Viral: ನಾರಿಮಣಿಯ ನಕಲಿ ಮದುವೆ ಜಾಲ; ಹಣದಾಸೆಗೆ 50 ಜನರನ್ನು ಮದುವೆಯಾಗಿ ಸಿಕ್ಕಿಬಿದ್ದ ಕಿಲಾಡಿ ಲೇಡಿ
ಜನರು ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಎಂತಹ ವಂಚನೆ ಮಾಡೋದಕ್ಕೂ ತಯಾರಿರುತ್ತಾರೆ. ಇದೇ ರೀತಿಯ ಘಟನೆಯೊಂದು ಇದೀಗ ನಡೆದಿದ್ದು, ಮಹಿಳೆಯೊಬ್ಬಳು ಹಣದಾಸೆಗೆ ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ. ಹೀಗೆ ವಂಚಿಸಿ ದುಡ್ಡು, ಬಂಗಾರ ದೋಚಿ ಪರಾರಿಯಾಗುತ್ತಿದ್ದ ಈ ಕಿಲಾಡಿ ಲೇಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಹಣ ಕಂಡ್ರೆ ಹೆಣವೂ ಬಾಯಿ ಬಿಡುತ್ತೆ ಎಂಬ ಗಾದೆ ಮಾತಿದೆ. ಹಣಕ್ಕಾಗಿ ಕೆಲವರು ಎಂತಹ ದುಸ್ಸಾಹಸಕ್ಕೂ ಕೈ ಹಾಕುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಹಣದಾಸೆಗೆ ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿದ್ದಾಳೆ. ಹೌದು ಮದುವೆ ಆಗೋದು ದುಡ್ಡು, ಬಂಗಾರ ದೋಚಿ ಗಂಡನ ಬಿಟ್ಟು ಪರಾರಿ ಆಗೋದು, ಕೆಲ ದಿನಗಳ ಬಳಿಕ ಮತ್ತೊಬ್ಬ ಯುವಕನ ಜೊತೆ ಮ್ಯಾರೇಜ್ ಆಗೋದು. ಅಬ್ಬಬ್ಬಾ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿದ ಈ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಇಲ್ಲಿನ ತಿರುಪುರದಲ್ಲಿನ 35 ವರ್ಷದ ಅವಿವಾಹಿತ ಯುವಕನೊಬ್ಬ ಆನ್‌ಲೈನ್ ಪ್ಲಾಟ್‌ಫಾರ್ಮ್ ʼದಿ ತಮಿಳು ವೇʼ ನಲ್ಲಿ ಪರಿಚಯವಾದ ಸಂಧ್ಯಾ (30) ಎಂಬ ಮಹಿಳೆಯನ್ನು ಕೆಲ ಸಮಯದ ಹಿಂದೆ ಮದುವೆಯಾಗಿದ್ದನು. ಮದುವೆಯಾದ ಕೆಲ ದಿನಗಳ ಬಳಿಕ ಆಕೆಯ ವರ್ತನೆಯಲ್ಲಿ ತೀರಾ ಬದಲಾವಣೆ ಕಂಡು ಬಂದಿದ್ದು, ನಂತರ ಆತ ಸಂಧ್ಯಾಳ ಆಧಾರ್ ಕಾರ್ಡ್ ಪರಿಶೀಲಿಸಿದ್ದಾರೆ. ಆಧಾರ್ ಕಾರ್ಡ್ ದಾಖಲೆಯಲ್ಲಿ ಸಂಧ್ಯಾಳ ಪತಿಯ ಹೆಸರು ಬೇರೆಯೇ ಇದೆ. ತನಗೆ ವಂಚನೆ ಮಾಡಿದ್ದಾಳೆ ಎಂದು ತಿಳಿದ ಈ ಯುವಕ ಸೀದಾ ಹೋಗಿ ತಾರಾಪುರಂ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾನೆ.
ಇದನ್ನೂ ಓದಿ: ರೀಲ್ಸ್ ಮಾಡಿ ಹೊಸ ಸ್ಕೂಟಿ ಖರೀದಿಸಿದ ರೀಲ್ಸ್ ಸ್ಟಾರ್ ಮಂಗಳ ಅರುಣ್; ಫೋಟೋ ವೈರಲ್
ಪೊಲೀಸರು ಸಂಧ್ಯಾಳನ್ನು ವಿಚಾರಣೆ ಒಳಪಡಿಸಿದಾಗ ಆಕೆಯ ವಂಚನೆಗಳು ಬಯಲಾಗಿವೆ. 10 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಈಕೆಗೆ ಒಂದು ಮಗು ಕೂಡಾ ಇದೆ. ನಂತರ ತನ್ನ ಮೊದಲ ಪತಿಯಿಂದ ಬೇರ್ಟಟ್ಟು ಹಣದಾಸೆಗೆ ಅವಿವಾಹಿತ ಪುರುಷೆನ್ನೇ ಟಾರ್ಗೆಟ್ ಮಾಡಿ ಮಾದುವೆಯಾಗಿ ಸ್ವಲ್ಪ ದಿನಕ್ಕೆಯೇ ದುಡ್ಡು ಬಂಗಾರವನ್ನು ಎತ್ತಿಕೊಂಡ ಎಸ್ಕೇಪ್ ಆಗುತ್ತಿದ್ದಳು. ಹೀಗೆ ಡಿವೈಎಸ್ಪಿ, ಎಸ್ಪಿ, ಉದ್ಯಮಿಗಳು ಸೇರಿದಂತೆ 50 ಜನರಿಗೆ ವಂಚಿಸಿದ್ದಾಳೆ. ಇದೀಗ ಆಕೆಯ ಮೋಸದಾಟ ಬಯಲಾಗಿದ್ದು, ಪೊಲೀಸರ ಅತಿಥಿಯಾಗಿದ್ದಾಳೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ