Uttar Pradesh: ಅಪಘಾತದಲ್ಲಿ ಗಾಯಗೊಂಡ ಮಗುವಿನ ಸ್ಥಿತಿ ಕಂಡು ಕಣ್ಣೀರು ಹಾಕಿದ ಅಧಿಕಾರಿ, ವಿಡಿಯೋ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 29, 2022 | 12:32 PM

ಲಕ್ನೋ ವಿಭಾಗೀಯ ಆಯುಕ್ತ ರೋಷನ್ ಜೇಕಬ್ ಗಾಯಾಳುಗಳ ಕುಟುಂಬಗಳೊಂದಿಗೆ ಸಂವಹನ ನಡೆಸುವಾಗ ಅವರ ಸ್ಥಿತಿಯನ್ನಯ ಕಂಡು ಕಣ್ಣೀರು ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Uttar Pradesh: ಅಪಘಾತದಲ್ಲಿ ಗಾಯಗೊಂಡ ಮಗುವಿನ ಸ್ಥಿತಿ ಕಂಡು ಕಣ್ಣೀರು ಹಾಕಿದ ಅಧಿಕಾರಿ, ವಿಡಿಯೋ ವೈರಲ್
Lucknow Divisional Commissioner Roshan Jacob
Image Credit source: NDTV
Follow us on

ದೆಹಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಬುಧವಾರ ಟ್ರಕ್ ಮತ್ತು ಬಸ್ ಡಿಕ್ಕಿಯಾಗಿ ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 41 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 12 ಮಂದಿಯನ್ನು ಲಕ್ನೋದ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಗಿದ್ದು, ಇತರರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಲಕ್ನೋ ವಿಭಾಗೀಯ ಆಯುಕ್ತ ರೋಷನ್ ಜೇಕಬ್ ಗಾಯಾಳುಗಳ ಕುಟುಂಬಗಳೊಂದಿಗೆ ಸಂವಹನ ನಡೆಸುವಾಗ ಅವರ ಸ್ಥಿತಿಯನ್ನಯ ಕಂಡು ಕಣ್ಣೀರು ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೀಡಿಯೊದಲ್ಲಿ, ಅಪಘಾತದಲ್ಲಿ ಗಾಯಗೊಂಡ ಮಗುವಿನ ಸ್ಥಿತಿಯನ್ನು ಕಂಡು ಜೇಕಬ್ ಅವರು ಕಣ್ಣೀರು ಹಾಕುತ್ತಾ ಅವರಿಗೆ ಸರಿಯಾದ ಚಿಕಿತ್ಸೆಯನ್ನು ನೀಡಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಇದನ್ನು ಓದಿ: ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು: ಸುಪ್ರೀಂ

ತಿರುವನಂತಪುರದಲ್ಲಿ ಜನಿಸಿದ ಜಾಕೋಬ್ 2004ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಎರಡು ವಾರಗಳ ಹಿಂದೆ ಲಕ್ನೋದ ಜಲಾವೃತ ಬೀದಿಗಳನ್ನು ಪರಿಶೀಲಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾಗ ಅವರು ಎಲ್ಲರ ಗಮನ ಸೆಳೆದಿದ್ದರು. ಯುಪಿ ಪೊಲೀಸರ ಪ್ರಕಾರ, ರಾಷ್ಟ್ರೀಯ ಹೆದ್ದಾರಿ 730 ರ ಐರಾ ಸೇತುವೆಯ ಮೇಲೆ ಈ ಅಪಘಾತ ಸಂಭವಿಸಿದೆ. ಬಸ್ ಧೌರ್ಹರಾದಿಂದ ಲಕ್ನೋಗೆ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಸಂತ್ರಸ್ತರ ಕುಟುಂಬಗಳಿಗೆ ಟ್ವೀಟ್ ಮೂಲಕ ಸಾಂತ್ವನ ಹೇಳಿದರು.

 

Published On - 12:32 pm, Thu, 29 September 22