೋರ್ಟ್ ಕಾರ್ಡ್ ಹೇಳಿದೆ. ಈ ರಿಪೋರ್ಟ್ ಕಾರ್ಡ್‌ಗೆ ಪ್ರತಿಕ್ರಿಯಿಸಿದ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ಎರಡು ಅಂಶಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತದೆ. ಆ ಎರಡು ಅಂಶಗಳೆಂದರೆ ಭ್ರಷ್ಟಾಚಾರ ಮತ್ತು ಉದ್ದೇಶಪೂರ್ವ ನಿರ್ಲಕ್ಷ್ಯ ಎಂದಿದ್ದಾರೆ.
ಭ್ರಷ್ಟಾಚಾರದ ತೀವ್ರತೆ ಬೇರೆ ಬೇರೆ ಇರುತ್ತದೆ. ಕೆಲವರು ಮಹಿಳೆಯರ ವಿಷಯದಲ್ಲಿ ಅಂಕಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಕೆಲವು ನಿರ್ಲಕ್ಷ್ಯದ ನಿದರ್ಶನಗಳಿವೆ. ಕೆಲವೇ ಕೆಲವರು ನಿರಂತರವಾಗಿ ಪ್ರದರ್ಶಿಸುತ್ತಾರೆ. ಭ್ರಷ್ಟಚಾರ ಮತ್ತು ಉದ್ದೇಶಪೂರ್ವಕ ನಿರ್ಲಕ್ಷ್ಯ ಇವೆರಡರಲ್ಲೂಕಾಂಗ್ರೆಸ್ ಉತ್ತಮ ಅಂಕಗಳನ್ನು ಗಳಿಸುತ್ತದೆ. ರಾಜವಂಶಸ್ಥರು ಅನುಮತಿ ನೀಡಿದರೆ ಸಂಸತ್ತಿನಲ್ಲಿ ಚರ್ಚಿಸಿ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
There are depths of depravity very few are capable of — keeping a score card re women. There are instances of wilful ignorance very few incessantly exhibit. On both counts – depravity and wilful ignorance- CONgress scores well. Discuss in Parliament if the dynasty permits. https://t.co/5vpEPZXX11
— Smriti Z Irani (@smritiirani) July 22, 2023
ಮಣಿಪುರದ ವಿಡಿಯೊದ ಬಗ್ಗೆ ತೀವ್ರ ರಾಜಕೀಯ ಕೆಸರೆರಚಾಟದ ನಡುವೆ, ಬಿಜೆಪಿ ಸಚಿವರು ಮತ್ತು ನಾಯಕರು ಇತರ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಇದೇ ರೀತಿಯ ದೌರ್ಜನ್ಯದ ಘಟನೆಗಳು ನಡೆದ ಉದಾಹರಣೆಗಳನ್ನು ಉಲ್ಲೇಖಿಸುತ್ತಿದ್ದು, ಈ ಘಟನೆಗಳ ಬಗ್ಗೆ ಕಾಂಗ್ರೆಸ್ ಮೌನವಾಗಿದೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಾಂಗ್ರೆಸ್ ಮೂಕಪ್ರೇಕ್ಷಕ. ರಾಜಸ್ಥಾನದಲ್ಲಿ ಕಿವುಡಾಗಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಜುಲೈ 18-19 ರಂದು, ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೊ ರಾಷ್ಟ್ರವ್ಯಾಪಿ ಖಂಡನೆಗೆ ಕಾರಣವಾಯಿತು. ಈಶಾನ್ಯ ರಾಜ್ಯದಲ್ಲಿ ಮೈತಿ ಮತ್ತು ಕುಕಿಗಳ ನಡುವಿನ ಜನಾಂಗೀಯ ಘರ್ಷಣೆ ಭುಗಿಲೆದ್ದ ಒಂದು ದಿನದ ನಂತರ ಮೇ 4 ರಂದು ಈ ಘಟನೆ ನಡೆದಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದ್ದು, ವಿಡಿಯೊ ವೈರಲ್ ಆದ ನಂತರ ಈವರೆಗೆ 5 ಮಂದಿಯನ್ನು ಬಂಧಿಸಲಾಗಿದೆ. ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದು, ಸರ್ಕಾರವು ಕ್ರಮ ಕೈಗೊಳ್ಳದಿದ್ದರೆ, ನಾವೇ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿತ್ತು.
ಇತ್ತ ಪ್ರತಿಪಕ್ಷಗಳು ಬಿಜೆಪಿಯನ್ನು ಟೀಕಿಸುತ್ತಿದ್ದಂತೆ ಬಿಜೆಪಿ ನಾಯಕರು ರಾಜಸ್ಥಾನದಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂದು ಟೀಕಾ ಪ್ರಹಾರ ಮಾಡಿದೆ. ಅಲ್ಲಿ ಆರು ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ಕು ಸದಸ್ಯರನ್ನು ಸುಟ್ಟುಹಾಕಲಾಯಿತು. ರಾಜಸ್ಥಾನದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಹೇಳಿದ ರಾಜೇಂದರ್ ಸಿಂಗ್ ಗುಢ ಅವರನ್ನು ರಾಜಸ್ಥಾನ ಸರ್ಕಾರ ವಜಾಗೊಳಿಸಿದೆ.
ಇದನ್ನೂ ಓದಿ: ಮೊಹಬ್ಬತ್ ಕಿ ದುಕಾನ್ ಪ್ರಾಮಾಣಿಕ ಗ್ರಾಹಕರಿಗಾಗಿ ಅಲ್ಲ: ಗೆಹ್ಲೋಟ್ ಸರ್ಕಾರವನ್ನು ಟೀಕಿಸಿದ ಬಿಜೆಪಿ
ವಜಾಗೊಳಿಸಿರುವುದನ್ನು ಪ್ರಶ್ನಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಳೆದ 4 ವರ್ಷಗಳಲ್ಲಿ ರಾಜಸ್ಥಾನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಹಿಳಾ ದೌರ್ಜನ್ಯ ಘಟನೆಗಳು ನಡೆದಿವೆ. ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ರಾಜಸ್ಥಾನವು ನಂಬರ್ ಒನ್ ರಾಜ್ಯವಾಗಿದೆ. ಭಾರತದಲ್ಲಿ ಶೇ.22 ರಷ್ಟು ಅತ್ಯಾಚಾರ ಪ್ರಕರಣಗಳು ರಾಜಸ್ಥಾನದಲ್ಲಿ ಸಂಭವಿಸಿವೆ. ಕ್ರಿಮಿನಲ್‌ಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಬದಲು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಸಿಎಂ ಅಶೋಕ್ ಗೆಹ್ಲೋಟ್ ಅವರು ತಮ್ಮ ಸಚಿವ ರಾಜೇಂದ್ರ ಗುಢ ಅವರನ್ನು ವಜಾ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:13 pm, Sat, 22 July 23