AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Al Pacino: 83 ವರ್ಷ ವಯಸ್ಸಿನ ನಟನಿಗೆ 29ರ ಪ್ರೇಯಸಿ; ಗರ್ಭಿಣಿ ಆದ ಬಳಿಕ ತಂದೆ ಯಾರೆಂದು ತಿಳಿಯಲು ಪರೀಕ್ಷೆ: ಕಾದಿತ್ತು ಅಚ್ಚರಿ

Al Pacino Girlfriend: 83ರ ಪ್ರಾಯದ ಬಾಯ್​ಫ್ರೆಂಡ್​ನ ದುಗುಡ ಏನು ಎಂಬುದು 29ರ ಪ್ರಾಯದ ಸುಂದರಿ ನೂರ್​ ಅಲ್ಫಾಲ್ಲಾ ಅವರಿಗೆ ಅರ್ಥ ಆಗಿದೆ. ಆದ್ದರಿಂದ ಅವರು ಡಿಎನ್​ಎ ಟೆಸ್ಟ್​ ಮಾಡಿಸಲು ಒಪ್ಪಿಕೊಂಡರು.

Al Pacino: 83 ವರ್ಷ ವಯಸ್ಸಿನ ನಟನಿಗೆ 29ರ ಪ್ರೇಯಸಿ; ಗರ್ಭಿಣಿ ಆದ ಬಳಿಕ ತಂದೆ ಯಾರೆಂದು ತಿಳಿಯಲು ಪರೀಕ್ಷೆ: ಕಾದಿತ್ತು ಅಚ್ಚರಿ
ನೂರ್​ ಅಲ್ಫಾಲ್ಲಾ, ಅಲ್​ ಪಚಿನೋ
ಮದನ್​ ಕುಮಾರ್​
|

Updated on: Jun 04, 2023 | 12:14 PM

Share

ಖ್ಯಾತ ನಟ ಅಲ್​ ಪಚಿನೋ (Al Pacino) ಅವರು ಒಂದು ವಿಚಿತ್ರ ಕಾರಣಕ್ಕಾಗಿ ಸುದ್ದಿ ಆಗುತ್ತಿದ್ದಾರೆ. ಹಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿರುವ ಅವರಿಗೆ ಈಗ 83 ವರ್ಷ ವಯಸ್ಸು. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎಂಬ ಮಾತು ಅಲ್​ ಪಚಿನೋ ಅವರಿಗೆ ಸೂಕ್ತವಾಗಿ ಹೊಂದಿಕೆ ಆಗುತ್ತದೆ. ಈ ಇಳಿ ವಯಸ್ಸಿನಲ್ಲೂ ಅವರು ಪ್ರೇಯಸಿಯನ್ನು ಹೊಂದಿದ್ದಾರೆ. ಅವರ ಗರ್ಲ್​ಫ್ರೆಂಡ್​ ಹೆಸರು ನೂರ್​ ಅಲ್ಫಾಲ್ಲಾ. ಅಚ್ಚರಿ ಎಂದರೆ ಅಲ್​ ಪಚಿನೋ ಅವರ ಪ್ರೇಯಸಿ ನೂರ್​ ಅಲ್ಫಾಲ್ಲಾ (Noor Alfallah) ವಯಸ್ಸು ಕೇವಲ 29 ವರ್ಷ! ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ. ಈಗ ನೂರ್​ ಅಲ್ಫಾಲ್ಲಾ ಪ್ರೆಗ್ನೆಂಟ್ (Pregnant)​ ಆಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ‘ಅದಕ್ಕೆ ಕಾರಣ ನಾನಲ್ಲ’ ಅಂತ ಅಲ್​ ಪಚಿನೋ ವಾದಿಸಿದ್ದಾರೆ. ಕಡೆಗೂ ಡಿಎನ್​ಎ ಟೆಸ್ಟ್​ ಮಾಡಿಸಲಾಗಿದೆ. ಅದ್ರಲ್ಲಿ ಏನ್​ ರಿಸಲ್ಟ್​ ಬಂತು? ಈ ಸ್ಟೋರಿ ಓದಿ..

2022ರಿಂದಲೂ ಅಲ್​ ಪಚಿನೋ ಮತ್ತು ನೂರ್​ ಅಲ್ಫಾಲ್ಲಾ ಅವರು ಜೊತೆಗಿದ್ದಾರೆ. ಅನೇಕ ಬಾರಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದುಂಟು. ಈಗ ನೂರ್​ ಅಲ್ಫಾಲ್ಲಾ ಪ್ರೆಗ್ನೆಂಟ್​ ಆಗಿದ್ದಾರೆ. ಅಲ್​ ಪಚಿನೋಗೆ 83 ವರ್ಷ ಆಗಿರುವುದರಿಂದ ಈ ವಯಸ್ಸಿನಲ್ಲಿ ತಾವು ತಂದೆ ಆಗಲು ಸಾಧ್ಯವೇ ಎಂಬ ಪ್ರಶ್ನೆ ಸ್ವತಃ ಅವರಿಗೆ ಮೂಡಿದೆ. ಹಾಗಾಗಿ ನೂರ್​ ಅಲ್ಫಾಲ್ಲಾ ಗರ್ಭಿಣಿ ಆಗಿದ್ದಕ್ಕೆ ತಾವು ಕಾರಣ ಅಲ್ಲ ಎಂಬುದು ಅವರ ವಾದ. ಒಟ್ಟಿನಲ್ಲಿ ಪ್ರೇಯಸಿ ಮೇಲೆ ಅವರಿಗೆ ಅನುಮಾನ ಬಂದಿದೆ. ಆಗಿದ್ದಾಗಲಿ ಟೆಸ್ಟ್​ ಮಾಡಿಸಿಯೇ ಬಿಡೋಣ ಅಂತ ಈ ಜೋಡಿ ತೀರ್ಮಾನಿಸಿತು.

ಇದನ್ನೂ ಓದಿ: Arjun Kapoor: ಮಲೈಕಾ ಅರೋರಾ ಪ್ರೆಗ್ನೆಂಟ್​ ಅಂತ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಖಡಕ್​ ಪ್ರತಿಕ್ರಿಯೆ ನೀಡಿದ ಅರ್ಜುನ್​ ಕಪೂರ್

83ರ ಪ್ರಾಯದ ಬಾಯ್​ಫ್ರೆಂಡ್​ನ ದುಗುಡ ಏನು ಎಂಬುದು 29ರ ಪ್ರಾಯದ ಸುಂದರಿ ನೂರ್​ ಅಲ್ಫಾಲ್ಲಾ ಅವರಿಗೆ ಅರ್ಥ ಆಗಿದೆ. ಆದ್ದರಿಂದ ಅವರು ಡಿಎನ್​ಎ ಟೆಸ್ಟ್​ ಮಾಡಿಸಲು ಒಪ್ಪಿಕೊಂಡಿದ್ದಾರೆ. ಆ ಪರೀಕ್ಷೆಯಲ್ಲಿ ಬಂದ ರಿಪೋರ್ಟ್​ ನೋಡಿ ಸ್ವತಃ ಅಲ್​ ಪಚಿನೋ ಅವರಿಗೆ ಅಚ್ಚರಿ ಆಗಿದೆ. ಯಾಕೆಂದರೆ, ನೂರ್​ ಅಲ್ಫಾಲ್ಲಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ಅಲ್​ ಪಚಿನೋ ಅವರೇ ತಂದೆ ಎಂಬುದು ಸಾಬೀತಾಗಿದೆ!

ಇದನ್ನೂ ಓದಿ: ಮದುವೆಗೂ ಮುನ್ನ ಪ್ರೆಗ್ನೆಂಟ್​ ಆದ ಇಲಿಯಾನಾ ಡಿಕ್ರೂಜ್​; ಮಗಳ ನಿರ್ಧಾರಕ್ಕೆ ಅಮ್ಮನ ಬೆಂಬಲ

ಹಾಲಿವುಡ್​ನಲ್ಲಿ ಡಿಗ್ಗಜ ನಟನಾಗಿ ಅಲ್​ ಪಚಿನೋ ಗುರುತಿಸಿಕೊಂಡಿದ್ದಾರೆ. ‘ಗಾಡ್​ ಫಾದರ್​’, ‘ಸೆಂಟ್​ ಆಫ್​ ಎ ವುಮನ್​’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದಿದ್ದಾರೆ. ಅವರ ಅಭಿನಯಕ್ಕೆ ಆಸ್ಕರ್​ ಪ್ರಶಸ್ತಿ, ಟೋನಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆ ಮತ್ತು ರಂಗಭೂಮಿಯಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. 1969ರಿಂದಲೂ ಅವರು ಹಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: ನಟಿ ಐಶ್ವರ್ಯಾ ರೈ ಬಚ್ಚನ್​ ಮತ್ತೆ ಪ್ರೆಗ್ನೆಂಟ್​? ವಿಡಿಯೋ ಕಂಡು ಅನುಮಾನ ವ್ಯಕ್ತಪಡಿಸಿದ ಫ್ಯಾನ್ಸ್​

ಅಲ್​ ಪಚಿನೋ ಅವರ ವೈಯಕ್ತಿಕ ಜೀವನ ಡಿಫರೆಂಟ್​ ಆಗಿದೆ. ಅವರಿಗೆ ಈಗಾಗಲೇ ಮೂವರು ಮಕ್ಕಳು ಇದ್ದಾರೆ. ಆದರೆ ಅಲ್​ ಪಚಿನೋಗೆ ಮದುವೆ ಆಗಿಲ್ಲ! ಹೌದು, ಈ ಮೂವರು ಮಕ್ಕಳು ಜನಿಸಿದ್ದು ಇಬ್ಬರು ಮಾಜಿ ಪ್ರೇಯಸಿಯರಿಗೆ. ಈಗ 4ನೇ ಮಗುವಿಗೆ ತಂದೆ ಆಗುತ್ತಿದ್ದಾರೆ. ಈ ಬೆಳವಣಿಗೆ ಬಗ್ಗೆ ಮೂವರು ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಅಲ್​ ಪಚಿನೋ ಪ್ರೇಯಸಿ ನೂರ್​ ಅಲ್ಫಾಲ್ಲಾ ಇತಿಹಾಸ ಕೂಡ ದೊಡ್ಡದಿದೆ. 22 ವಯಸ್ಸಿನಲ್ಲೇ ಅವರು 50 ಪ್ಲಸ್​ ವಯಸ್ಸಿನ ವ್ಯಕ್ತಿಗಳ ಜೊತೆ ಡೇಟಿಂಗ್​ ಮಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!