AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನೇ ಅಡವಿಟ್ಟು ಸೋತ ವ್ಯಕ್ತಿ, ಆಕೆಯ ಮೇಲೆ ಮಾವ, ಮೈದುನ ಸೇರಿ 8 ಜನರಿಂದ ಅತ್ಯಾಚಾರ

ಗಂಡನಿಗೆ ಜೂಜಾಡುವ ಚಟ, ಹಣ ಸಾಲದ್ದಕ್ಕೆ ಹೆಂಡತಿಯನ್ನೇ ಅಡವಿಟ್ಟು ಸೋತು ಆಕೆಯ ಜೀವನವನ್ನೇ ಹಾಳು ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಮಹಿಳೆ ಮೀರತ್​ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬುವವರನ್ನು ಮದುವೆಯಾಗಿದ್ದಳು. ಮದುವೆಯಾಗಿ ಸ್ವಲ್ಪ ಸಮಯದ ಬಳಿಕ ಪತಿ ಮತ್ತು ಅತ್ತೆ ಮಾವ ನಿರಂತರ ದೈಹಿಕ ಹಿಂಸೆ ನೀಡಲು ಶುರು ಮಾಡಿದ್ದರು. ವರದಕ್ಷಿಣೆ ತೆಗೆದುಕೊಂಡು ಬರುವಂತೆ ನಿರಂತರ ಕಿರುಕುಳ ನೀಡುತ್ತಿದ್ದರು. ಹಲ್ಲೆ ನಿರಂತರವಾಗಿ ಮುಂದುವರೆದಿತ್ತು.

ಹೆಂಡತಿಯನ್ನೇ ಅಡವಿಟ್ಟು ಸೋತ ವ್ಯಕ್ತಿ, ಆಕೆಯ ಮೇಲೆ ಮಾವ, ಮೈದುನ ಸೇರಿ 8 ಜನರಿಂದ ಅತ್ಯಾಚಾರ
ಜೂಜು
ನಯನಾ ರಾಜೀವ್
|

Updated on: Nov 17, 2025 | 11:46 AM

Share

ಬಾಗ್​ಪತ್, ನವೆಂಬರ್ 17: ಗಂಡನಿಗೆ ಜೂಜಾಡುವ ಚಟ, ಹಣ ಸಾಲದ್ದಕ್ಕೆ ಹೆಂಡತಿ(Wife)ಯನ್ನೇ ಅಡವಿಟ್ಟು ಸೋತು ಆಕೆಯ ಜೀವನವನ್ನೇ ಹಾಳು ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಮಹಿಳೆ ಮೀರತ್​ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬುವವರನ್ನು ಮದುವೆಯಾಗಿದ್ದಳು. ಮದುವೆಯಾಗಿ ಸ್ವಲ್ಪ ಸಮಯದ ಬಳಿಕ ಪತಿ ಮತ್ತು ಅತ್ತೆ ಮಾವ ನಿರಂತರ ದೈಹಿಕ ಹಿಂಸೆ ನೀಡಲು ಶುರು ಮಾಡಿದ್ದರು. ವರದಕ್ಷಿಣೆ ತೆಗೆದುಕೊಂಡು ಬರುವಂತೆ ನಿರಂತರ ಕಿರುಕುಳ ನೀಡುತ್ತಿದ್ದರು. ಹಲ್ಲೆ ನಿರಂತರವಾಗಿ ಮುಂದುವರೆದಿತ್ತು.

ಡ್ಯಾನಿಶ್​ಗೆ ಮದ್ಯಪಾನ ಹಾಗೂ ಜೂಜಿನ ಚಟವಿತ್ತು, ಕುಡಿದು ಬಂದು ಆಕೆಯನ್ನು ನಿತ್ಯ ಹೊಡೆಯುತ್ತಿದ್ದ. ಆದರೆ ಇನ್ನೂ ಒಂದು ಹಜ್ಜೆ ಮುಂದೆ ಹೋಗಿ ಆಕೆಯನ್ನು ಜೂಜುಕೋರರಿಗೆ ಪಣಕ್ಕಿಟ್ಟಿದ್ದ ಆಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಜೂಜಿನಲ್ಲಿ ಸೋತ ಬಳಿಕ ಪರ ಪುರುಷರೊಂದಿಗೆ ಮಲಗುವಂತೆ ಒತ್ತಾಯಿಸುತ್ತಿದ್ದ, ಬಳಿಕ ಉಮೇಶ್ ಗುಪ್ತಾ, ಮೋನು ಮತ್ತು ಅನ್ಶುಲ್ ಸೇರಿ 8 ಮಂದಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ಅಷ್ಟೇ ಅಲ್ಲದೆ ಸಂತ್ರಸ್ತೆ ಮೇಲೆ ಗಂಡನ ಅಣ್ಣ ಶಾಹಿದ್ ಹಾಗೂ ಅತ್ತಿಗೆಯ ಪತಿ ಶೌಕೀನ್ ಕೂಡ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ ಎಂದು ಆಕೆ ತಿಳಿಸಿದ್ದಾಳೆ. ತನ್ನ ಮಾವ ಯಾಮಿನ್ ತನ್ನ ಮೇಲೆ ಅತ್ಯಾಚಾರ ಎಸಗಿ, ನೀನು ವರದಕ್ಷಿಣೆ ತರಲಿಲ್ಲ, ಆದ್ದರಿಂದ ನಾವು ಹೇಳುವುದೆಲ್ಲವನ್ನೂ ನೀನು ಪಾಲಿಸಬೇಕು, ನಮ್ಮನ್ನು ಸಂತೋಷ ಪಡಿಸಬೇಕೆಂದು ಹೇಳಿದ್ದ.

ಮತ್ತಷ್ಟು ಓದಿ: ಪತ್ನಿ ಮೇಲೆ ಸಂಶಯ: ಲೇಡಿ ಕಂಡಕ್ಟರ್​​ಗೆ ಮೂರು ಬಾರಿ ಇರಿದು ಕೊಲೆ ಮಾಡಿದ ಪೊಲೀಸಪ್ಪ

ನನ್ನ ಮದುವೆಯಿಂದಲೂ ವರದಕ್ಷಿಣೆಗಾಗಿ ನನಗೆ ಹಿಂಸೆ ನೀಡಲಾಗುತ್ತಿತ್ತು ಎಂದು ಆಕೆ ಹೇಳಿದ್ದು, ತಾನು ಗರ್ಭಿಣಿ ಎಂದು ಹೇಳಿದಾಗ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದಾರೆ. ಬಳಿಕ ಕಾಲಿಗೆ ಆ್ಯಸಿಡ್ ಸುರಿದು, ನನ್ನನ್ನು ಕೊಲ್ಲುವ ಉದ್ದೇಶದಿಂದ ನದಿಗೆ ಎಸೆದಿದ್ದರು. ಅಲ್ಲೇ ದಾರಿಹೋಕರು ಯಾರೋ ನನ್ನನ್ನು ರಕ್ಷಿಸಿದ್ದಾರೆ, ಈಗ ಈ ಪ್ರಕರಣ ಹಿಂತೆಗೆದುಕೊಳ್ಳುವಂತೆ ಬೆದರಿಕೆ ಹಾಕಲಾಗುತ್ತಿದೆ.

ಕ್ರಮ ಕೈಗೊಳ್ಳುವಂತೆ ಕೋರಿ ಅವರು ಬಾಗ್‌ಪತ್‌ನಲ್ಲಿರುವ ಎಸ್‌ಪಿ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ವಿಷಯ ತನಿಖೆಯಲ್ಲಿದೆ ಎಂದು ಪೊಲೀಸರು ಎಕ್ಸ್‌ನಲ್ಲಿ ಅಧಿಕೃತ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ