ಆಸ್ತಿ ಮೇಲೆ ಕಣ್ಣು,ಹೇಗೋ ಬಲೆಗೆ ಬೀಳಿಸಿ ಮದುವೆಯಾಗಿ ಮರುಕ್ಷಣವೇ ಗಂಡನ ಕೊಂದು ಚರಂಡಿಗೆಸೆದಿದ್ದ ಮಹಿಳೆ

ಇಂದ್ರ ಕುಮಾರ್ ಎಂಬಾತನ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಮಹಿಳೆ ಅವರನ್ನು ಹೇಗೋ ಬಲೆಗೆ ಬೀಳಿಸಿ ಮದುವೆಯಾಗಿ ಮರುಕ್ಷಣವೇ ಕೊಂದು ಚರಂಡಿಗೆ ಎಸೆದಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಉತ್ತರ ಪ್ರದೇಶದ, ಖುಷಿನಗರದ ಹಟಾ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬಳು 45 ವರ್ಷದ ವ್ಯಕ್ತಿಯನ್ನು ಆನ್​ಲೈನ್ ಮೂಲಕ ಪರಿಚಯ ಮಾಡಿಕೊಂಡು, ನಂತರ ಬಲೆಗೆ ಬೀಳಿಸಿ, ಮದುವೆಯ ಆಮಿಷವೊಡ್ಡಿ, ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಆತನನ್ನು ಕೊಂದು ಚರಂಡಿಗೆಸೆದಿದ್ದಾಳೆ.

ಆಸ್ತಿ ಮೇಲೆ ಕಣ್ಣು,ಹೇಗೋ ಬಲೆಗೆ ಬೀಳಿಸಿ ಮದುವೆಯಾಗಿ ಮರುಕ್ಷಣವೇ ಗಂಡನ ಕೊಂದು ಚರಂಡಿಗೆಸೆದಿದ್ದ ಮಹಿಳೆ
ಮದುವೆ
Image Credit source: India Today

Updated on: Jun 29, 2025 | 10:39 AM

ಲಕ್ನೋ, ಜೂನ್ 29: ಪ್ರೀತಿ, ಮದುವೆ(Marriage) ಎಲ್ಲವೂ ನಕಲಿ. ಇಂದ್ರ ಕುಮಾರ್ ಎಂಬಾತನ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಮಹಿಳೆ ಅವರನ್ನು ಹೇಗೋ ಬಲೆಗೆ ಬೀಳಿಸಿ ಮದುವೆಯಾಗಿ ಮರುಕ್ಷಣವೇ ಕೊಂದು ಚರಂಡಿಗೆ ಎಸೆದಿರುವ ಮಾಹಿತಿ ಲಭ್ಯವಾಗಿದೆ. ಈ ಘಟನೆ ಉತ್ತರ ಪ್ರದೇಶದ, ಖುಷಿನಗರದ ಹಟಾ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬಳು 45 ವರ್ಷದ ವ್ಯಕ್ತಿಯನ್ನು ಆನ್​ಲೈನ್ ಮೂಲಕ ಪರಿಚಯ ಮಾಡಿಕೊಂಡು, ನಂತರ ಬಲೆಗೆ ಬೀಳಿಸಿ, ಮದುವೆಯ ಆಮಿಷವೊಡ್ಡಿ, ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಆತನನ್ನು ಕೊಂದು ಚರಂಡಿಗೆಸೆದಿದ್ದಾಳೆ.

ಜೂನ್ 6ರಂದು ಉತ್ತರ ಪ್ರದೇಶದಲ್ಲಿ ಖುಷಿನಗರದ ಚರಂಡಿಯಲ್ಲಿ ಇಂದ್ರ ಕುಮಾರ್ ತಿವಾರಿ ಮೃತದೇಹ ಪತ್ತೆಯಾಗಿತ್ತು. ಆ ವ್ಯಕ್ತಿಯನ್ನು ಇರಿದು ಕೊಲ್ಲಲಾಗಿತ್ತು. ಮೊದಲಿಗೆ ಮೃತದೇಹವನ್ನು ಗುರುತಿಸಲಾಗಿರಲಿಲ್ಲ, ಆದರೆ ನಂತರ ಪೊಲೀಸರು ಘಟನೆ ನಡೆದ ವಾರಗಳ ನಂತರ ಜಬಲ್ಪುರದಲ್ಲಿ ನಡೆದ ನಾಪತ್ತೆ ಪ್ರಕರಣಕ್ಕೆ ಹೋಲಿಕೆ ಮಾಡಿದ್ದರು.

ಸಾಮಾಜಿಕ ಮಾಧ್ಯಮದ ಮೂಲಕ ತಿವಾರಿ ಅವರನ್ನು ಸಂಪರ್ಕಿಸಿ, ನಕಲಿ ಆಧಾರ್ ಕಾರ್ಡ್ ಬಳಸಿ ತನ್ನ ಗುರುತನ್ನು ನಕಲಿಯಾಗಿ ಸೃಷ್ಟಿಸಿ ಗೋರಖ್‌ಪುರಕ್ಕೆ ಬರುವಂತೆ ಮನವೊಲಿಸಿದಳು. ಅಲ್ಲಿ ಇಬ್ಬರು ಸಹಚರರ ಸಹಾಯದಿಂದ ನಕಲಿ ವಿವಾಹ ಸಮಾರಂಭವನ್ನು ಆಯೋಜಿಸಿ ಕೆಲವೇ ಗಂಟೆಗಳ ನಂತರ ತಿವಾರಿ ಅವರನ್ನು ಕೊಲೆ ಮಾಡಿದಳು. ಅವರ ಶವವನ್ನು ಚರಂಡಿಯಲ್ಲಿ ಎಸೆಯಲಾಗಿತ್ತು.

ಇದನ್ನೂ ಓದಿ
ವಿದೇಶಕ್ಕೆ ತೆರಳಿದ್ದ ವಿವಿಧ ಪಕ್ಷಗಳ ನಾಯಕರ ಜೊತೆ ಪ್ರಧಾನಿ ಮೋದಿ ಔತಣಕೂಟ
ನಾವು ಪಾಕಿಸ್ತಾನದೊಳಗೆ ದಾಳಿ ಮಾಡಲು ಹಿಂಜರಿಯುವುದಿಲ್ಲ; ಜೈಶಂಕರ್ ಎಚ್ಚರಿಕೆ
ಆ ಒಂದೇ ಒಂದು ತಪ್ಪಿನಿಂದ ಸಿಕ್ಕಿಬಿದ್ದ ರಾಜಾ ರಘುವಂಶಿ ಪತ್ನಿ ಸೋನಂ
ಲೋಕಸಭೆಗೆ ಉಪಸಭಾಪತಿ ಆಯ್ಕೆ ಮಾಡುವಂತೆ ಪ್ರಧಾನಿ ಮೋದಿಗೆ ಖರ್ಗೆ ಪತ್ರ

ಮತ್ತಷ್ಟು ಓದಿ: ವಧುವಿನ ಮನೆಯೇ ಕಣ್ಮರೆ; ಕುಟುಂಬದ ಜೊತೆ ಮದುವೆ ಮೆರವಣಿಗೆ ಬಂದ ವರನಿಗೆ ಶಾಕ್

ತನಿಖೆಯ ಸಮಯದಲ್ಲಿ ಆರೋಪಿಯು ಮದುವೆಯ ಫೋಟೊಗಳನ್ನು ಬಳಸಿಕೊಂಡು ಜಮೀನಿನ ಮಾಲೀಕತ್ವವನ್ನು ಪಡೆಯುವುದು ಪ್ಲ್ಯಾನ್ ಆಗಿತ್ತು. ಅಧಿಕಾರಿಗಳು ಸಾಹಿಬಾ ಮತ್ತು ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ