Ghaziabad: ಬೈಕ್ಗೆ ಡಿಕ್ಕಿ ಹೊಡೆದ ಟ್ರಕ್, ಗರ್ಭಿಣಿ ಸಾವು, ಪತಿ, ಮಗನಿಗೆ ಗಂಭೀರ ಗಾಯ
ಬೈಕ್ಗೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಕೆಯ ಪತಿ ಹಾಗೂ ಮಗನಿಗೆ ಗಂಭೀರ ಗಾಯವಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಬೈಕ್ಗೆ ಟ್ರಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ(Pregnant) ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಕೆಯ ಪತಿ ಹಾಗೂ ಮಗನಿಗೆ ಗಂಭೀರ ಗಾಯವಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ರಂಜನಾ(30) 6 ತಿಂಗಳ ಗರ್ಭಿಣಿಯಾಗಿದ್ದರು, ಆಕೆಯ ಪತಿ ಕುಮಾರ್ ಹಾಗೂ ಮಗ ದೇವಾಂಶ್ಗೆ ಗಾಯಗಳಾಗಿದ್ದು, ಸಾವಿನ ಅಪಾಯದಿಂದ ಪಾರಾಗಿದ್ದಾರೆ.
ಬ್ರಿಜ್ ಘಾಟ್ನಿಂದ ವಾಪಾಸುವ ವೇಳೆ ಇವರಿದ್ದ ಬೈಕ್ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಬಳಿಕ ಬೈಕ್ ಹೋಗಿ ಡಿವೈಡರ್ಗೆ ಡಿಕ್ಕಿಯಾಗಿತ್ತು.
ಮತ್ತಷ್ಟು ಓದಿ: Al Pacino: 83 ವರ್ಷ ವಯಸ್ಸಿನ ನಟನಿಗೆ 29ರ ಪ್ರೇಯಸಿ; ಗರ್ಭಿಣಿ ಆದ ಬಳಿಕ ತಂದೆ ಯಾರೆಂದು ತಿಳಿಯಲು ಪರೀಕ್ಷೆ: ಕಾದಿತ್ತು ಅಚ್ಚರಿ
ಮಹಿಳೆ ಹಾಗೂ ಬಾಲಕ ಇಬ್ಬರೂ ಕೂಡ ಹೆಲ್ಮೆಟ್ ಧರಿಸಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಟ್ರಕ್ ರಿಜಿಸ್ಟ್ರೇಷನ್ ನಂಬರ್ನ್ನು ತೆಗೆದುಕೊಂಡಿದ್ದೇವೆ, ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ರವಿ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ