ಚೆನ್ನೈನ ಐಸಿಎಫ್‌ಗೆ ಭೇಟಿ ನೀಡಿ ವಂದೇ ಭಾರತ್ ರೈಲು ಪರಿಶೀಲಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

|

Updated on: Jul 08, 2023 | 8:25 PM

ಎಲ್ಲಾ ಪಾರಂಪರಿಕ ತಾಣಗಳ ಮಾರ್ಗಗಳಲ್ಲಿ ಹಾದು ಹೋಗುವ ರೈಲನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಈ ರೈಲುಗಳಿಗೆ 'ಹೆರಿಟೇಜ್ ಸ್ಪೆಷಲ್' ಎಂದು ಹೆಸರಿಡಲಾಗಿದೆ. ಭವಿಷ್ಯದಲ್ಲಿ ಇಂತಹ ಹೆಚ್ಚಿನ ರೈಲುಗಳನ್ನು ಸೇರಿಸಲಾಗುವುದು ಎಂದು ಅವರು ಹೇಳಿದರು.

ಚೆನ್ನೈನ ಐಸಿಎಫ್‌ಗೆ ಭೇಟಿ ನೀಡಿ ವಂದೇ ಭಾರತ್ ರೈಲು ಪರಿಶೀಲಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಸಚಿವ ಅಶ್ವಿನಿ ವೈಷ್ಣವ್
Follow us on

ಚೆನ್ನೈ: ವಂದೇ ಭಾರತ್ (Vande Bharat) ರೈಲುಗಳನ್ನು ತಯಾರಿಸುವ ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಭೇಟಿ ನೀಡಿದ್ದಾರೆ. ಅಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಇಲ್ಲಿಯವರೆಗೆ ವಂದೇ ಭಾರತ್ ರೈಲಿಗೆ 25 ಸುಧಾರಣೆಗಳನ್ನು ಮಾಡಲಾಗಿದೆ. ರೈಲ್ವೆ ಸಚಿವಾಲಯವು ಕ್ಷೇತ್ರ ಘಟಕದಿಂದ ಸ್ವೀಕರಿಸಿದ ಎಲ್ಲ ಇನ್​​​ಪುಟ್ ಗಳನ್ನು ಅಳವಡಿಸುತ್ತಿದೆ ಎಂದು ಹೇಳಿದ್ದಾರೆ. ಸಚಿವರು ಟ್ವೀಟ್ ಮಾಡಿರುವ ಚಿತ್ರಗಳನ್ನು ನೋಡಿದರೆ ಎಕ್ಸ್‌ಪ್ರೆಸ್ ರೈಲಿನ ಬಣ್ಣ ಕಿತ್ತಳೆ ಮತ್ತು ಗಾಢ ಬೂದು ಬಣ್ಣಕ್ಕೆ ಬದಲಾಯಿಸಲಾಯಿಸಿರುವುದನ್ನು ಕಾಣಬಹುದು.

ಇದಕ್ಕೂ ಮುನ್ನ ವೈಷ್ಣವ್ ಅವರು ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣವನ್ನು ಪರಿಶೀಲಿಸಿದರು. ರೈಲುಗಳಲ್ಲಿ ಎಲ್ಲಾ ಹವಾನಿಯಂತ್ರಿತ ಮತ್ತು ಎಕ್ಸಿಕ್ಯೂಟಿವ್  ಕ್ಲಾಸ್​​​ಗಳಲ್ಲಿ ಜಾರಿಗೆ ತರಲಾದ ರಿಯಾಯಿತಿ ದರಗಳ ಬಗ್ಗೆಯೂ ಕೇಂದ್ರ ಸಚಿವರು ಮಾತನಾಡಿದರು. ಈ ರಿಯಾಯಿತಿಗಳು ಹೊಸ ಸುಧಾರಣೆಯಲ್ಲ . ಈ ಹಿಂದೆ ಹಲವಾರು ವರ್ಷಗಳಿಂದ ಕಾರ್ಯಗತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.


ಎಲ್ಲಾ ಎಕ್ಸಿಕ್ಯೂಟಿವ್ ಕ್ಲಾಸ್ ಮತ್ತು ಎಸಿ ಚೇರ್ ಕಾರ್‌ಗಳ ಟಿಕೆಟ್ ದರ ಶೇಕಡಾ 25 ರಷ್ಟು ಇಳಿಕೆಯಾಗಲಿದೆ ಎಂದು ರೈಲ್ವೆ ಸಚಿವಾಲಯ ಪ್ರಕಟಿಸಿದೆ. ವಂದೇ ಭಾರತ್ ಗೂ ಇದು ಅನ್ವಯವಾಗಲಿದೆ.

ಇದಲ್ಲದೆ, ಎಲ್ಲಾ ಪಾರಂಪರಿಕ ತಾಣಗಳ ಮಾರ್ಗಗಳಲ್ಲಿ ಹಾದು ಹೋಗುವ ರೈಲನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಈ ರೈಲುಗಳಿಗೆ ‘ಹೆರಿಟೇಜ್ ಸ್ಪೆಷಲ್’ ಎಂದು ಹೆಸರಿಡಲಾಗಿದೆ. ಭವಿಷ್ಯದಲ್ಲಿ ಇಂತಹ ಹೆಚ್ಚಿನ ರೈಲುಗಳನ್ನು ಸೇರಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: West Bengal Panchayat Election: ಮುರ್ಷಿದಾಬಾದ್‌, ದಿನಾಟಾದಲ್ಲಿ ಮತದಾನ ಸ್ಥಗಿತ; ಸಾವಿನ ಸಂಖ್ಯೆ 12ಕ್ಕೆ ಏರಿಕೆ

ಈ ರೈಲಿನ ವಿಶೇಷತೆ ಏನೆಂದರೆ ಇದನ್ನು ಸ್ಟೀಮ್ ಇಂಜಿನ್ ಸಹಾಯದಿಂದ ತಯಾರಿಸಲಾಗುವುದು. ಮುಂಬರುವ ತಿಂಗಳಲ್ಲಿ ಪ್ರವಾಸಿಗರಿಗೆ ಲಭ್ಯವಾಗುವ ಮೊದಲು, ರೈಲನ್ನು ಈ ಮಾರ್ಗಗಳಲ್ಲಿ ಚಾಲನೆ ಮಾಡಿ ಪರಿಶೀಲನೆ ಮಾಡಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Sat, 8 July 23