ಕೋಯಿಕ್ಕೋಡ್: ದೂರುದಾರರು ಲೈಂಗಿಕ ಪ್ರಚೋದನಕಾರಿ ಉಡುಗೆ ತೊಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ಲೇಖಕ ಸಿವಿಕ್ ಚಂದ್ರನ್‌ಗೆ (Civic Chandran) ಲೈಂಗಿಕ ಕಿರುಕುಳ ಪ್ರಕರಣದಲ್ಲಿ(Sexual Harassment) ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಕ್ಕಾಗಿ ಕೇರಳದ ನ್ಯಾಯಾಧೀಶರ (Kerala Judge) ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.ಇದೇ ನ್ಯಾಯಾಧೀಶರು ಇದಕ್ಕಿಂತ ಮುಂಚೆ ಸಿವಿಕ್ ಚಂದ್ರನ್ ಅವರ ಮೇಲೆ ಮಹಿಳೆಯೊಬ್ಬರು ಲೈಂಗಿಕ ಆರೋಪ ಹೊರಿಸಿದಾಗ ಸಂತ್ರಸ್ತೆಯ ಜಾತಿ ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಆ ಪ್ರಕರಣದಲ್ಲಿ ಕೋಯಿಕ್ಕೋಡ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್ ಕೃಷ್ಣಕುಮಾರ್ ಅವರು ಆಗಸ್ಟ್ 2 ರಂದು ಸಿವಿಕ್ ಚಂದ್ರನ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಅವರು ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದಾರೆ. ಆಕೆ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಎಂದು ಗೊತ್ತಿದ್ದರೂ ಆಕೆಯ ಮೈಮುಟ್ಟಿದ್ದಾರೆ ಎಂದರೆ ನಂಬಲಾಗದ ಸಂಗತಿ ಎಂದು ಹೇಳಿದ್ದರು. ಆರೋಪಿ ತಮ್ಮ ಎಸ್‌ಎಸ್‌ಎಲ್‌ಸಿ ಪುಸ್ತಕದ ಪ್ರತಿಯಲ್ಲಿ ಜಾತಿ ಹೆಸರು ನಮೂದಿಸಲು ನಿರಾಕರಿಸಿದ್ದರು. ಆರೋಪಿಯು ಸುಧಾರಣಾವಾದಿಯಾಗಿದ್ದು, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದಾರೆ, ಜಾತಿರಹಿತ ಸಮಾಜಕ್ಕಾಗಿ ಬರೆಯುತ್ತಿದ್ದಾರೆ. ಸಂತ್ರಸ್ತ ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದವಳು ಎಂದು ತಿಳಿದು ಆತ ಆಕೆಯ ದೇಹವನ್ನು ಮುಟ್ಟಿದ್ದಾನೆ ಎಂಬುದು ನಂಬಲಸಾಧ್ಯ ಎಂದು ನ್ಯಾಯಾಧೀಶರು ಆದೇಶದಲ್ಲಿ ಹೇಳಿದ್ದಾರೆ.
ಚಂದ್ರನ್ ಅವರನ್ನು ಎರಡು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ. ದಲಿತ ಲೇಖಕರೊಬ್ಬರು ಈ ವರ್ಷ ಏಪ್ರಿಲ್‌ನಲ್ಲಿ ಪುಸ್ತಕ ಪ್ರದರ್ಶನದ ವೇಳೆ ಚಂದ್ರನ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. 2020 ರ ಫೆಬ್ರವರಿಯಲ್ಲಿ ನಗರದಲ್ಲಿ ನಡೆದ ಪುಸ್ತಕ ಪ್ರದರ್ಶನದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಯುವ ಲೇಖಕಿಯೊಬ್ಬರು ಆರೋಪಿಸಿದ್ದರು.
ಎರಡೂ ಪ್ರಕರಣಗಳಲ್ಲಿ, ಚಂದ್ರನ್ ಅವರ ವಕೀಲರು ಆರೋಪಗಳು ನಿರಾಧಾರ ಎಂದಿದ್ದಾರೆ.
ಆಗಸ್ಟ್ 2ರಂದು ನೀಡಿದ ಆದೇಶದಲ್ಲಿ ಆರೋಪಿಯು ಜಾಮೀನು ಅರ್ಜಿಯೊಂದಿಗೆ ಸಲ್ಲಿಸಿದ ದೂರುದಾರ ಫೋಟೊದಲ್ಲಿ ಲೈಂಗಿಕ ಪ್ರಚೋದನೆ ನೀಡುವ ಉಡುಗೆ ತೊಟ್ಟಿದ್ದನ್ನು ನ್ಯಾಯಾಲಯ ಗಮನಿಸಿದೆ. 74ರ ಹರೆಯದ ಮತ್ತು ದೈಹಿಕವಾಗಿ ವಿಕಲಾಂಗ ವ್ಯಕ್ತಿ ಆಕೆಯ ಮೇಲೆ ದೌರ್ಜನ್ಯವೆಸಗುತ್ತಾನೆ ಎಂದು ನಂಬಲಾಗುವುದಿಲ್ಲ.
ಆರೋಪಿ ಜಾಮೀನು ಅರ್ಜಿಯೊಂದಿಗೆ ಪ್ರಸ್ತುತಪಡಿಸಿದ ಫೋಟೊಗಳಲ್ಲಿ ದೂರುದಾರರು ಕೆಲವು ಲೈಂಗಿಕ ಪ್ರಚೋದನಕಾರಿ ಉಡುಪುಗಳನ್ನು ಧರಿಸಿದ್ದನ್ನು ತೋರಿಸುತ್ತದೆ. ಆದ್ದರಿಂದ ಪ್ರಾಥಮಿಕ ಸೆಕ್ಷನ್ 354A ಆರೋಪಿಯ ವಿರುದ್ಧ ಪರಿಣಾಮಕಾರಿಯಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು.