ರಾಯ್‌ಪುರ: ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆಯಡಿ ಅವಿವಾಹಿತ ಮಗಳು ತನ್ನ ಪೋಷಕರಿಂದ ಮದುವೆಯ ಖರ್ಚನ್ನು ಪಡೆಯಲು ಅರ್ಹಳು ಎಂದು ಛತ್ತೀಸ್‌ಗಢ ಹೈಕೋರ್ಟ್ (Chhattisgarh High Court) ಹೇಳಿದೆ. “ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ಮದುವೆಗೂ ಮುನ್ನ ಮತ್ತು ಮದುವೆಯ ನಂತರ ಹಲವು ರೀತಿಯ ವೆಚ್ಚಗಳನ್ನು ಮಾಡಬೇಕಾಗುತ್ತದೆ. ಆ ಹಣವನ್ನು ಪೋಷಕರಿಂದ ಆಕೆ ಪಡೆಯಬಹುದು” ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ.
ಹೆಣ್ಣುಮಕ್ಕಳು ತಮ್ಮ ಮದುವೆಗೆ ಪೋಷಕರಿಂದ ಹಣ ಪಡೆಯಬಹುದು ಎಂಬ ಬಗ್ಗೆ ಹಕ್ಕನ್ನು ರಚಿಸಲಾಗಿದೆ. ಅಂತಹ ಹಕ್ಕುಗಳನ್ನು ಅವಿವಾಹಿತ ಹೆಣ್ಣುಮಕ್ಕಳು ಪ್ರತಿಪಾದಿಸಿದಾಗ ನ್ಯಾಯಾಲಯ ನಿರಾಕರಿಸಲು ಸಾಧ್ಯವಿಲ್ಲ ಎಂದು ಛತ್ತೀಸ್ಗಢದ ಉಚ್ಚ ನ್ಯಾಯಾಲಯವು ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ವಿವಾಹದ ಉದ್ದೇಶಕ್ಕಾಗಿ ತನ್ನ ಪೋಷಕರಿಂದ 25 ಲಕ್ಷ ರೂ. ಮೊತ್ತವನ್ನು ಕೋರಿ ಅವಿವಾಹಿತ ಮಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ಸಂಜಯ್ ಎಸ್ ಅಗರವಾಲ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದೆ.
ನಿವೃತ್ತಿಯ ನಂತರ ಆಕೆಯ ತಂದೆ 75 ಲಕ್ಷ ರೂ. ಪಡೆದಿದ್ದರು. ಇನ್ನೂ 25 ಲಕ್ಷ ರೂ. ಅವರಿಗೆ ಬರಬೇಕಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಅರ್ಜಿದಾರರ ಪರ ವಕೀಲ ಟಿ.ಕೆ. ತಿವಾರಿ ವಾದ ಮಂಡಿಸಿದ್ದರು. ಛತ್ತೀಸ್ಗಢದ ಹೈಕೋರ್ಟ್ ಕಾಯಿದೆಯ ಸೆಕ್ಷನ್ 20 (3) ಅನ್ನು ಪರಿಗಣಿಸಿದೆ, ಇದು ಒಬ್ಬ ವ್ಯಕ್ತಿಗೆ ಅವನ ಅಥವಾ ಅವಳ ವಯಸ್ಸಾದ ಅಥವಾ ಅಶಕ್ತ ತಂದೆ ಅಥವಾ ಮದುವೆಯಾಗದ ಮತ್ತು ತನ್ನನ್ನು ತಾನೇ ಬೆಂಬಲಿಸಲು ಸಾಧ್ಯವಾಗದ ಮಗಳನ್ನು ಬೆಂಬಲಿಸುವ ಜವಾಬ್ದಾರಿಯನ್ನು ನೀಡುತ್ತದೆ.
ಇದನ್ನೂ ಓದಿ: Murder: ಹುಡುಗರ ಜೊತೆ ಸುತ್ತಾಡಿದ್ದಕ್ಕೆ ಬೈದ ಅಮ್ಮನನ್ನೇ ಕೊಂದ 17 ವರ್ಷದ ಮಗಳು!
ಪ್ರೀತಿಗಾಗಿ ಅಪ್ಪ-ಅಮ್ಮನನ್ನೇ ಕೊಂದ ಮಗಳು; ಪ್ರಿಯಕರನ ಜೊತೆ ಸೇರಿ 17 ವರ್ಷದ ಯುವತಿಯಿಂದ ಡಬಲ್ ಮರ್ಡರ್!