ನಾಗ್ಪುರ್(ಮಹಾರಾಷ್ಟ್ರ): ಹಣಕಾಸು ಬಿಕ್ಕಟ್ಟಿನಿಂದ (financial crisis) ನೊಂದ ಮಹಾರಾಷ್ಟ್ರ(Maharashtra) ನಾಗ್ಪುರ್ನ (Nagpur) ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಮಗನನ್ನು ಕಾರಲ್ಲಿ ಕೂರಿಸಿಕೊಂಡು ಕಾರಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ ಬೆಲ್ಟಾರೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಖಾಪ್ರಿ ಪುನರ್ವಾಸನ್ ಪ್ರದೇಶದಲ್ಲಿ ರಾಮರಾಜ್ ಗೋಪಾಲಕೃಷ್ಣ ಭಟ್(58) ಎಂಬವರು ಪತ್ನಿ ಸಂಗೀತಾ ಭಟ್ (55) ಮತ್ತು ಮಗ ನಂದನ್ನ್ನು(30) ಕಾರಲ್ಲಿ ಕೂರಿಸಿ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಪತ್ನಿ ಮತ್ತು ಪುತ್ರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏತನ್ಮಧ್ಯೆ ಗೋಪಾಲಕೃಷ್ಣ ಭಟ್ ಸಾವಿಗೀಡಾಗಿದ್ದಾರೆ. ಭಟ್ ಮನೆಯಿಂದ ಆತ್ಮಹತ್ಯಾ ಟಿಪ್ಪಣಿ ಪತ್ತೆಯಾಗಿದ್ದು ಆರ್ಥಿಕ ಸಮಸ್ಯೆಯಿಂದಾಗಿ ನಾನು ಬದುಕು ಕೊನೆಗೊಳಿಸುತ್ತಿದ್ದೇನೆ ಎಂದು ಅದರಲ್ಲಿ ಬರೆದಿದೆ.
ರಾಮರಾಜ್ ಭಟ್ ಅವರು ಊಟಕ್ಕಾಗಿ ಹೋಟೆಲ್ಗೆ ಹೋಗೋಣ ಎಂದು ತನ್ನ ಕುಟುಂಬವನ್ನು ಕಾರಲ್ಲಿ ಕರೆತಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕಾರಿಗೆ ಬೆಂಕಿ ಹತ್ತಿಕೊಂಡ ಕೂಡಲೇ ಪತ್ನಿ ಮತ್ತು ಮಗ ಕಾರಿನ ಬಾಗಿಲು ತೆರೆದು ಹೊರ ಬಂದಿದ್ದಾರೆ. ಆದರೆ ಭಟ್ ಕಾರಲ್ಲೇ ಸುಟ್ಟು ಸಾವಿಗೀಡಾಗಿದ್ದಾರೆ. ಭಟ್ ವಿರುದ್ಧ ಬೆಲ್ಟಾರೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.