ಉತ್ತರ ಪ್ರದೇಶ ಪಂಚಾಯತ್​ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಅತ್ಯಾಚಾರ ಆರೋಪಿ ಕುಲದೀಪ್​ ಸಿಂಗ್​ ಪತ್ನಿ

|

Updated on: Apr 09, 2021 | 10:08 AM

ಕುಲ್​ದೀಪ್ ಸಿಂಗ್ ಬಿಜೆಪಿ ಎಂಎಲ್​ಎ ಆಗಿದ್ದವರು. 2017ರಲ್ಲಿ ನಡೆದ ರೇಪ್​ ಕೇಸ್​ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದಾರೆ. ಕುಲ್​ದೀಪ್​ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ ಬಂದ ಬೆನ್ನಲ್ಲೇ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ.

ಉತ್ತರ ಪ್ರದೇಶ ಪಂಚಾಯತ್​ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಅತ್ಯಾಚಾರ ಆರೋಪಿ ಕುಲದೀಪ್​ ಸಿಂಗ್​ ಪತ್ನಿ
ಕುಲದೀಪ್​ ಸಿಂಗ್ ಸೇಂಗಾರ್​
Follow us on

ಲಖನೌ: ಉನ್ನಾವೋ ಅತ್ಯಾಚಾರ ಆರೋಪಿ, ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸಿಂಗ್ ಸೇಂಗಾರ್ ಪತ್ನಿ ಸಂಗೀತಾ ರಾಜಕೀಯಕ್ಕೆ ಇಳಿದಿದ್ದಾರೆ. ಉತ್ತರಪ್ರದೇಶ ಪಂಚಾಯತ್​ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ. ಸಂಗೀತಾ ಸದ್ಯ ಉನ್ನಾವೋ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಫತೇಪುರ್ ಚೌರಸಿ ತ್ರಿತಯಾ ಸೀಟ್​ನಿಂದ ಸ್ಪರ್ಧಿಸಲಿದ್ದಾರೆ.

ಉತ್ತರ ಪ್ರದೇಶ ಪಂಚಾಯತ್​ ಚುನಾವಣೆ ಏಪ್ರಿಲ್​ 15ರಿಂದ ನಡೆಯಲಿದ್ದು, ಫಲಿತಾಂಶ ಮೇ 2ಕ್ಕೆ ಪ್ರಕಟವಾಗಲಿದೆ. ಒಟ್ಟು ಐದು ಜಿಲ್ಲೆಗಳ ಗ್ರಾಮಪಂಚಾಯಿತಿ ಚುನಾವಣಾ ಅಭ್ಯರ್ಥಿಗಳನ್ನು ಬಿಜೆಪಿ ಗುರುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಕುಲದೀಪ್ ಸಿಂಗ್ ಪತ್ನಿ ಸಂಗೀತಾ ಹೆಸರೂ ಇದೆ. ಇವರು 2016ರಿಂದಲೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದಾರೆ. ಆಗೆಲ್ಲ ಈ ಪಂಚಾಯತ್ ಚುನಾವಣೆಗಳು ಯಾವುದೇ ಪಕ್ಷದ ಗುರುತಿನಡಿ ನಡೆಯುತ್ತಿರಲಿಲ್ಲ. ಆದರೆ ಈಗ ಪಂಚಾಯಿತಿ ಚುನಾವಣೆಗಳೂ ಸಹ ರಾಜಕೀಯ ಪಕ್ಷದ ಸಿಂಬಲ್​ನಡಿಯಲ್ಲೇ ನಡೆಯುತ್ತವೆ. ಹಾಗೇ ಬಿಜೆಪಿ ಕೂಡ ತಾನು ಬೆಂಬಲಿಸುವ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ.

ಕುಲ್​ದೀಪ್ ಸಿಂಗ್ ಬಿಜೆಪಿ ಎಂಎಲ್​ಎ ಆಗಿದ್ದವರು. 2017ರಲ್ಲಿ ನಡೆದ ರೇಪ್​ ಕೇಸ್​ನಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದಾರೆ. ಕುಲ್​ದೀಪ್​ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ ಬಂದ ಬೆನ್ನಲ್ಲೇ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಉತ್ತರ ಪ್ರದೇಶ ವಿಧಾನಸಭೆಯಿಂದಲೂ ಅನರ್ಹಗೊಂಡಿದ್ದಾರೆ. ಹಾಗೇ ಅವರಿಗೆ 10 ಲಕ್ಷ ರೂ. ದಂಡ ಮತ್ತು 10 ವರ್ಷ ಜೈಲುಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಕೋಡಿಹಳ್ಳಿ ಚಂದ್ರಶೇಖರ್ ರೈತರ ಹೆಸರಲ್ಲಿ ಮೋಸ ಮಾಡಿದ್ದಾರೆ.. ರೈತರನ್ನೇ ಬ್ಲಾಕ್ ಮೇಲ್ ಮಾಡೋ ವ್ಯಕ್ತಿ

ಉನ್ನಾವೋ ರೇಪ್ ಸಂತ್ರಸ್ತೆ ಕೊಲೆಗೆ ಯತ್ನ, ಸಂತ್ರಸ್ತೆ ಸ್ಥಿತಿ ಗಂಭೀರ, ದೆಹಲಿಗೆ ಏರ್​ ಲಿಫ್ಟ್​

(Unnao rape accused Kuldeep Sengars wife Got ticket from BJP to contest UP panchayat polls)

Published On - 10:02 am, Fri, 9 April 21