ರೈಲು ಹಳಿ ತಪ್ಪಿಸುವ ಯತ್ನಗಳು ದೇಶಾದ್ಯಂತ ಹೆಚ್ಚಾಗುತ್ತಿವೆ. ಉತ್ತರ ಪ್ರದೇಶದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣಿನ ರಾಶಿ ಕಂಡುಬಂದಿದ್ದು, ಲೋಕೊಪೈಲಟ್ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಚಾಲಕ ಮತ್ತು ಸ್ಥಳೀಯ ನಿವಾಸಿಗಳ ಜಾಗರೂಕತೆಯಿಂದ ದೊಡ್ಡ ಅಪಘಾತವನ್ನು ತಪ್ಪಿಸಲಾಗಿದೆ. ಆದಾಗ್ಯೂ, ಘಟನೆಯು ಇದರ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತಕ್ಷಣದ ತನಿಖೆಯನ್ನು ಆರಂಭಿಸಲಾಗಿದೆ.
ಭಾನುವಾರ ಸಂಜೆ ಸುಮಾರು 7.55 ಗಂಟೆಗೆ ರಘುರಾಜ್ ಸಿಂಗ್ ಶಟಲ್ ರೈಲು ಹೋಗುತ್ತಿತ್ತು, ಲೋಕೊಪೈಲಟ್ ಕಣ್ಣಿಗೆ ಮಣ್ಣಿನ ರಾಶಿ ಕಾಣಿಸಿಕೊಂಡು ಕೂಡಲೇ ಬ್ರೇಕ್ ಹಾಕಿದ್ದಾರೆ. ಹಳಿಯಿಂದ ಮಣ್ಣು ತೆಗೆಯಲಾಗಿದ್ದು, ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿದೆ.
ಖೀರ್ ಕಡೆಗೆ ಪಲಾಯನ ಮಾಡುವ ಮೊದಲು ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ಮಣ್ಣು ತುಂಬುವ ಕೆಲಸದಲ್ಲಿ ತೊಡಗಿದ್ದ ಡಂಪರ್ ಅನ್ನು ಅವರು ಗುರುತಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಾತ್ರಿ ವೇಳೆ ಮಣ್ಣು ಸಾಗಿಸಲು ಡಂಪರ್‌ಗಳನ್ನು ಬಳಸಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಭಾನುವಾರ ಸಂಜೆ ಮಣ್ಣನ್ನು ಸಾಗಿಸುತ್ತಿದ್ದ ಡಂಪರ್ ಚಾಲಕನೊಬ್ಬ ಲೋಡ್ ಅನ್ನು ರೈಲ್ವೆ ಹಳಿ ಮೇಲೆ ಎಸೆದು ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು.
ಮತ್ತಷ್ಟು ಓದಿ: ಪಂಜಾಬ್ನಲ್ಲಿ ರೈಲು ಹಳಿ ತಪ್ಪಿಸುವ ಯತ್ನ, ರೈಲ್ವೆ ಹಳಿಯಲ್ಲಿತ್ತು ಕಬ್ಬಿಣದ ಸರಳುಗಳು
ಕಾನ್ಪುರ: ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ, ಹಳಿಯಲ್ಲಿತ್ತು ಸಿಲಿಂಡರ್
ಉತ್ತರ ಪ್ರದೇಶದ ಕಾನ್ಪುರದ ರೈಲ್ವೆ ಹಳಿಯಲ್ಲಿ ಅನುಮಾನಾಸ್ಪದ ವಸ್ತು ಕಂಡುಬಂದಾಗ ಲೋಕೊ ಪೈಲಟ್ ಬ್ರೇಕ್ ಹಾಕಿದ್ದರಿಂದ ಆಗುವ ಅನಾಹುತ ತಪ್ಪಿದೆ. ಹಳಿಯಲ್ಲಿ ಸಿಲಿಂಡರ್ ಪತ್ತೆಯಾಗಿದೆ, ದೇಶದ ಹಲವು ಕಡೆಗಳಲ್ಲಿ ರೈಲು ಹಳಿ ತಪ್ಪಿಸುವ ಸಾಕಷ್ಟು ಯತ್ನಗಳು ನಡೆದಿದೆ.
ಪುಷ್ಪಕ್ ಎಕ್ಸ್‌ಪ್ರೆಸ್‌ನ ಲೊಕೊ ಪೈಲಟ್ ಟ್ರ್ಯಾಕ್ ಮೇಲೆ ಕೆಂಪು ಸಿಲಿಂಡರ್ ಬಿದ್ದಿರುವುದನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕಿದರು. ಸಿಲಿಂಡರ್‌ನಿಂದ ಸ್ವಲ್ಪ ದೂರದಲ್ಲಿ ರೈಲು ನಿಂತಿತು ಎಂದು ಪೊಲೀಸರು ಹೇಳಿದರು.
ರೈಲು ಹಳಿಗಳ ಮೇಲೆ ಅಪಾಯಕಾರಿ ವಸ್ತುಗಳನ್ನು ಇಡುವುದರಿಂದ ರೈಲು ಸಂಚಾರಕ್ಕೆ ಆಗಾಗ ಅಡ್ಡಿಯುಂಟಾಗುತ್ತಿದೆ, ರೈಲು ಹಳಿತಪ್ಪುವ ಅಥವಾ ಪ್ರಾಣಾಪಾಯವಾಗುವ ಸಾಧ್ಯತೆ ಹೆಚ್ಚಿದೆ.
ಮತ್ತೊಂದು ಘಟನೆ
ಕಾನ್ಪುರದಲ್ಲಿ ಕಾಳಿಂದಿ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿಸುವ ಯತ್ನ ನಡೆದಿದ್ದು, ಹಳಿಯಲ್ಲಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಬಾಟಲಿಗಳು ಸಿಕ್ಕಿವೆ. ಭಾರಿ ಅನಾಹುತ ತಪ್ಪಿದೆ. ಅಪಾಯಕಾರಿ ವಸ್ತುಗಳು ಹಳಿಗಳ ಮೇಲೆ ಪತ್ತೆಯಾದ ನಂತರ ದೊಡ್ಡ ರೈಲು ದುರಂತವನ್ನು ತಪ್ಪಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ