ಪಂಜಾಬ್ನಲ್ಲಿ ರೈಲು ಹಳಿ ತಪ್ಪಿಸುವ ಯತ್ನ, ರೈಲ್ವೆ ಹಳಿಯಲ್ಲಿತ್ತು ಕಬ್ಬಿಣದ ಸರಳುಗಳು
ಹಲವು ದಿನಗಳಿಂದ ಕಿಡಿಗೇಡಿಗಳು ರೈಲು ಹಳಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಕೆಲವೆಡೆ ಸಿಲಿಂಡರ್‌ಗಳು, ಇನ್ನೂ ಕೆಲವೆಡೆ ಕಬ್ಬಿಣದ ಕಂಬಗಳು, ಸಿಮೆಂಟ್ ಮೈಲಿಗಲ್ಲುಗಳು ಇತ್ಯಾದಿಗಳು ಸಿಕ್ಕಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.
ಇತ್ತೀಚಿನ ಕೆಲವು ದಿನಗಳಿಂದ ಕಿಡಿಗೇಡಿಗಳು ರೈಲು ಹಳಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಕೆಲವೆಡೆ ಸಿಲಿಂಡರ್‌ಗಳು, ಇನ್ನೂ ಕೆಲವೆಡೆ ಕಬ್ಬಿಣದ ಕಂಬಗಳು, ಸಿಮೆಂಟ್ ಮೈಲಿಗಲ್ಲುಗಳು ಇತ್ಯಾದಿಗಳು ಸಿಕ್ಕಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಪಂಜಾಬ್ನ ಬಟಿಂಡಾದಲ್ಲಿ ರೈಲ್ವೆ ಹಳಿ ಮೇಲೆ ಕಬ್ಬಿಣದ ಸರಳುಗಳು ಪತ್ತೆಯಾಗಿವೆ, ನಿನ್ನೆಯಷ್ಟೇ ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಳಿ ಮೇಲೆ ಸಿಲಿಂಡರ್ ಪತ್ತೆಯಾಗಿತ್ತು.
ರಾಡ್‌ಗಳು ಕಾಣಿಸಿಕೊಂಡಿದ್ದು, ಸರಕು ಸಾಗಣೆ ರೈಲಿನ ಲೊಕೊ ಪೈಲಟ್‌ಗೆ ಸರಿಯಾದ ಸಮಯಕ್ಕೆ ಕಾಣಿಸಿದ್ದು ಕೂಡಲೇ ಬ್ರೇಕ್ ಹಾಕಿದ್ದರು. ಮುಂಜಾನೆ 3 ಗಂಟೆಗೆ, ಬಟಿಂಡಾ-ದೆಹಲಿ ರೈಲ್ವೆ ಹಳಿಯಲ್ಲಿ ಸರಕು ಸಾಗಣೆ ರೈಲು ಹಾದು ಹೋಗುತ್ತಿತ್ತು. ಇಲ್ಲಿಯವರೆಗೆ 9 ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ರೈಲು ಹಳಿತಪ್ಪಿಸಲು ಯತ್ನಿಸಿದ ಐದನೇ ಘಟನೆ ಇದಾಗಿದೆ. ಸೆಪ್ಟೆಂಬರ್ 10 ರಂದು, ಆಗಸ್ಟ್‌ನಿಂದ ದೇಶಾದ್ಯಂತ 18 ಹಳಿತಪ್ಪಲು ಪ್ರಯತ್ನಿಸಲಾಗಿದೆ ಎಂದು ರೈಲ್ವೆ ಹೇಳಿದೆ.
ಮತ್ತಷ್ಟು ಓದಿ: ಕಾನ್ಪುರದಲ್ಲಿ ರೈಲು ಹಳಿ ತಪ್ಪಿಸುವ ಯತ್ನ, ಹಳಿಯಲ್ಲಿ ಸಿಲಿಂಡರ್ ಪತ್ತೆ
ಜೂನ್ 2023 ರಿಂದ ಇಂದಿನವರೆಗೆ, ರೈಲ್ವೆ ಹಳಿಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳು, ಬೈಸಿಕಲ್‌ಗಳು, ಕಬ್ಬಿಣದ ರಾಡ್‌ಗಳು ಮತ್ತು ಸಿಮೆಂಟ್ ಬ್ಲಾಕ್‌ಗಳಂತಹ ವಸ್ತುಗಳು ಪತ್ತೆಯಾಗಿರುವ ಇಂತಹ 24 ಘಟನೆಗಳು ನಡೆದಿವೆ. ಭಾರತೀಯ ರೈಲ್ವೇಯ ಪ್ರಕಾರ, ವರದಿಯಾದ 18 ಘಟನೆಗಳಲ್ಲಿ 15 ಆಗಸ್ಟ್‌ನಲ್ಲಿ ನಡೆದಿದ್ದರೆ, ನಾಲ್ಕು ಸೆಪ್ಟೆಂಬರ್‌ನಲ್ಲಿ ನಡೆದಿದ್ದು, ಕಾನ್ಪುರದಲ್ಲಿ ಇತ್ತೀಚಿನ ಹಳಿತಪ್ಪಿಸುವ ಪ್ರಯತ್ನವೂ ಸೇರಿದೆ.
ರಾಜಸ್ಥಾನದ ಅಜ್ಮೀರ್ ನಲ್ಲಿ ದುಷ್ಕರ್ಮಿಗಳು ರೈಲು ಹಳಿಗಳ ಮೇಲೆ ಸಿಮೆಂಟ್ ಬ್ಲಾಕ್‌ಗಳನ್ನು ಇರಿಸಿ, ರೈಲು ಹಳಿ ತಪ್ಪಿಸುವ ಯತ್ನ ನಡೆಸಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಅಜ್ಮೀರ್ನ ಪಶ್ಚಿಮ ಮೀಸಲು ಸರಕು ಸಾಗಣೆ ಕಾರಿಡಾರ್‌ನ ರೈಲು ಹಳಿಗಳ ಮೇಲೆ ದೊಡ್ಡ ಗಾತ್ರದ ಎರಡು ಸಿಮೆಂಟ್ ಬ್ಲಾಕ್‌ಗಳು ಪತ್ತೆಯಾಗಿದ್ದವು. ಇದನ್ನು ಮೊದಲೇ ಇಲಾಖೆ ಸಿಬಂದಿ ಗಮನಿಸಿ, ರೈಲು ಹಳಿಗಳಿಂದ ತೆರವುಗೊಳಿಸಿದ್ದರಿಂದಾಗಿ ಇಲ್ಲೂ ಭಾರೀ ಅಪಘಾತವೊಂದು ತಪ್ಪಿತ್ತು.
ಉತ್ತರಾಖಂಡದಲ್ಲಿ ಕಿಡಿಗೇಡಿಗಳು ರೈಲನ್ನು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ. ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬ ಇರಿಸಿದ್ದರು. ಉತ್ತರ ಪ್ರದೇಶ ಉತ್ತರಾಖಂಡ ಗಡಿಯಲ್ಲಿರುವ ಬಿಲಾಸ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಪುರ ಗ್ರಾಮದ ರೈಲ್ವೆ ಹಳಿ ಮೇಲೆ ಕಬ್ಬಿಣದ ಕಂಬವೊಂದು ಪತ್ತೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ