ಉನ್ನಾವೋದ ದೇವಸ್ಥಾನದ ಮುಂಭಾಗ ಭಗವದ್ಗೀತೆ ಕಥನ ನಡೆಯುತ್ತಿದ್ದ ಜಾಗದಲ್ಲಿ ನೂರಾರು ಮಹಿಳೆಯರ ಹಿಂದೆ ಪೊಲೀಸ್ ಅಧಿಕಾರಿಯೊಬ್ಬರು ಅಂಡರ್ವೇರ್ನಲ್ಲಿ ಕುಳಿತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಸ್ಪಿ ಕ್ರಮ ಕೈಗೊಂಡಿದ್ದಾರೆ. ಅಚಲಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲುಹಗಡ ಗ್ರಾಮದಲ್ಲಿ ಚಂದ್ರಿಕಾ ಮಾತೆಯ ದೇವಾಲಯವಿದೆ ಆ ದೇವಸ್ಥಾನದ ಆವರಣದಲ್ಲಿ ಪೊಲೀಸ್ ಠಾಣೆಯೂ ಇದೆ.
ದೇವಸ್ಥಾನದಲ್ಲಿ ಭಗವದ್ಗೀತೆ ಕಥನ ನಡೆಯುತ್ತಿತ್ತು, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹೊರಠಾಣೆ ಪ್ರಭಾರಿ ರಾಮ್ನಿವಾಸ್ ಯಾದವ್, ಕೇವಲ ಒಳ ಉಡುಪು ಧರಿಸಿ, ತನ್ನ ಕೋಣೆಯ ಹೊರಗಿನ ವರಾಂಡಾದಲ್ಲಿ ಖುರ್ಚಿಯ ಮೇಲೆ ಕುಳಿತು ತನ್ನ ಮೊಬೈಲ್ ನೋಡುತ್ತಿದ್ದ ದೃಶ್ಯ ಸೆರೆಯಾಗಿತ್ತು.
ಅಲ್ಲಿದ್ದವರೊಬ್ಬರು ತಕ್ಷಣವೇ ಓಡಿಹೋಗಿ ರಾಮ್ನಿವಾಸ್ ಬಳಿ ಲುಂಗಿ ಅಥವಾ ಪಂಚೆ ಸುತ್ತಿಕೊಳ್ಳುವಂತೆ ಮನವಿ ಮಾಡಿದರು ಆದರೆ ಯಾರ ಮಾತಿಗೂ ಪೊಲೀಸ್ ಕಿವಿಗೊಡಲಿಲ್ಲ.
ಮತ್ತಷ್ಟು ಓದಿ: ಗದಗ: ತಲೆ ಮೇಲೆ ಪಟಾಕಿ ಹೊತ್ತುಕೊಂಡು ಪುಂಡಾಟ
ಎಸ್ಪಿ ಸಿದ್ಧಾರ್ಥ್ ಶಂಕರ್ ಮೀನಾ ಅವರು ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಹೊರಠಾಣೆ ಪ್ರಭಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಒಗೆ ಸೂಚಿಸಿದರು. ತನಿಖೆ ನಡೆಸುವಂತೆ ಬಿಘಾಪುರ ಸಿಒ ಮಾಯಾ ರೈ ಅವರಿಗೆ ಎಸ್‌ಪಿ ಸೂಚಿಸಿದರು.
ವಿಡಿಯೋ
खाकी को शर्मशार करने वाला वीडियो…!
उन्नाव के अचलगंज में शनिवार को एक मंदिर में आयोजन चल रहा था, तभी वहां बनी पुलिस चौकी में दरोगा किस हाल में बैठा है, ये खुद देखिए…।
कोई कार्रवाई नहीं हुई, सिर्फ बीघापुर CO जांच कर रहे हैं। इसमें भी कोई जांच की आवश्यकता है क्या…? #Unnao pic.twitter.com/fITgngSX7c
— Dilip Singh (@dileepsinghlive) May 26, 2024
ಸಿಒ ಅವರ ವರದಿಯ ಮೇರೆಗೆ, ಕೊಲುಹಗಡ ಪೊಲೀಸ್ ಪೋಸ್ಟ್ ಇನ್‌ಚಾರ್ಜ್ ರಾಮ್ನಿವಾಸ್ ಯಾದವ್ ಅವರನ್ನು ಅಚಲಗಂಜ್ ಪೊಲೀಸ್ ಠಾಣೆಯಿಂದ ಪೊಲೀಸ್ ಲೈನ್‌ಗೆ ಕಳುಹಿಸಲಾಗಿದೆ. ಇನ್‌ಸ್ಪೆಕ್ಟರ್ ವಿನಯ್ ಮಿಶ್ರಾ ಅವರಿಗೆ ಔಟ್‌ಪೋಸ್ಟ್‌ನ ಉಸ್ತುವಾರಿ ನೀಡಲಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ನಾನಕ್ಕೆ ಹೋಗಿದ್ದೆ, ಬಟ್ಟೆ ಮತ್ತು ಟವೆಲ್ ತೊಳೆದ ನಂತರ ಕರೆಂಟ್ ಕೈಕೊಟ್ಟಿತ್ತು, ನೀರಿನ ಅಭಾವದಿಂದ ಈ ಸ್ಥಿತಿಯಲ್ಲಿ ಖುರ್ಚಿ ಮೇಲೆ ಕೂರಬೇಕಾಯಿತು ಎಂದು ಸಬೂಬು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ