6500ಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಆರಂಭ

15ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಅಥವಾ ಸಾರ್ವಜನಿಕ ವಿಶ್ವವಿದ್ಯಾಲಯಗಳು ಸುಮಾರು 6500ಕ್ಕೂ ಹೆಚ್ಚು ಜನರನ್ನು ಬೋಧಕವರ್ಗದ ಹುದ್ದೆಗೆ ನೇಮಿಸಿಕೊಳ್ಳುತ್ತಿದೆ. ಈ ಹುದ್ದೆಗಳು ಪೂರ್ಣಕಾಲಿಕವಾಗಿದ್ದು, ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹಂತಗಳಲ್ಲಿ ಹುದ್ದೆಗಳು ಲಭ್ಯವಿದೆ.

6500ಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ ಆರಂಭ
ಸಾಂದರ್ಭಿಕ ಚಿತ್ರ
preethi shettigar

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 10, 2020 | 3:41 PM

ದೆಹಲಿ: ದೇಶದ ವಿವಿಧೆಡೆ ಇರುವ ರಾಜ್ಯ ವಿಶ್ವವಿದ್ಯಾಲಯಗಳು, ಕೇಂದ್ರ ವಿಶ್ವವಿದ್ಯಾಲಯಗಳು, ಐಐಐಟಿ ಮತ್ತು ಎನ್​ಐಟಿ ಸೇರಿದಂತೆ ಹಲವು ಸರ್ಕಾರಿ ವಿಶ್ವವಿದ್ಯಾಲಯಗಳು ಸಹಾಯಕ ಪ್ರಾಧ್ಯಾಪಕರು ಮತ್ತು ಅಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ತೆರೆದಿದೆ.

ಡಿಸೆಂಬರ್ 7, 2020ರಂದು 15ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಸುಮಾರು 6500ಕ್ಕೂ ಹೆಚ್ಚು ಬೋಧಕವರ್ಗದ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿವೆ. ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಬಗ್ಗೆ ವಿವರಗಳು ಪ್ರಕಟವಾಗಿವೆ. ಇದನ್ನು ಹೊರತು ಪಡಿಸಿ ಮೂರು ರಾಜ್ಯಗಳ ಉನ್ನತ ಶಿಕ್ಷಣ ಇಲಾಖೆಗಳು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಈಗಾಗಲೇ ಚಾಲನೆಯನ್ನು ನೀಡಿದೆ.

ಸಹಾಯಕ ಅಧ್ಯಾಪಕರ ನೇಮಕಾತಿ ಪ್ರಾರಂಭಿಸಿದ ಉನ್ನತ ಶಿಕ್ಷಣ ಇಲಾಖೆಗಳು

ಉನ್ನತ ಶಿಕ್ಷಣ ಇಲಾಖೆ, ಗುಜರಾತ್– 780 ಸಹಾಯಕ ಪ್ರಾಧ್ಯಾಪಕರು.

ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗ (RPSC)- 918 ಸಹಾಯಕ ಪ್ರಾಧ್ಯಾಪಕರು.

ಉನ್ನತ ಶಿಕ್ಷಣ ಇಲಾಖೆ, ಉತ್ತರ ಪ್ರದೇಶ UPPSC)- 128 ಸಹಾಯಕ ಪ್ರಾಧ್ಯಾಪಕರು.

ನೇಮಕಾತಿ ಪ್ರಾರಂಭಿಸಿರುವ ವಿಶ್ವವಿದ್ಯಾಲಯಗಳ ಪಟ್ಟಿ

ಸಂಸ್ಥೆಯ ಹೆಸರು

(ಅಪ್ಲೈ ಮಾಡಲು ಸಂಸ್ಥೆಯ ಹೆಸರನ್ನು ಕ್ಲಿಕ್ ಮಾಡಿ)

ಕೊನೆಯ ದಿನಾಂಕ ಖಾಲಿಯಿರುವ ಹುದ್ದೆಗಳು
ಉನ್ನತ ಶಿಕ್ಷಣ ಇಲಾಖೆ, ಗುಜರಾತ್ ಡಿಸೆಂಬರ್ 21, 2020 36 ಇಲಾಖೆಗಳಲ್ಲಿ ,780 ಹುದ್ದೆಗಳು.
ಗುರುನಾನಕ್ ದೇವ್ ವಿಶ್ವವಿದ್ಯಾಲಯ ಅಮೃತಸರ ಡಿಸೆಂಬರ್ 30, 2020 ಒಟ್ಟು 14 ಹುದ್ದೆಗಳು
ಕಾಜಿ ನಜ್ರುಲ್ ವಿಶ್ವವಿದ್ಯಾಲಯ ಡಿಸೆಂಬರ್ 15, 2020 27 ಪ್ರಾಧ್ಯಾಪಕ ಹುದ್ದೆಗಳು
ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯ ಮೀರತ್ ಡಿಸೆಂಬರ್21, 2020 18 ಹುದ್ದೆಗಳು
ದಿಬ್ರುಗಡ ವಿಶ್ವವಿದ್ಯಾಲಯ ಡಿಸೆಂಬರ್ 16, 2020 15 ಪ್ರಾಧ್ಯಾಪಕ ಹುದ್ದೆಗಳು
ಉನ್ನತ ಶಿಕ್ಷಣ ಇಲಾಖೆ, ಉತ್ತರ ಪ್ರದೇಶ ಡಿಸೆಂಬರ್ 21, 2020 256 ಸಹಾಯಕ ಪ್ರಾಧ್ಯಾಪಕರು
ಶ್ರೀ ದೇವ್ ಸುಮನ್ ಉತ್ತರಾಖಂಡ ವಿಶ್ವವಿದ್ಯಾಲಯ ಡಿಸೆಂಬರ್ 31,2020 ಒಟ್ಟು 44 ಪ್ರಾಧ್ಯಾಪಕ ಹುದ್ದೆಗಳು
ದೌಲತ್ ರಾಮ್ ಕಾಲೇಜು, ದೆಹಲಿ ನೇಮಕಾತಿ ಈಗ ಪ್ರಾರಂಭವಾಗಿದೆ 121 ಸಹಾಯಕ ಪ್ರಾಧ್ಯಾಪಕರು
ತಾಂತ್ರಿಕ ವಿಶ್ವವಿದ್ಯಾಲಯ, ದೆಹಲಿ ಡಿಸೆಂಬರ್ 20, 2020 07 ಪ್ರಾಧ್ಯಾಪಕ ಹುದ್ದೆಗಳು
ಜೆ. ಸಿ. ಬೋಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ವೈಎಂಸಿಎ, ಫರಿದಾಬಾದ್ ಡಿಸೆಂಬರ್ 14, 2020 15 ಪ್ರಾಧ್ಯಾಪಕ ಹುದ್ದೆಗಳು
ಅಸ್ಸಾಂ ವಿಶ್ವವಿದ್ಯಾಲಯ, ಕೇಂದ್ರ ವಿಶ್ವವಿದ್ಯಾಲಯ ಡಿಸೆಂಬರ್ 14, 2020 73 ಪ್ರಾಧ್ಯಾಪಕ ಹುದ್ದೆಗಳು ಸೇರಿದಂತೆ, 27 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು.
ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗ ಡಿಸೆಂಬರ್ 08, 2020 31 ವಿಷಯಗಳಿಗೆ, 918 ಸಹಾಯಕ ಪ್ರಾಧ್ಯಾಪಕರು.
ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ(ಎಂಜಿಯು), ಕೊಟ್ಟಾಯಂ ಡಿಸೆಂಬರ್ 07, 2020 21 ಪ್ರಾಧ್ಯಾಪಕ ಹುದ್ದೆಗಳು ಸೇರಿದಂತೆ, 12ಸಹಾಯಕ ಪ್ರಾಧ್ಯಾಪಕ ಹುದ್ದೆಗಳು.
ಬಿಹಾರ ರಾಜ್ಯ ವಿಶ್ವವಿದ್ಯಾಲಯ ಸೇವಾ ಆಯೋಗ ಡಿಸೆಂಬರ್ 10, 2020 4638 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು.

ಆನ್​ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿದಾರರು ಆಯಾ ವಿಶ್ವವಿದ್ಯಾಲಯವು ನಿರ್ಧರಿಸುವ ಯುಜಿಸಿ ಕನಿಷ್ಠ ಅರ್ಹತಾ ಮಾನದಂಡಗಳೊಂದಿಗೆ ಸಂದರ್ಶನದ ದಿನದಂದು ಪಾಲ್ಗೊಳ್ಳಬೇಗಾಗಿದ್ದು, ವೇತನ ಇನ್ನಿತರ ಮಾಹಿತಿಯನ್ನು ವಿಶ್ವವಿದ್ಯಾಲಯಗಳು ಸಂದರ್ಶನದ ದಿನದಂದು ತಿಳಿಸುತ್ತವೆ. ಇನ್ನೂ ಈ ಕುರಿತು ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾಲಯಗಳು ತಮ್ಮ ಅಧಿಕೃತ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಿವೆ.

ಕೋಸ್ಟ್ ಗಾರ್ಡ್ ನಾವಿಕ ಹುದ್ದೆಯ ನೇಮಕಾತಿ ಪ್ರಕ್ರಿಯೆ ಆರಂಭ: ₹ 21,700 ವೇತನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada