ಒಂಬತ್ತು ತಿಂಗಳುಗಳ ಕಾಲ ಹೊತ್ತು, ಹೆತ್ತು ಸಾಕಿರುವ ತಾಯಿಯನ್ನೇ ಮಗನೊಬ್ಬ ಹತ್ಯೆ ಮಾಡಿರುವ ಘಟನೆ ಅಲಿಗಢದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಆವರಣದಲ್ಲಿಯೇ ತಾಯಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ. ಜ್ವಾಲೆ ಹೆಚ್ಚುತ್ತಿದ್ದಂತೆ ತಾಯಿ ಕಿರುಚುತ್ತಲೇ ಇದ್ದಳು ಆದರೆ ಆ ಕ್ರೂರ ಕಿವಿಗೆ ಅದು ಕೇಳಿಸಲೇ ಇಲ್ಲ.
ಮಗು ಚಿಕ್ಕದಿದ್ದಾಗ ಬೆಂಕಿ ಬಳಿ ಹೋಗದಂತ, ನೀರಿನ ಬಳಿ ಹೋಗದಂತೆ, ಬೀಳದಂತೆ ಪ್ರತಿ ಹಂತದಲ್ಲೂ ಜೋಪಾನ ಮಾಡುವ ತಾಯಿಯನ್ನು ಈ ವ್ಯಕ್ತಿ ಹತ್ಯೆಯನ್ನೇ ಮಾಡಿದ್ದಾನೆ. ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆಕೆಯ ಸ್ಥಿತಿ ಗಂಭೀರವಾದುದನ್ನು ನೋಡಿದ ವೈದ್ಯರು ಆಕೆಯನ್ನು ಅಲಿಗಢಕ್ಕೆ ಕಳುಹಿಸಿದ್ದರು, ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ.
ಅವರಿಗೆ ಶೇ.80ರಷ್ಟು ಭಾಗ ಸುಟ್ಟು ಹೋಗಿತ್ತು. ಪೊಲೀಸರು ಮಗನನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 45 ವರ್ಷದ ಮಹಿಳೆಯನ್ನು ಆಕೆಯ ಮಗ ಹತ್ಯೆ ಮಾಡಿದ್ದಾನೆ.
ಮತ್ತಷ್ಟು ಓದಿ: ಸೂಟ್‌ಕೇಸ್‌ನಲ್ಲಿ 2 ಶವ ಪತ್ತೆ; ಕೊನೆಗೂ ಬಯಲಾಯ್ತು ಡಬಲ್ ಮರ್ಡರ್ ರಹಸ್ಯ
ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಿಳೆ ತನ್ನ ಮಗನೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ್ದು ಪೊಲೀಸರ ಜತೆ ಮಾತುಕತೆ ನಡೆಸಿದ್ದನ್ನು ಕಾಣಬಹುದು. ಮಹಿಳೆಯೇ ಮೊದಲು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು, ಪೊಲೀಸರು ಲೈಟರ್ ಕಿತ್ತುಕೊಳ್ಳಲು ಹೋದಾಗ ಅದು ಕೆಳಗೆ ಬಿದ್ದಿತ್ತು, ಆಗ ಅದನ್ನು ತೆಗೆದುಕೊಂಡ ಮಗ ತಾಯಿಗೆ ಬೆಂಕಿ ಹಚ್ಚಿದ್ದಾನೆ.
बेहद दुखद :
अलीगढ़ के पुलिस स्टेशन में बेटे ने जिस मां को आग लगाई, वो मर गई है।मां जलती रही और बेटा मोबाइल से Video बनाता रहा।
परिवार में प्रॉपर्टी विवाद था। मां–बेटा चाहते थे कि पुलिस पर कारवाई करने का दबाव बने। ड्रामेबाजी में ज्यादा हो गया…pic.twitter.com/SAbTdBuKLN
— Sachin Gupta (@SachinGuptaUP) July 16, 2024
ಮಹಿಳೆಯ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು, ಇದನ್ನು ಬಗೆಹರಿಸಿಕೊಡಿ ಎಂದು ಕೇಳಲು ಪೊಲೀಸ್ ಠಾಣೆಗೆ ಹೋಗಿದ್ದರು, ತಾವು ಹೋದ ಕೆಲಸ ಆಗದಿದ್ದಾಗ ಮಹಿಳೆ ಪೆಟ್ರೋಲ್ ಸುರಿದುಕೊಂಡು ಹೆದರಿಸಲು ಶುರು ಮಾಡಿದ್ದರು ಇದೇ ಸಮಯದಲ್ಲ ಅವರ ಮಗ ಬೆಂಕಿ ಹಚ್ಚಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ ಮಗನನ್ನು ಬಂಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ